ತುಮಕೂರು: ನಮ್ಮ ಜೀವನವೇ ಒಂದು ದೊಡ್ಡ ವಿಶ್ವವಿದ್ಯಾನಿಲಯ. ಅದರಲ್ಲಿ ಕಲಿಯುವುದು ಬಹಳಷ್ಟಿದೆ. ಈ ಕಲಿಕೆ ನಿರಂತರವಾಗಿರಬೇಕು ಎಂದು ಕಲಾವಿದ ಕಂಬದ ರಂಗಯ್ಯ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ವಾರ್ಷಿಕೋತ್ಸವ ‘ಅಸ್ಮಿತೆ-2025’ನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಸ್ಪಷ್ಟವಾದ ಗುರಿಯನ್ನು ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವತ್ತ ಸತತ ಪ್ರಯತ್ನ ಮಾಡಬೇಕು. ಈ ಪಯತ್ನದಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆ ಇರಬೇಕು ಎಂದರು.
ತಂದೆತಾಯಿಯರೇ ಪ್ರತ್ಯಕ್ಷ ದೇವರು. ಅವರನ್ನು ಸಮಾಜ ಹೊಗಳುವಂತೆ ನಾವು ಬದುಕಬೇಕು. ನಯ, ವಿನಯ, ಅಧ್ಯಯನಶೀಲತೆ ನಮ್ಮ ಆಸ್ತಿಯಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ ಎಸ್. ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಿಎಸ್‍ಎಫ್‍ಗೆ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಎನ್‍ಸಿಸಿ ಸಂಯೋಜಕ ಡಾ. ಡಿ. ಬಿ. ಅರುಣ್ ಕುಮಾರ್, ಎನ್‍ಎಸ್‍ಎಸ್ ಸಂಯೋಜಕ ಡಾ. ಚಿಕ್ಕಪ್ಪ ಉಡಗಣಿ, ರೋವರ್ಸ್ & ರೇಂಜರ್ಸ್ ಸಂಯೋಜಕಿ ಡಾ. ರಮಣಿ, ರೆಡ್‍ಕ್ರಾಸ್ ಸಂಯೋಜಕಿ ಡಾ. ರಶ್ಮಿ ಹೊಸಮನಿ, ರೆಡ್ ರಿಬ್ಬನ್ ಸಂಯೋಜಕಿ ಡಾ. ಪರಿಮಳ ಬಿ., ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ.ಎಂ. ಮಂಜುನಾಥ, ಸಾಂಸ್ಕøತಿಕ ಘಟಕದ ಸಂಯೋಜಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ರಾಮಕೃಷ್ಣ ಜಿ. ಮತ್ತಿತರರು ಉಪಸ್ಥಿತರಿದ್ದರು.