ನವದೆಹಲಿ : ಅಬಕಾರಿ ನೀತಿ ಹಗರಣ ಆರೋಪ ಪ್ರಕರಣದಲ್ಲಿ ಇಡಿ, ಸಿಬಿಐ ಬಂಧನದ ಬಳಿಕ ಜಾಮೀನಿನ ಮೇಲೆ ಹೊರ ಬಂದಿರುವ ಅರವಿಂದ್ ಕೇಜ್ರಿವಾಲ್, ದೆಹಲಿಯ ಆಪ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.
ಇನ್ನೆರಡು ದಿನಗಳಲ್ಲಿ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಜನರ ಬಳಿ ಹೋಗಿ ಮತ್ತೆ ಜನಾಶಿರ್ವಾದ ಪಡೆದು ಅಧಿಕಾರಕ್ಕೆ ಬರುತ್ತೇನೆ. ಕೇಜ್ರಿವಾಲ್ ಪ್ರಾಮಾಣಿಕವಾಗಿದ್ದರೆ ಮತ್ತೆ ಆಪ್ ಗೆ ಮತ ಹಾಕಿ
ಗೆಲ್ಲಿಸುತ್ತಾರೆ ಎಂದರು.
ನವೆಂಬರ್ ನಲ್ಲಿ ದೆಹಲಿ ವಿಧಾನಸಭೆ ಚುನಾವಣೆಗೆ ನಡೆಸಲೆಂದು ಒತ್ತಾಯ ಮಾಡಿದ ಅವರು, ಆರೋಪಗಳನ್ನು ಹೊತ್ತು ಸಿಎಂ ಸ್ಥಾನದಲ್ಲಿ ಮುಂದುವರೆಯಲ್ಲ.
ನಾನು ಪ್ರಾಮಾಣಿಕವಾಗಿದ್ದರೆ ಮಾತ್ರ ನನಗೆ ಆಶಿರ್ವಾದ ಮಾಡಿ ಮತ್ತೆ ಆಯ್ಕೆ ಮಾಡಿ ಎಂದು ಹೇಳಿದರು.