ತುಮಕೂರು:ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೊಬ್ಬರಿ ಬೆಳೆಗಾರರ ಪರವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಇಂದು ಪ್ರತಿಭಟನಾ ಸ್ಥಳಕ್ಕೆ ತಿಪಟೂರು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಭೇಟಿ ನೀಡಿ ಬೆಂಬಲ ಸೂಚಿಸಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ಹಿಂದೆ ಡಿ.ಕೆ.ಶಿವಕುಮಾರ್ ರವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿಗೆ 15 ಸಾವಿರ ನೀಡುತ್ತೇವೆ ಎಂದು ವಾಗ್ದಾನ ನೀಡಿದ್ದರು ಅದು ಹುಸಿಯಾಗಿದೆ,ಕೇಂದ್ರ ಸರ್ಕಾರ ಈ ತಿಂಗಳ 20 ರಿಂದ ನಫೆಡ್ ತೆರೆಯುವ ಮೂಲಕ ಕೊಬ್ಬರಿಯನ್ನು 12000ದಂತೆ ಪಡೆಯುತ್ತದೆ, ರಾಜ್ಯ ಸರ್ಕಾರ ಕೇವಲ 1500 ಬೆಂಬಲ ಬೆಲೆ ಘೋಷಿಸಿದ್ದು ಈಗ ಇರುವ 13500 ರ ಜೊತೆಗೆ ರಾಜ್ಯ ಸರ್ಕಾರ 1500 ಹೆಚ್ಚುವರಿಯಾಗಿ ನೀಡಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ನೀಡಬೇಕು ಎಂದು ಆಗ್ರಹಿಸಿದರು.
ನಫೆಡ್ ಕನಿಷ್ಠ 1 ವರ್ಷ ತೆರೆದು ರೈತರ ಕಷ್ಟಕ್ಕೆ ಸ್ಪಂದಿಸಬೇಕು ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಗಮನ ಹರಿಸಬೇಕು,ಈಗಾಗಲೇ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿರವರು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ ಪರಿಣಾಮ ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚಿಸಿ ನೆಫೆಡ್ ತೆರೆಯುತ್ತಿರುವುದು ಸ್ವಾಗತಾರ್ಹ,ದೊಡ್ಡ ಉಂಡೆ ಕೊಬ್ಬರಿಯನ್ನು ಮಾತ್ರ ಖರೀದಿಸುತ್ತಿದ್ದು,ಚಿಕ್ಕ ಉಂಡೆ ಕೊಬ್ಬರಿಯನ್ನು ತಿರಸ್ಕರಿಸುತ್ತಿದ್ದಾರೆ, ಅದನ್ನು ಸಹ ಖರೀದಿಸಬೇಕು,ಈ ಹಿಂದೆ ಅರಸೀಕೆರೆಯಿಂದ ಬೆಂಗಳೂರುವರೆಗೆ ರೈತರೊಂದಿಗೆ ಪಾದಯಾತ್ರೆ ಮಾಡಿದ್ದೇನೆ,ರೈತರ ಭರವಸೆಗಳು ಹುಸಿಯಾಗಿವೆ,66 ಸಾವಿರ ಮೆಟ್ರಿಕ್ ಟನ್ ಖರೀದಿ ಮಾಡುತ್ತೇವೆ ಎಂದು ಹೇಳಿದ್ದರು ಮಾಡಿಲ್ಲ ಎಂದರು.
ರೈತರ ಒಟ್ಟು 1.5ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಬೇಕು,ನೇರವಾಗಿ ರೈತರಿಂದಲೇ ಕೊಬ್ಬರಿ ಖರೀದಿಸಬೇಕು,ಈ ಹಿಂದೆ ಹಲವಾರು ಅಂಗಡಿ ವರ್ತಕರು ರೈತರ ಹೇಸರೇಳಿಕೋಂಡು ನಫೆಡ್ ಮೂಲಕ ವ್ಯವಹರಿಸಿ ಅವರು ಹಣಗಳಿಸಿದರು,ಫ್ರೂಟ್ಸ್ ತಂತ್ರಾಂಶದಂತೆ ರೈತರ ಬೆರಳಚ್ಚು ಪಡೆದು ಕೊಬ್ಬರಿ ಬೆಳೆಗಾರರಿಂದ ನೇರವಾಗಿ ನಫೆಡ್ ಖರೀದಿಸಬೇಕು,ಮಧ್ಯವರ್ತಿಗಳನ್ನು ದೂರವಿಡಬೇಕು,ಶೀತಲಘಟಕಗಳನ್ನು ತೆರೆದು ಕೊಬ್ಬರಿಯನ್ನು ಸ್ಟಾಕ್ ಮಾಡಬೇಕು,ಒಂದು ವೇಳೆ ಕೊಬ್ಬರಿ ಹೆಚ್ಚಾದರೆ ಅದನ್ನು ಮಕ್ಕಳಿಗೆ ಬೆಲ್ಲ ಮತ್ತು ಕೊಬ್ಬರಿ ನೀಡಬಹುದು ಇದರಿಂದ ಮಕ್ಕಳ ಆರೋಗ್ಯ ಸಹ ವೃದ್ಧಿಸುತ್ತದೆ,ಮಕ್ಕಳ ಬಿಸಿಯೂಟಕ್ಕೆ ಸಹ ಬಳಸಬಹುದು,ಒಂದು ವೇಳೆ ಸರ್ಕಾರ ರೈತರಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು,ರಾಜ್ಯ ಸರ್ಕಾರ ರೈತರ ಸಹನೆಯನ್ನು ಪರೀಕ್ಷಿಸಬಾರದು,ಮೂರು ಫೇಸ್ ವಿದ್ಯುತ್ ನೀಡಿಲ್ಲ,ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ಬೆಳೆ ಇಲ್ಲ,ಜನ-ಜಾನುವಾರುಗಳಿಗೆ ನೀರಿಲ್ಲ,ಮೇವಿಲ್ಲ,ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ,ಆದ್ದರಿಂದ ರಾಜ್ಯ ಸರ್ಕಾರ ಕೊಬ್ಬರಿ ಬೆಳೆದ ರೈತರಿಗೆ ಬೆನ್ನುಲುಬಾಗಿ ನಿಲ್ಲಬೇಕೆಂದು ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಆಂಜಿನಪ್ಪನವರು ಮಾತನಾಡುತ್ತಾ ರೈತರ ಅಹೋರಾತ್ರಿ ಧರಣಿಗೆ ಜಿಲ್ಲಾ ಜೆಡಿಎಸ್ ಪಕ್ಷದ ಬೆಂಬಲ ಸೂಚಿಸುತ್ತದೆ,ರೈತರ ಪರವಾಗಿ ಜೆಡಿಎಸ್ ಸದಾ ಇರುತ್ತದೆ,ಕೇಂದ್ರ ಸರ್ಕಾರ ನಫೆಡ್ ಮೂಲಕ ಕೊಬ್ಬರಿ ಖರೀದಿಸುತ್ತಿರುವುದು ಸ್ವಾಗತಾರ್ಹ ಇದಕ್ಕೆ ಮಾನ್ಯ ಪ್ರಧಾನಿಗಳಿಗೆ ಅಭಿನಂದನೆ,ಸಂಕ್ರಾಂತಿ ಆದ ನಂತರ ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿರವರು ಪ್ರಗತಿಪರ ರೈತರೊಂದಿಗೆ ತೆರಳಿ ಪ್ರಧಾನಿಗಳನ್ನು ಭೇಟಿ ಮಾಡಲಿದ್ದಿ ತೆಂಗು ಮತ್ತು ಕೊಬ್ಬರಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಿಗಳು ಒಪ್ಪಿದ್ದಾರೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೊಬ್ಬರಿ ಬೆಳೆಗಾರರಿಗೆ ಗರಿಷ್ಠ 15 ಸಾವಿರ ಹಣವನ್ನು ನೀಡಿ ಕೊಬ್ಬರಿ ಖರೀದಿಸಿ ರೈತರಿಗೆ ಹೊಸ ಉತ್ಸಾಹ ಮತ್ತು ಚೈತನ್ಯವನ್ನು ತುಂಬಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಧನಂಜಯಾರಾಧ್ಯ, ಲೋಕೇಶ್, ಮಲ್ಲಿಕಾರ್ಜುನಯ್ಯ, ದೇವರಾಜು, ಸಿದ್ದರಾಜು,ಸಂಕರಲಿಂಗಪ್ಪ,ಸಣ್ಣರಾಮಯ್ಯ,ತೋಂಟಾರಾಧ್ಯ,ಲೋಕೇಶ್,ಸಿದ್ಧರಾಮಣ್ಣ,ಉಮೇಶ್,ರಾಜಣ್ಣ,ಚಂದ್ರೇಗೌಡ,ಜಿಲ್ಲಾ ಜೆಡಿಎಸ್ ಸೇವಾದಳದ ಅಧ್ಯಕ್ಷ ಕೆಂಪರಾಜು ಮತ್ತಿತರರು ಉಪಸ್ಥಿತರಿದ್ದರು.