ತುಮಕೂರು: ಯುವತಿ ಮೇಲೆ ಅತ್ಯಾಚಾರವೆಸಗಲು ಸಹಾಯ ಮಾಡಿದ ಉಮೇಶನಾಯ್ಕನ ಸ್ನೇಹಿತ ಮುತ್ತುರಾಜುವನ್ನು ಕೊರಟಗೆರೆ ಪೆÇಲೀಸರು ಬಂಧಿಸಿದ್ದಾರೆ.
ಮೈತ್ರಿ ನ್ಯೂಸ್ ವರದಿ ಮಾಡಿದ್ದ ಹಿನ್ನಲೆಯಲ್ಲಿ “ಯುವತಿ ಮೇಲೆ ಅತ್ಯಾಚಾರವೆಸಗಿ ಆತ್ಮಹತ್ಯೆ ಗೆ ಕಾರಣನಾದ ಆರೋಪಿಯನ್ನು ಬಚಾವ್ ಮಾಡುತ್ತಿರುವ ಕೊರಟಗೆರೆ ಪೆÇಲೀಸರು” ಎಂಬ ಸುದ್ದಿಯ ಹಿನ್ನಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳು ಕೊರಟಗೆರೆ ಪೆÇಲೀಸ್ ಠಾಣೆಗೆ ಭೇಟಿ ನೀಡಿ, ಯುವತಿಯ ತಂದೆ ತಾಯಿ ಹೇಳಿಕೆ ಪಡೆದು, ಅತ್ಯಾಚಾರ ವೆಸಗಿ ಆತ್ಮಹತ್ಯೆ ಗೆ ಕಾರಣನಾದ ಉಮೇಶನಾಯ್ಕನನ್ನು ಬಂಧಿಸಲು ಆದೇಶಿಸಿದ ಹಿನ್ನಲೆಯಲ್ಲಿ ಉಮೇಶ್‍ನಾಯ್ಕನನ್ನು ಬಂಧಿಸಿ, ಜೈಲಿಗೆ ಕಳಿಸಿದ್ದರು.
ಉಮೇಶನಾಯ್ಕನು ಅತ್ಯಾಚಾರವೆಸಗಲು ಸಹಾಯ ಮಾಡಿದ ಮುತ್ತುರಾಜು ಎಂಬುವನು ತಲೆ ಮರೆಸಿಕೊಂಡಿದ್ದನು, ಈತನ ಪತ್ತೆಗೆ ಮುಂದಾದ ಕೊರಟಗೆರೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮುತ್ತುರಾಜು ಡಾಬಸ್‍ಪೇಟೆಯಲ್ಲಿ ಇರುವುದನ್ನು ಪತ್ತೆ ಹಚ್ಚಿ, ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಯುವತಿಯ ಶವವನ್ನು ಸುಟ್ಟು ಹಾಕುವಂತೆ ತಂದೆ-ತಾಯಿಗಳಿಗೆ ಒತ್ತಡ ಹೇರಿ, ಉಮೇಶನಾಯ್ಕನನ್ನು ಬಚಾವ್ ಮಾಡಲು ಪ್ರಯತ್ನ ಪಟ್ಟ ಪೇದೆಗಳಾದ ಮೋಹನ್‍ಕುಮಾರ್ ಮತ್ತು ಜಯಪ್ರಕಾಶ್ ಅವರ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ಕ್ರಮಕೈಗಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಪೊಲೀಸ್ ಪೇದೆ ಮೋಹನ್‍ಕುಮಾರ್ ವೈದ್ಯರ ಮೇಲೂ ಪ್ರಭಾವ ಬೀರಿ ಸಹಜ ಸಾವು ಎನ್ನುವಂತೆ ವೈದ್ಯಕೀಯ ವರದಿ ಬರುವಂತೆ ನೋಡಿಕೊಂಡಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಹಾಗೂ ಯುವತಿಯ ತಂದೆ-ತಾಯಿಗಳು ಹೇಳಿದಂತೆ ಎಫ್‍ಐಆರ್ ದಾಖಲಿಸದೆ ಸುಮಾರು ಎರಡು ತಿಂಗಳು ಯುವತಿಯ ತಂದೆ-ತಾಯಿಯರನ್ನು ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡಿದ ಮೋಹನ್‍ಕುಮಾರ್, ಆಗಾಗ್ಗೆ ತಂದೆ-ತಾಯಿಗಳಿಗೆ ಯುವತಿ ಸಾವಿಗೆ ನೀವೆ ಕಾರಣ ಎಂದು ಕೇಸು ದಾಖಲಿಸುವುದಾಗಿ ಬೆದರಿಕೆ ಮತ್ತು ಭಯ ಹುಟ್ಟಿಸುತ್ತಿದ್ದ ಎನ್ನಲಾಗಿದೆ.
ಈ ರೀತಿ ಯುವತಿಯ ತಂದೆ-ತಾಯಿಯರಿಗೆ ಬೆದರಿಕೆ ಒಡ್ಡಿದಲ್ಲದೆ, ದೂರನ್ನು ದಾಖಲಿಸಿಕೊಳ್ಳದೆ ಸತಾಯಿಸಿದ ಪೇದೆ ಮೋಹನ್‍ಕುಮಾರ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಚಾರಣೆಗೆ ಒಳಪಡಿಸಿ, ಕಾನೂನು ಕ್ರಮ ಕೈಗೊಳ್ಳದೆ ಇರುವುದರಿಂದ ಪೇದೆ ಮೋಹನ್‍ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆಯೇ ಪ್ರಭಾವ ಬೀರಿದ್ದಾನೆಯೇ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ.
ಯುವತಿಯ ತಂದೆ-ತಾಯಿಯರು ಮಗಳನ್ನು ಕಳೆದುಕೊಂಡು ದುಃಖದಲ್ಲಿರುವಂತಹವರಿಗೆ ನ್ಯಾಯ ಒದಗಿಸಿ ಕೊಡಬೇಕಾದ ಇಲಾಖೆಯ ಪೊಲೀಸ್ ಪೇದೆಯೊಬ್ಬ ಅವರಿಗೆ ಕಿರುಕುಳ ನೀಡಿದ್ದಲದೆ ನಿಮ್ಮ ಮೇಲೆಯೇ ಕೇಸು ದಾಖಲಿಸುತ್ತೇನೆ ಎಂದು ದೌರ್ಜನ್ಯದ ಮಾತುಗಳನ್ನಾಡಿದ, ಯುವತಿಯರ ತಂದೆ-ತಾಯಿಗಳು ಮಾನಸಿಕವಾಗಿ ಕುಗ್ಗಿ ರಾತ್ರಿಯೆಲ್ಲಾ ಕಣ್ಣೀರು ಹಾಕುವಂತೆ ಮಾಡಿದ ಪೇದೆಯನ್ನು ರಕ್ಷಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಆತ್ಮಹತ್ಯೆ ಮಾಡಿಕೊಂಡ ಯುವತಿಗೆ ನ್ಯಾಯ ಒದಗಿಸುವುದಕ್ಕಿಂತ ತಮ್ಮ ಇಲಾಖೆಯ ಪೊಲೀಸ್ ಪೇದೆಯ ರಕ್ಷಣೆಯೇ ಮುಖ್ಯವಾಯಿತೇ?
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೈತ್ರಿನ್ಯೂಸ್‍ನೊಂದಿಗೆ ಮಾತನಾಡಿ ಅತ್ಯಾಚಾರ ಯುವತಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನೇ ಖುದ್ದಾಗಿ ಕೊರಟಗೆರೆ ಪೊಲೀಸ್ ಠಾಣೆಗೆ ಭೇಟಿ, ತನಿಖೆಯನ್ನು ಚುರುಕುಗೊಳಿಸಿ ಪ್ರಕರಣಕ್ಕೆ ಕಾರಣವಾದವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದೇವೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರವೆಸಗಿ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯ ತಂದೆ-ತಾಯಿಯವರಿಗೆ ನ್ಯಾಯ ಸಿಗುವ ದೃಷ್ಠಿಯಿಂದ ಸಮಗ್ರ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್‍ಕುಮಾರ್ ಶಹಪುರ್ ವಾಡ್ ಮೈತ್ರಿನ್ಯೂಸ್‍ಗೆ ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಚ್ಚಿನ ಮಾಹಿತಿಗೆ ಕೊರಟಗೆರೆ ಸಿಪಿಐ ಸುರೇಶಗೌಡ ಅವರನ್ನು ಸಂಪರ್ಕಿಸಲು ಹಲವಾರು ಸಲ ಪ್ರಯತ್ನಿಸಿದಾಗ, ಸಿಪಿಐ ಅವರು ಪೋನ್ ಕರೆ ಸ್ವೀಕರಿಸಲಿಲ್ಲ.
-ವೆಂಕಟಾಚಲ.ಹೆಚ್.ವಿ.