ಭೂಹಗರಣ ಗುಬ್ಬಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ತೀವ್ರ ವಿಚಾರಣೆ
ಹಗರಣದ ಪ್ರಭಾವಿ ರಾಜಕಾರಣಿಗಳ ಹೆಸರು ಬಯಲಾಗುವುದೆ?

ಗುಬ್ಬಿ : 450 ಎಕರೆ ಭೂಹಗರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಸಂಬಂಧಿಕರೆ ಭಾಗಿಯಾಗಿರುವ ಹಿನ್ನಲೆಯಲ್ಲಿ ಅಧ್ಯಕ್ಷರಾದ ಅಣ್ಣಪ್ಪಸ್ವಾಮಿಯವರನ್ನು ತೀವ್ರ ವಿಚಾರಣೆಗೆ ಗುರಿ ಪಡಿಸಲಾಗಿದೆ.

ಗುಬ್ಬಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಿ.ಎನ್.ಅಣ್ಣಪ್ಪಸ್ವಾಮಿಯ ತಾಯಿ ಮತ್ತು ಅಕ್ಕನ ಹೆಸರಿನಲ್ಲಿ ಭೂಹಗರಣ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ತಿಪಟೂರು ವಿಭಾಗದ ಎಎಸ್ಪಿ ನೇತೃತ್ವದ ತನಿಖಾ ತಂಡ 6ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಭೂ ಹಗರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಿ.ಎನ್.ಅಣ್ಣಪ್ಪಸ್ವಾಮ್ರಿ ಅಕ್ಕ ಶಾಂತಮ್ಮ ಬಿನ್ ನಾರಾಯಣಪ್ಪ ಯಕ್ಕಲಕಟ್ಟೆ ಗ್ರಾಮದ ಸರ್ವೆ ನಂ.31ರ ರಲ್ಲಿ 4ಎಕರೆ, ಮತ್ತು ತಾಯಿ ಗೌರಮ್ಮ ಕೋಂ ನಾರಾಯಣಪ್ಪ ಹೆಸರಿನಲ್ಲಿ ಯಕ್ಕಲಕಟ್ಟೆ ಗ್ರಾಮದ ಸರ್ವೆ ನಂ.31ರ ರಲ್ಲಿ 4ಎಕರೆ 2ಗುಂಟೆಯ ಜಮೀನನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ಅಣ್ಣಪ್ಪಸ್ವಾಮಿ ಜಮೀನನ್ನು ಪಡೆಯಲು ಹೆಸರು ಸೇರಿಸಲು ಮಧ್ಯವರ್ತಿಯಾಗಿ ಹಣ ಪಡೆದು ಹಲವರ ಹೆಸರುಗಳನ್ನು ಸೇರಿಸಿದ್ದಾರೆನ್ನಲಾಗುತ್ತಿದ್ದು, ಈ ಹಗರಣದಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳು ಇದ್ದಾರೆ ಎನ್ನಲಾಗುತ್ತಿದೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಕರುನಾಡ ವಿಜಯಸೇನೆಯ ಗುಬ್ಬಿ ತಾಲ್ಲೂಕು ಅಧ್ಯಕ್ಷ ವಿನಯ್, ಲೇಔಟ್ ವಿನಯ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಅಣ್ಣಪ್ಪಸ್ವಾಮಿ ತಂಗಿ ಶಾಂತಮ್ಮ ಮತ್ತು ಗುಬ್ಬಿಯಲ್ಲಿರುವ ಕೆ.ಎನ್.ರಾಜಣ್ಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ದೇವರಾಜು ಮತ್ತು ಲೇಔಟ್ ವಿನಯ್ ಅವರ ತಂದೆಯನ್ನು 450 ಎಕರೆ ಭೂಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗುರುವಾರ ಸಂಜೆ ಕರೆದುಕೊಂಡು ಹೋಗಿದ್ದಾರೆ.

ಆದರೆ ಮಧ್ಯರಾತ್ರಿ ಪಟ್ಟಣಪಂಚಾಯತಿ ಅಧ್ಯಕ್ಷರಾದ ಅಣ್ಣಪ್ಪಸ್ವಾಮಿಯವರನ್ನು ಮಾತ್ರ ಬಿಡುಗಡೆ ಮಾಡಿದ್ದು, ಉಳಿದವರನ್ನು ಇನ್ನೂ ವಿಚಾರಣೆ ಬಾಕಿ ಇದೆ ಎಂದು ತನಿಖಾ ತಂಡ ಇಟ್ಟುಕೊಂಡಿದೆ.

ಅಣ್ಣಪ್ಪಸ್ವಾಮಿಯನ್ನು ಬಿಡಿಗಡೆಯನ್ನು ವಿರೋಧಿಸಿ ಕರುನಾಡ ವಿಜಯಸೇನೆಯ ಗುಬ್ಬಿ ತಾಲ್ಲೂಕು ಅಧ್ಯಕ್ಷ ವಿನಯ್ ಅವರ ಬೆಂಬಲಿಗರು ಪೊಲೀಸ್ ಠಾಣೆಯ ಮುಂದೆ ಉಳಿದವರನ್ನು ಬಿಡುಗಡೆ ಮಾಡಿ ಇಲ್ಲ ಅಣ್ಣಪ್ಪಸ್ವಾಮಿಯನ್ನು ಕರೆ ತಂದು ಕೂರಿಸಿ ಎಂದು ಧರಣಿ ನಡೆಸುತ್ತಿದ್ದಾರೆ.

ಗುಬ್ಬಿ ಪಟ್ಟಣ ಪಂಚಾಯಿತಿ ಅಧ್ಯಕ್ಷರೇ ಭೂಹಗರಣದಲ್ಲಿ ಭಾಗವಾಗಿರುವುದರಿಂದ ಪ್ರಭಾವಿ ರಾಜಕಾರಣಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಹಗರಣದಲ್ಲಿ ಯಾವ ಯಾವ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬುದು ಇಷ್ಟರಲ್ಲೇ ಬಯಲಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Leave a Reply

Your email address will not be published. Required fields are marked *