ಪತ್ರಕರ್ತ ಸೋರಲಮಾವು ಶ್ರೀಹರ್ಷ ಅವರಿಗೆ ಪಿಎಚ್.ಡಿ. ಪದವಿ  ಪ್ರದಾನ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ (ಜು.8) ನಡೆದ 18ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತ ಸೋರಲಮಾವು ಶ್ರೀಹರ್ಷ ಅವರಿಗೆ ಪಿಎಚ್.ಡಿ. ಪದವಿ  ಪ್ರದಾನ ಮಾಡಲಾಯಿತು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.

ವಿಜಯವಾಣಿ ಪತ್ರಿಕೆ ತುಮಕೂರು ವರದಿಗಾರರಾಗಿ ಕಳೆದ 13 ವರ್ಷಗಳಿಂದ‌ ಸೇವೆ ಸಲ್ಲಿಸುತ್ತಿರುವ ಶ್ರೀಹರ್ಷ ಅವರು ತುಮಕೂರು ವಿವಿ ಸಮಾಜಕಾರ್ಯ ವಿಭಾಗದಲ್ಲಿ ಡಾ.ಬಿ.ರಮೇಶ್ ಅವರ ಮಾರ್ಗದರ್ಶನದಲ್ಲಿ “ಪ್ರಿಂಟ್ ಅಂಡ್ ಡಿಜಿಟಲ್ ಮೀಡಿಯಾ: ಎಕ್ಸ್ ಪ್ಲೋರಿಂಗ್ ಸೋಶಿಯಲ್ ಕನ್ಸರ್ನಸ್ ಅಂಡ್ ಸೋಶಿಯಲ್ ವರ್ಕ್ ಪರ್ಸ್ ಪೆಕ್ಟೀವ್” ವಿಷಯ ಕುರಿತು

 ಮಹಾಪ್ರಬಂಧವನ್ನು ಸಲ್ಲಿಸಿದ್ದರು.

ಚಿಕ್ಕನಾಯಕನಹಳ್ಳಿ ತಾಲೂಕು ಸೋರಲಮಾವು ಗ್ರಾಮದ ನಿವೃತ್ತ ಎಆರ್ ಎಸ್ ಐ ಅಶ್ವಥಯ್ಯ, ಸುಲೋಚನ ಅವರ ಮಗನಾಗಿರುವ  ಶ್ರೀಹರ್ಷ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಯಿತು.

Leave a Reply

Your email address will not be published. Required fields are marked *