ಕನ್ನಡವನ್ನು ಬಳಸಿ ಉಳಿಸಬೇಕಿದೆ-ಲೇಖಕಿ ಮರಿಯಂಬಿ

ತುಮಕೂರು:ಕನ್ನಡ ಭಾಷೆಯು ಸರಳ ಸುಂದರ .2000 ವರ್ಷಗಳಷ್ಟು ಇತಿಹಾಸ ಹೊಂದಿರುವ ಭಾಷೆ.ದಿನನಿತ್ಯದ ಆಗುಹೋಗುಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧ್ಯವಾದಷ್ಟೂ ನಾವು ಕನ್ನಡವನ್ನು ಬಳಸಿ ಉಳಿಸಬೇಕಿದೆ ಎಂದು ಲೇಖಕಿ ಮರಿಯಂಬಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯು ,ಕೆಪಿಎಸ್ ಎಂಪ್ರೆಸ್ ಬಾಲಕಿಯರ ಹೈಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತ್ತಾ ” ಕನ್ನಡ ಭಾಷಿಕರು ಮುಂಬೈ,ಮದ್ರಾಸ್,ಕೊಡಗು ಹೈದರಾಬಾದ್ ಮೊದಲಾದ ಸಂಸ್ಥಾನಗಳಲ್ಲಿ ಹಂಚಿ ಹೋಗಿದ್ದಂತಹ ಸಂದರ್ಭದಲ್ಲಿ,ರಾ.ಹ ದೇಶಪಾಂಡೆ,ರೊದ್ದ ಶ್ರೀನಿವಾಸ್ ,ಆಲೂರು ವೆಂಕಟರಾಯರು ಮುಂತಾದವರ ನೇತೃತ್ವದಲ್ಲಿ ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದರು.ಈ ಎಲ್ಲದರ ಫಲವಾಗಿ, ಬೇರೆ ಬೇರೆ ಪ್ರಾಂತ್ಯ ಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು 1956 ರ ನವಂಬರ್ 1 ರಂದು ಮೈಸೂರು ರಾಜ್ಯದ ಆಡಳಿತಕ್ಕೆ ಒಳಪಟ್ಟರು.ಮೈಸೂಎಉ ರಾಜ್ಯವು 1973 ರ ನವಂಬರ್ 1 ರಂದು ಕರ್ನಾಟಕ ರಾಜ್ಯ ಎಂದು ಹೆಸರಾಯಿತು ಎಂದರು.

ಕನ್ನಡ ಎಂದರೆ ಬರೀ ಭಾಷೆ ಅಲ್ಲ ,ನಮ್ಮ ಸಂಸ್ಕ್ರತಿ ,ಪರಂಪರೆ ,ಜೀವನ ವಿಧಾನ, ಆಸ್ಮಿತೆ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ ಕನ್ನಡವನ್ನು ಬೆಳೆಸೋಣ .ಎಲ್ಲಾದರೂ ಇರು ,ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪುರವರ ಮಾತಿನಂತೆ ಬದುಕೋಣ ಎಂದು ಹೇಳಿದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು,ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯು ,ರಾಜ್ಯದಲ್ಲಿಯೇ ಮೊದಲು ಪ್ರಾರಂಭವಾದ ಜಿಲ್ಲಾ ಶಾಖೆ.ಲೇಖಕಿಯರ ಸಂಘದಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ .ತುಮಕೂರು ನಗರದ ರಾಜನ್‍ರವರು , ಎಂಪ್ರೆಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ತಮ್ಮ ಸಹೋದರಿಯರಾದ ದಿ|| ಸೋಮಾವತಿ ಮತ್ತು ಇಂದಿರಾ ರವರ ನೆನಪಿನಲ್ಲಿ ಎಂಪ್ರೆಸ್ ಹೈಸ್ಕೂಲ್‍ನಲ್ಲಿ ,2025 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ಪ್ರಾಯೋಜಿಸಿರುವ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮವು ತಮ್ಮಲ್ಲಿ ,ಮುಂದಿನ ಸಾರಿ ತಾನೂ ಬಹುಮಾನ ಪಡೆಯಬೇಕೆಂಬ ಛಲ ಮೂಡಿಸಿ ,ಚೆನ್ನಾಗಿ ಓದಲು ಉತ್ಸಾಹ ತುಂಬಲಿ ಎಂದು ತಿಳಿಸಿದರು.

ಎಂಪ್ರೆಸ್ ಶಾಲೆಯ ಉಪ ಪ್ರಾಂಶುಪಾಲರಾದ ಮಂಜುಳಾ ರವರು, ರಾಜನ್ ರವರ ಕನ್ನಡ ಪ್ರೇಮವನ್ನು ಶ್ಲಾಘಿಸಿ ,ತಮ್ಮ ಶಾಲೆಯ ವಿದ್ಯಾರ್ಥಿಗಳ ಬಗೆಗಿನ ಅವರ ಕಾಳಜಿಯನ್ನು, ಸಹೋದರಿಯರ ಮೇಲಿನ ಪ್ರೀತಿಯನ್ನು ಕೊಂಡಾಡಿದರು.2025 ನೇಸಾಲಿನಲ್ಲಿ ,ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶಿವನಾಗಮ್ಮ ,ಉಮಾ .ಎಚ್.ಕೆ ಮತ್ತು ಅಜ್ಮತ್ ಉನ್ನೀಸಾ ರವರಿಗೆ,ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಯಲ್ಲಮ್ಮ ಮತ್ತು ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಯಲ್ಲಮ್ಮ ರವರಿಗೆ ,ತಲಾ 1000 ದಂತೆ ಒಟ್ಟು ರೂ 5000 ನಗದು ಬಹುಮಾನ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಸಿ.ಎ.ಇಂದಿರಾ ,ಖಜಾಂಚಿ ಸಿ.ಎಲ್.ಸುನಂದಮ್ಮ ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ಸಿ.ಎನ್ .ಸುಗುಣಾ ದೇವಿ, ಸದಸ್ಯರಾದ ಸುಮಾ ಪ್ರಸನ್ನ ,ಅಕ್ಕಮ್ಮ ಮತ್ತು ಲಲಿತಾ ಮಲ್ಲಪ್ಪ,ರಾಣಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *