ಎತ್ತಿನಹೊಳೆ ನಾಲಾ ಯೋಜನೆಗೆ ಭೂ ಸ್ವಾಧೀನ,ಕುಂಟೆಗೆ 75ಸಾವಿರ ನೀಡುವಂತೆ ರೈತರ ಒತ್ತಾಯ

ತುಮಕೂರು : ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ವ್ಯಾಪ್ತಿಯ ಬೈರಾಪುg,À ಮಲ್ಲೇನಹಳ್ಳಿ, ಮಾಡ್ಲೆಹಳ್ಳಿ, ಗ್ರಾಮಗಳ ಸುಮಾರು 80ಕ್ಕೂ ಹೆಚ್ಚು ಎಕ್ಕರೆ ಜಮೀನು ಎತ್ತಿನಹೊಳೆ ನಾಲೆ ನಿರ್ಮಾಣಕ್ಕೆ ಭೂಸ್ವಾಧೀನವಾಗಿದ್ದು, ಈ ಜಮೀನುಗಳ ಕುಂಟೆಗೆ ಗರಿಷ್ಠ 75,000 ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತರು, ಸರ್ಕಾರ ನೀರಾವರಿ ನೆಲೆಮೂಲಗಳನ್ನ ಅಭಿವೃದ್ಧಿಗೊಳಿಸುವ ಸಲುವಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಭಾಗಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದರ ನಾಲಾ ನಿರ್ಮಾಣ ಕಾರ್ಯವು ಇದೀಗ ಅನೇಕ ಕಡೆಗಳಲ್ಲಿ ಅಭಿವೃದ್ಧಿಗೊಳ್ಳುತ್ತಾ ಇದ್ದು, ಕಿಬ್ಬನಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಎತ್ತಿನ ಹೊಳೆಗೆ ಭೂಸ್ವಾಧೀನವಾಗಿರುವ ಜಮೀನುಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಮಲ್ಲೇನಹಳ್ಳಿ ರೈತ ಮುಖಂಡ ಕಾಂತರಾಜು ಬಿ.ಬಿ. ಮಾತನಾಡಿ ಕಿಬ್ಬನಹಳ್ಳಿ ಹೋಬಳಿ ವ್ಯಾಪ್ತಿಯ ಬೈರಾಪುರ, ಮಲ್ಲೇನಹಳ್ಳಿ, ಮಾಡ್ಲೆಹಳ್ಳಿ ಗ್ರಾಮಗಳ ಜಮೀನುಗಳು ಎತ್ತಿನಹೊಳೆಗೆ ಭೂಸ್ವಾಧೀನವಾಗಿದ್ದು, ಇದರಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಗಿಡ, ಮರ, ಕೊಳವೆಬಾವಿ ಸೇರಿದಂತೆ ಅನೇಕ ಖನಿಜ ಸಂಪತ್ತು ಇದ್ದು ಇದಕ್ಕೆಲ್ಲ ಪರಿಹಾರ ನೀಡುವುದಾಗಿ ತಿಳಿಸಿದ ಎತ್ತಿನಹೊಳೆ ನಾಲಾ ವಲಯದ ಅಧಿಕಾರಿಗಳು ಇವರಿಗೂ ಯಾವುದೇ ರೀತಿಯ ಪರಿಹಾರ ನೀಡದೆ 2018 ರಲ್ಲಿ ನಿರ್ಮಾಣ ಹಂತದಿಂದ ಹಿಡಿದು ಎತ್ತಿನಹೊಳೆ ನಾಲಾವಲಯದಲ್ಲಿ ನೀರು ಹರಿಯುವ ತನಕ ಪರಿಹಾರ ನೀಡುವುದಾಗಿ ತಿಳಿಸಿದ್ದು ಈ ಪರಿಹಾರದ ರೂಪದ ಹಣವನ್ನು ನಿಗದಿಪಡಿಸಿರುವುದಕ್ಕಿಂತ ಅಂದರೆ ಹೆಚ್ಚಾಗಿ ಒಂದು ಕುಂಟೆಗೆ 75,000 ರೂ. ಗಳನ್ನ ನೀಡಬೇಕು ಎಂದು ಒತ್ತಾಯಿಸಿದರು.

ನಮ್ಮ ಜಮೀನುಗಳ ಸುತ್ತಮುತ್ತಲಿರುವ ಬೇರೆ ಇತರೆ ರೈತರ ಜಮೀನುಗಳಿಗೆ ಗರಿಷ್ಠ ಬೆಲೆ ನಿಗದಿಪಡಿಸಿದ್ದು ಆದರೆ ಎತ್ತಿನಹೊಳೆ ಯೋಜನೆಗೆ ಹೋಗಿರುವ ಜಮೀನುಗಳಿಗೆ ಕನಿಷ್ಠ ಬೆಲೆ ನೀಡುವುದಾಗಿ ಅವಾಡ್ರ್ಸ್ ನಿಡಿದ್ದಾರೆ ಇದರಿಂದಾಗಿ ರೈತರಿಗೆ ತುಂಬಾ ನಷ್ಟವುಂಟಾಗಲಿದ್ದು, ಈ ಭಾಗದಲ್ಲಿ ಹೆದ್ದಾರಿ ರಸ್ತೆ ಹಾದು ಹೋಗಿರುವ ರೈತರಿಗೆ ಒಂದು ಕುಂಟೆಗೆ ಲಕ್ಷಕ್ಕೂ ಹೆಚ್ಚು ಪರಿಹಾರ ಲಭಿಸಿದ್ದು ನಮಗೆ ಕೇವಲ 75,000 ಪರಿಹಾರ ನೀಡಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ರೈತ ಮುಖಂಡ ಬೈರಾಪುರದ ಬಿ.ಕೆ. ಶೇಖರಯ್ಯ ಮಾತನಾಡಿ ನಮ್ಮ ಭಾಗದಲ್ಲಿ ಎತ್ತಿನಹೊಳೆ ನಾಲೆ ಹಾದು ಹೋಗುವುದು ನಮಗೆ ಅನುಕೂಲವಾಗುತ್ತದೆ ಎಂದು ಅಂದು ರೈತರೆಲ್ಲರೂ ತೀರ್ಮಾನಗೊಳಿಸಿ 2019-20 ರಲ್ಲಿ ಸಾಗುವಳಿಗೆ ಬಂದಿದ್ದ ಭೂಮಿಯನ್ನ ಎತ್ತಿನಹೊಳೆ ನಾಲೆ ನಿರ್ಮಾಣಕ್ಕೆ ನೀಡಿದ್ದೆವು, ಅಂದಿಗೆ ತೋಟಗಾರಿಕೆ ಇಲಾಖೆಯವರು ಮೂರು ವರ್ಷದ ಗಿಡಮರಗಳನ್ನು ಸಸಿಗಳೆಂದು ನಮೂದು ಮಾಡಿದ್ದಾರೆ ಇಂದಿಗೆ ಆ ಮರಗಳಿಗೆ 9ವರ್ಷ ತುಂಬಿದ್ದು ಫಲ ನೀಡುವ ಮರಗಳಾಗಿರುತ್ತಿದ್ದವು ಆದರೆ ಅಧಿಕಾರಿಗಳ ಪರಿಹಾರ ನೋಡಿದರೆ ರೈತರು ಕಂಗಾಲಾಗುವ ಸ್ಥಿತಿ ಬಂದಾಗಿದೆ ಈವರೆಗೂ ನೀಡಲಾಗುವ ಪರಿಹಾರವನ್ನು ಕೂಡ ನೀಡಿಲ್ಲ ಅಧಿಕಾರಿಗಳ ಮಾಹಿತಿ ಪ್ರಕಾರ ಇದೀಗ ಅಂದಿನ ನಮೂದು ಮಾಡಿರುವ ಸಸಿಗಳ ಧರವನ್ನು ಮರಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ, ಹಾಗಾಗಿ ನಮಗೆ ಕುಂಟೆಗೆ 75,000 ಸೂಕ್ತ ಪರಿಹಾರ ನೀಡಬೇಕು ಇಲ್ಲವಾದರೆ ನಾಲೆಯ ಪಕ್ಕದಲ್ಲಿ ಇತರೆ ಜಮೀನುಗಳನ್ನು ಖರೀದಿಸಿ ನಮಗೆ ಹಸ್ತಾಂತರ ಗೊಳಿಸಬೇಕು ಇಲ್ಲವಾದರೆ ಹೋರಾಟದ ಹಾದಿಯನ್ನ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಬಸವರಾಜು ಮಾತನಾಡಿ 18 ಜಿಲ್ಲೆ 126 ತಾಲ್ಲೂಕುಗಳಿಗೆ ಅನುಕೂಲವಾಗಲೆಂದು ನೀರಾವರಿ ಯೋಜನೆ ಒಂದನ್ನ ರೂಪಿಸಲಾಗಿದೆ ರೈತರಿಗೆ ಒಳ್ಳೆಯದು ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಯೋಚನೆ ಮಾಡಿರುವ ಈ ಯೋಜನೆಗಳು ಇನ್ನೊಬ್ಬರ ರೈತರ ಬಾಳಿಗೆ ಕಷ್ಟಕರವಾಗಿದ್ದು ಈವರೆಗೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಸಹಾಯಕ್ಕೆ ನಿಂತಿಲ್ಲ ನಮ್ಮ ಭಾಗದ ಶಾಸಕರು ಅಂದು ಎತ್ತಿನಹೊಳೆ ನಾಲೆ ಯೋಜನೆಗೆ ಜಮೀನುಗಳನ್ನ ನೀಡಬೇಡಿ ಎಂದು ತಿಳಿಸಿ, ನಂತರ ನಾಲೆ ನಿರ್ಮಾಣಕ್ಕೆ ಜಮೀನುಗಳನ್ನು ಬಿಟ್ಟು ಕೊಡುವಂತೆ ನೋಟಿಸು ಹೊರಡಿಸಿದ್ದರು ಆದರೆ ಈವರೆಗೂ ನಮ್ಮ ಶಾಸಕರು ಪರಿಹಾರ ಕಲ್ಪಿಸುವಲ್ಲಿ ಅಥವಾ ಕೊಡಿಸುವಲ್ಲಿ ವಿಫಲರಾಗಿದ್ದು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳು ಬೈರಾಪುರ ಮಲ್ಲೇನಹಳ್ಳಿ, ಮಡ್ಲೆಹಳ್ಳಿ ಗ್ರಾಮದ ರೈತರ ಸಮಸ್ಯೆಗಳನ್ನು ಅರಿತು ಪ್ರತಿ ಕುಂಟೆಗೆ 75,000 ಪರಿಹಾರ ಧನವನ್ನ ನೀಡಬೇಕು ಎಂದು ಈ ವೇಳೆ ಅವರು ಒತ್ತಾಯಿಸಿದರು..

ಪತ್ರಿಕಾಗೋಷ್ಠಿಯಲ್ಲಿ ನಾಗೇಶ್, ಶ್ರೀಧರ, ತಿಮ್ಮೇಗೌಡ, ಮೋಹನ, ರೇವಣಸಿದ್ದಯ್ಯ, ದೊಡ್ಡೇಗೌಡ, ನಾಗರಾಜು, ಚನ್ನಬಸಪ್ಪ, ವಿರೂಪಾಕ್ಷ, ನಾಗಣ್ಣ, ಈರಣ್ಣ, ಸಣ್ಣಕೆಂಪಯ್ಯ, ಜಗದೀಶ್ ಸೇರಿದಂತೆ ಇತರೆ ರೈತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *