ತುಮಕೂರು : ಗುರುಪ್ರಸಾದ್ ಕಂಟಲಗೆರೆಯವರ ಅಟ್ರಾಸಿಟಿ ಕಾದಂಬರಿ ಜೂನ್ 29ರಂದು ಸಂಜೆ 5 ಗಂಟೆಗೆ ತುಮಕೂರಿನ ಕನ್ನಡ ಭವನದಲ್ಲಿ ಬಿಡುಗಡೆಯಾಗಲಿದೆ.
ಸಮಾರಂಭವನ್ನು ಕವಿ ಎಸ್.ಜಿ.ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದು, ಪುಸ್ತಕ ಬಿಡುಗಡೆಯನ್ನು ಪತ್ರಕರ್ತರಾದ ರಘುನಾಥ.ಚ.ಹ. ಮಾಡಲಿದ್ದು, ಅಧ್ಯಕ್ಷತೆಯನ್ನು ಸಾಹಿತಿ ತುಂಬಾಡಿ ರಾಮಯ್ಯನವರು ವಹಿಸಲಿದ್ದು, ಪುಸ್ತಕ ಕುರಿತು ಸಿ.ಜಿ.ಲಕ್ಷ್ಮಿಪತಿ, ಮೈಸೂರಿನ ಚರಿತ ಮಾತನಾಡಲಿದ್ದು, ವೇದಿಕೆಯಲ್ಲಿ ಕ.ಸಾ.ಪ.ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ, ದ.ಸಂ.ಸ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ ಮತ್ತು ಪ್ರಕಾಶಕರಾದ ವೇಣುಪ್ರವೀಣ್ ಕಂಟಲಗೆರೆ ಭಾಗವಹಿಸಿಲಿದ್ದಾರೆ.
ಗಂಗಾಧರ್ ಹಾರ್ಮೋನಿಯಮ್ ಹಾರಾಟದ ಹಾಡುಗಳನ್ನು ಹಾಡಲಿದ್ದು, ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಆದಿಜಂಬೂ ಪ್ರಕಾಶನ ಆಯೋಜಿಸಿವೆ.