ಬೆಂಗಳೂರು : ಪ್ರೊ.ಬರಗೂರು ರಾಮಚಂದ್ರಪ್ಪ ಸಂಪಾದಕತ್ವದ ಆಯ್ದ ಲೇಖನಗಳ ಸಂಕಲನ ಕುವೆಂಪು ವಿಚಾರಕ್ರಾತಿ ಪುಸ್ತಕ ಜನಾರ್ಪಣೆಯು ಜುಲೈ 5ರ ಶನಿವಾರ ಸಂಜೆ 5ಗಂಟೆಗೆ ಬೆಂಗಳೂರಿನ ಕಬ್ಬನ್ ಪಾರ್ಕ್‍ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಎನ್‍ಜಿಓ ಸಭಾಂಗಣದಲ್ಲಿ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪುಸ್ತಕ ಜನಾರ್ಪಣೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ವಿದ್ವಾಂಸರಾದ ನಾಡೋಜ ಡಾ.ಹಂ.ಪ.ನಾಗರಾಜು, ಹೈಕೋರ್ಟಿನ ವಿಶ್ರಾಂತ ನ್ಯಾಯಾಧೀಶರಾದ ಜಸ್ಟೀಸ್ ಹೆಚ್.ಎನ್.ನಾಗಮೋಹನ್ ದಾಸ್ ಭಾಗವಹಿಸಲಿದ್ದು, ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ, ಕುವೆಂಪುರವರ ಪುತ್ರಿ ಶ್ರೀಮತಿ ತಾರಿಣಿ ಚಿದಾನಂದಗೌಡ ಮತ್ತು ಲೇಖಕರು ಹಾಗೂ ಕೃತಿಯ ಸಂಪಾದಕರಾದ ಪ್ರೊ.ಬರಗೂರು ರಾಮಚಂದ್ರಪ್ಪ ಉಪಸ್ಥಿತರಿರುವರು.
ಸಾಯಂಕಾಲ 4ಗಂಟೆಗೆ ಡಾ.ಶಮಿತಾ ಮಲ್ನಾಡ್ ಮತ್ತು ತಂಡವರಿಂದ ಕುವೆಂಪುರವರ ಗೀತೆಗಳ ಗಾಯನ ಏರ್ಪಡಿಸಲಾಗಿದೆ.