ತುಮಕೂರು : ಗುರುಪ್ರಸಾದ್ ಕಂಟಲಗೆರೆಯವರ ಹಾಸ್ಟಲ್ ಅನುಭವ ಕಥನ “ಟ್ರಂಕು-ತಟ್ಟೆ” ಪುಸ್ತಕ ಬಿಡುಗಡೆ ಮತ್ತು ಸಂವಾದವನ್ನು 2023ರ ಜೂನ್ 25ರ ಭಾನುವಾರ ಬೆಳಿಗ್ಗೆ 10-30ಕ್ಕೆ ಟೌನ್ ಹಾಲ್ (ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ)ವೃತ್ತದ ಐ.ಎಂ.ಎ. ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
“ಟ್ರಂಕು-ತಟ್ಟೆ” ಪುಸ್ತಕವನ್ನು ವಿಮರ್ಶಕ ಹಾಗೂ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಬಂಜಗೆರೆ ಜಯಪ್ರಕಾಶ್ ಬಿಡುಗಡೆ ಮಾಡಲಿದ್ದು, ಅಧ್ಯಕ್ಷತೆಯನ್ನು ಡಾ.ಬಸವರಾಜು ವಹಿಸಲಿದ್ದು, ವೇದಿಕೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ವಿಭಾಗದ ಅಧ್ಯಾಪಕರಾದ ಡಾ.ನಿತ್ಯಾನಂದ ಬಿ.ಶೆಟ್ಟಿ, ಸಾಹಿತಿ, ಲೇಖಕರು ಹಾಗೂ ವಿಮರ್ಶಕರಾದ ಡಾ.ರವಿಕುಮಾರ್ ನೀಹ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು, ಹಾಸ್ಟಲ್ ಮೇಲ್ವಿಚಾರಕರಾದ ನಾಗರಾಜಪ್ಪ, ಚಿಂತಕ ವಿರೂಪಾಕ್ಷ ಡ್ಯಾಗೇರಹಳ್ಳಿ, ಮೈತ್ರಿನ್ಯೂಸ್ ಪತ್ರಿಕೆ ಸಂಪಾದಕರಾದ ವೆಂಕಟಾಚಲ.ಹೆಚ್.ವಿ. ಉಪಸ್ಥಿತರಿರುವರು.
“ಟ್ರಂಕು-ತಟ್ಟೆ” ಪುಸ್ತಕ ಸಂವಾದದಲ್ಲಿ ಕಾಂತರಜು ಗೊಲ್ಲರಹಟ್ಟಿ, ಡಾ.ಮೂರ್ತಿ ತಿಮ್ಮನಹಳ್ಳಿ, ಕೊಟ್ಟ ಶಂಕರ್, ಡಾ.ಆಶಾ ಬಗ್ಗನಡು, ಬಿದಲೋಟಿ ರಂಗನಾಥ್, ಭಗತ್ ಸಿಂಗ್ ಕುಂದೂರು ಅವರುಗಳು ಭಾಗವಹಿಸಲಿದ್ದಾರೆ.