ತುಮಕೂರು : ಹಿರಿಯ ಪತ್ರಕರ್ತೆ ಹಾಗೂ ತುಮಕೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ವರದಿಗಾರರಾಗಿದ್ದ ಎಸ್.ಭುವನೇಶ್ವರಿ (50)ಅವರು ಬುಧವಾರ ಬೆಳಗಿನ ಜಾವ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಥೈರಾಡ್‍ನಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಥೈರಾಡ್‍ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಶಸ್ತ್ರಚಿಕಿತ್ಸೆ ನಂತರ ಇನ್‍ಫೆಕ್ಷನ್ ಆದ ಕಾರಣ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4.30ರಲ್ಲಿ ನಿಧನ ಹೊಂದಿದರು.
ಹಾಸನದವರಾದ ಭುವನೇಶ್ವರಿ, ಈಟಿವಿಯಲ್ಲಿ ಐದು ವರದಿಗಾರರಾಗಿ ಕೆಲಸ ಮಾಡಿದ್ದರು. ನಂತರ ಅವರು ಹಿಂದೂ ಪತ್ರಿಕೆಗೆ ಸೇರಿಕೊಂಡು ಜಿಲ್ಲಾ ವರದಿಗಾರರಾಗಿಯೂ ತುಮಕೂರಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು.
ಭುವನೇಶ್ವರಿಯವರು ಪತ್ರಕರ್ತೆಯಾಗಿ ಕೆಲ ಜಲಂತ ಸಮಸ್ಯೆಗಳನ್ನು ಮತ್ತು ಶೋಷಿತ ವರ್ಗದ ವರದಿಗಳನ್ನು ದಿಟ್ಟವಾಗಿ ಬರೆದಿದ್ದರು. ಮೊನ್ನೆ ತಾನೆ ಚಿಕ್ಕನಾಯಕನಹಳ್ಳಿಯ ಪತ್ರಕರ್ತ ಮೇರುನಾಥರವರ ಸಾವಿನ ಸುದ್ದಿ ಮರೆಯುವ ಮುನ್ನವೇ ಮತ್ತೊಬ್ಬ ಪತ್ರಕರ್ತರನ್ನು ಕಳೆದುಕೊಂಡಿರುವುದು ತುಂಬಾ ದುಃಖದ ಸಂಗತಿ
ಮೃತರು ಪತಿ ಪ್ರಕಾಶ್ .ಕೆ, ಮಗ ಅಮಿತ್ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೈತ್ರಿನ್ಯೂಸ್ ಸಂತಾಪ:
ಹಿರಿಯ ಪತ್ರಕರ್ತೆ ಭುವನೇಶ್ವರಿ ನಿಧನಕ್ಕೆ ಮೈತ್ರಿನ್ಯೂಸ್ ಪತ್ರಿಕಾಬಳಗ , ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಸಂಪಾದಕರ ಸಂಘ ಮತ್ತು ಪತ್ರಿಕಾಬಳಗ ತೀವ್ರ ಸಂತಾಪ ವ್ಯಕ್ತಪಡಿಸಿವೆ.