ಮಧುಗಿರಿ :ಕೆ.ಎನ್.ರಾಜಣ್ಣನನ್ನು ಗೆಲ್ಲಿಸಿ ಕಳಿಸಿದರೆ, ಕಾಂಗ್ರೆಸ್ ಸರ್ಕಾರ ಬಂದರೆ ಅವರನ್ನು ಮಂತ್ರಿ ಮಾಡುವುದಲ್ಲದೆ, ಮಧುಗಿರಿಗೆ ಕೇಳುವ ಎಲ್ಲಾ ಯೋಜನೆಗಳನ್ನು ಮಂಜೂರು ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಜೀವ గాంధి ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜ್ಯ ಪರ ಮತಯಾಚನೆ ಮಾಡಿ ಮಾತಡಿದರು.
ಕೇಂದ್ರ ಬಿಜೆಪಿ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡದೆ ಆದಾವಿ ಹಾಗೂ ಅಂಬಾನಿ ಸಾಲಮನ್ನಾ ತೀರ್ಥ ಮಾಡುವ ಮೂಲಕ ರೈತಾಪಿ ವರ್ಗಕ್ಕೆ ದ್ರೋಹ ಬಗೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಗ್ಧಾಳಿ ನಡೆಸಿದರು.
ಒಂದೇ ಒಂದು ರೂಪಾಯಿ ಮನ್ನಾ ಸರ್ಕಾರ ನೀಡಿದ ಭರವಸೆ ಈಡೇರಿಸದೆ ಮಾಡಲಿಲ್ಲ. ಆದರೆ, ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ 372 ಸಾವಿರ ಕೋಟಿ ರೈತರ ಸಾಲಮನ್ನಾ, ಮಾಡುವ ಮೂಲಕ ಕಾಂಗ್ರೆಸ್ ರೈತರು ಪರ ಎಂದು ಗುರುತಿಸಿಕೊಂಡಿತು ಆದರೆ ಬಿಜೆಪಿ ಸರ್ಕಾರ ಶೇಕಡ 40% ಲಂಚ ಪಡೆದು ವೀಧಾನಸೌದದ ಪ್ರತಿ ಗೋಡೆಯಲ್ಲೂ ಗೋಡೆಯಲ್ಲೂ ಲಂಚ ಲಂಚ ಲಂಚ ಎನ್ನುತ್ತಿದೆ ಎಂದು ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದರು.
‘ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ 16.400 ಮನೆಗಳನ್ನು ತರಲಾಗಿತ್ತು. ಸರ್ಕಾರಿ ನೌಕರರನ್ನು ಹೊರತುಪಡಿಸಿ, ಎಲ್ಲರಿಗೂ ಬಿಪಿಎಲ್ ಕಾರ್ಡ್ ನೀಡಲಾಗಿತ್ತು. 5 ವರ್ಷದಲ್ಲಿ ಕ್ಷೇತ್ರದಲ್ಲಿ ಎಷ್ಟು ಮನೆಗಳಾಗಿವೆ. ಶಾಸಕರು ಏನು ಕೆಲಸ ಮಾಡಿದ್ದಾರೆ. ಎಂಬುದನ್ನು ಮತದಾರರು ತುಲನೆ ಮಾಡಿದೆ… ಮಾಡಲಿ, ತಾಲ್ಲೂಕಿನಲ್ಲಿ ರೈತರ 2174 ಕೋಟಿ ಸಾಲಮನ್ನಾ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಧುಗಿರಿ. ಜಿಲ್ಲೆಯಾಗಲಿದ್ದು, ಎತ್ತಿನಹೊಳೆ ಯೋಜನೆ ಕಾಮಗಾ ಚುರುಕುಗೊಳಿಸಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಮುಖ್ಯಮಂತ್ರಿಯಾಗಿ ರೈತರ ಸಾಲಮನ್ನಾ, ಅಕ್ಕಿ ವಿತರಣೆ, ಎತ್ತಿನಹೊಳೆ ಯೋಜನೆ, ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಕೊಟ್ಟ ಮಾತು ಈಡೇರಿಸಿದ್ದೇವೆ. ಆದರೆ, ಬಿಜೆಪಿ ಸರ್ಕಾರ ನೀಡಿದ ಭರವಸೆ ಈಡೇರಿಸದೆ ಎಲ್ಲ ಇಲಾಖೆಯಲ್ಲೂ ತಾಂಡವಾಡುತ್ತಿದೆ. ವಿಧಾನಸೌದದ ಗೋಡೆಯಲ್ಲೂ ಲಂಚ, ಲಂಚ ಎನ್ನುತ್ತಿದೆ. ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಮಾತನಾಡಿದರು. ಮಾಜಿ ಶಾಸಕರಾದ ಗಂಗಹನುಮಯ್ಯ, ಎಚ್. ನಿಂಗಪ್ಪ, ಕೆಪಿಸಿಸಿ ಸದಸ್ಯ ಎಂ.ಎಸ್. ಮಲ್ಲಿಕಾರ್ಜುನಯ್ಯ, ಜಿ.ಪಂ.ಮಾಜಿ ಸದಸ್ಯರಾದ ಕೆಂಚಮಾರಯ್ಯ, ನಿಕೇತ್ ರಾಜ್ ಮೌರ್ಯ ಮಾತನಾಡಿದರು.
ಸಭೆಯಲ್ಲಿ ಚೌಡಪ್ಪ, ಕೆಂಚಮಾರಯ್ಯ, ಶಾಂತಲಾ `ರಾಜಣ್ಣ, ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ನಾಗೇಶಬಾಬು, ಜಿ.ಎನ್ ಮೂರ್ತಿ, ಮುಖಂಡರಾದ ಕಲ್ಕಹಳ್ಳಿ ದೇವರಾಜು, ಮನೆಗೆ ಸುವರ್ಣಮ್ಮ, ಇಂದಿರಾ ದೇನಾನಾಯ್ಕ, ಅಧ್ಯಕ್ಷರಾದ ಗೋಪಾಲಯ್ಯ, ಅಧಿನಾರಾಯಣರೆಡ್ಡಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ‘ಹುಲಿಕುಂಟೆ, ಪುರಸಭೆ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಎಂ.ಕೆ.ನಂಜುಂಡಯ್ಯ, ಕೆ.ಪ್ರಕಾಶ್, ಅಯೂಬ್, ಮುಂತಾದವರಿದ್ದರು.