ತುಮಕೂರು : ಕುಣಿಗಲ್‌ಗೆ ಎಕ್ಸ್ಪ್ರೆಸ್ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗುವುದಕ್ಕೆ ಪರ-ವಿರೋಧದ ವಾಗ್ಧಾಳಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಮತ್ತು ಕುಣಿಗಲ್ ಶಾಸಕ ಡಾ.ರಂಗನಾಥ ಮಧ್ಯೆ ಇಂದು ನಡೆದ ಕೆಡಿಪಿ ಸಭೆಯಲ್ಲಿ ನಡೆಯಿತು.
ಜಿಲ್ಲೆಗೆ ಹೇಮಾವತಿ ನೀರು ಹರಿದ ಬಗ್ಗೆ ಮಾಹಿತಿ ಕೇಳುತ್ತಿದ್ದಾಗ ಕುಣಿಗಲ್ ಶಾಸಕ ಡಾ.ರಂಗನಾಥ ಅವರು ನಾಲೆಯಲ್ಲಿ ನೀರು ಹರಿಯುವುದರಿಂದ ಮೋಟಾರ್ ಮತ್ತು ಪೈಪ್‌ಗಳ ಮೂಲಕ ನೀರು ಹಾಯಸಿಕೊಳ್ಳುವುದರಿಂದ ಕುಣಿಗಲ್‌ಗೆ ಎಕ್ಸ್ಪ್ರೆಸ್ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗುವ ಕಾಮಗಾರಿ ಈ ಹಿಂದಿನ ಸರ್ಕಾರ ತಡೆ ಹಿಡಿದಿದ್ದು, ಅದಕ್ಕೆ ಚಾಲನೆ ನೀಡುವಂತೆ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರಲ್ಲಿ ಮನವಿ ಮಾಡಿದರು.
ಮಧ್ಯ ಪ್ರವೇಶಿಸಿದ ತುಮಕೂರು ಗ್ರಾಮಾಂತರ ಶಾಸಕರಾದ ಬಿ.ಸುರೇಶಗೌಡ ಅವರು, ಎಕ್ಸ್ಪ್ರೆಸ್ ಪೈಪ್‌ಲೈನ್ ಮೂಲಕ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ, ನಾಲೆಯ ಮೂಲಕವೇ ಹರಿಯಬೇಕು, ಏತ ನೀರಾವರಿಗೆ ನೀರು ಕೊಡಲೇ ಬೇಕು, ಎಕ್ಸ್ಪ್ರೆಸ್ ಪೈಪ್‌ಲೈನ್ ಮೂಲಕ ನೀರು ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗುವ ಹುನ್ನಾರವಾಗಿದೆ ಎಂದು ಏರಿದ ಧ್ವನಿಯಲ್ಲಿ ಪ್ರತಿಭಟಿಸಿ, ಯಾವುದೇ ಕಾರಣಕ್ಕೂ ಪೈಪ್‌ಲೈನ್ ಮೂಲಕ ನೀರು ತೆಗದುಕೊಂಡು ಹೋಗಲು ಬಿಡುವುದಿಲ್ಲ ಎಂದರು.