ತುಮಕೂರು : ಪ್ರತಿಯೊಂದು ವ್ಯಕ್ತಿಗೂ ಮನಸ್ಸನ್ನು ನಿರ್ವಹಿಸುವುದರ ಜೊತೆಗೆ ಜೀವನವನ್ನು ನಿರ್ವಹಿಸುವ ಕೌಶಲ್ಯಗಳು ಮುಖ್ಯ, ಪ್ರತಿಯೊಂದು ಕ್ಷೇತ್ರವು ವೃತ್ತಿಪರ ಕೌಶಲ್ಯವನ್ನು ಹೊಂದಿರುತ್ತದೆ, ತಂತ್ರಜ್ಞಾನವು ಪ್ರತಿ ನಿಮಿಷ ಮತ್ತು ಪ್ರತಿ ಸೆಕೆಂಡಿಗೆ ಬದಲಾಗುತ್ತಿದೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಅವಕಾಶಗಳನ್ನು ತೆರೆಯುತ್ತಿದೆ ಈ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಚೆನ್ನೈನ, ರೆಡಿಫೈನ್ ಹೆಚ್ ಆರ್ ಸಿಇಓ ಡಾ. ಕೆ .ಝಫರ್ ಅಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (SSIMS) ನಲ್ಲಿ ಆಯೋಜಿಸಿದ್ದಂತಹ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ವ್ಯಕ್ತಿಗೂ ಮನಸ್ಸನ್ನು ನಿರ್ವಹಿಸುವುದರ ಜೊತೆಗೆ ಜೀವನವನ್ನು ನಿರ್ವಹಿಸುವ ಕೌಶಲ್ಯಗಳು ಮುಖ್ಯ, ಪ್ರತಿಯೊಂದು ಕ್ಷೇತ್ರವು ವೃತ್ತಿಪರ ಕೌಶಲ್ಯವನ್ನು ಹೊಂದಿರುತ್ತದೆ, ತಂತ್ರಜ್ಞಾನವು ಪ್ರತಿ ನಿಮಿಷ ಮತ್ತು ಪ್ರತಿ ಸೆಕೆಂಡಿಗೆ ಬದಲಾಗುತ್ತಿದೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಅವಕಾಶಗಳನ್ನು ತೆರೆಯುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನವು ನಮ್ಮ ಒಡನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮನ್ನು ನಾವು ದಿನದಿಂದ ದಿನಕ್ಕೆ ಜಗತ್ತಿನಾದ್ಯಂತ ಅಪ್ಡೇಟ್ ಆಗುವುದರ ಜೊತೆಗೆ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಬೇಕು. ಜಗತ್ತು ಇಂಟರ್ನೆಟ್ ನೊಂದಿಗೆ ಸಂಪರ್ಕ ಹೊಂದಿದೆ ಅದನ್ನ ಬಳಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಾಧ್ಯಾಪಕರು ಕೇವಲ ತರಗತಿಗಳಿಗೆ ಮೀಸಲಾಗಿರುವುದಿಲ್ಲ, ಅವರನ್ನು ನಿಮ್ಮ ಹೊಸ ಹೊಸ ಆಲೋಚನೆ, ಯೋಜನೆಗಳಿಗೆ ಹಾಗೂ ಹೊಸ ಹೊಸ ಆವಿಷ್ಕಾರಗಳಿಗೆ ಬಳಸಿಕೊಳ್ಳಿ ಎಂದು ಸಹಲೆ ನೀಡಿದರು.
AI ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ ಆದರೆ ಯಾವುದೇ ರೀತಿಯ ಮೌಲ್ಯಗಳನ್ನು ಭಾವನೆ ಹೊಂದಿರುವುದಿಲ್ಲ. ಸಮಾಜದಲ್ಲಿ ಪ್ರಭಾವ ಬೀರುವುದರ ಜೊತೆಗೆ ವೈಯಕ್ತಿಕವಾಗಿ ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಆಗ ಮಾತ್ರ ಜೀವನವನ್ನು ಸುಂದರಗೊಳಿಸಬಹುದು. ಪ್ರೀತಿ ,ದಯೆ, ತಾಳ್ಮೆ ಮತ್ತು ಕೃತಜ್ಞತೆ ಜಗತ್ತಿನಲ್ಲಿ ಸುಂದರವಾದ ಜೀವನವನ್ನು ಮುನ್ನಡೆಸಲು ಮುಖ್ಯವಾದ ಅಂಶಗಳಾಗಿವೆ.ಉತ್ತಮ ನಿರ್ವಹಣಾ ಕೌಶಲ್ಯಗಳನ್ನು ಬೆಳೆಸಿಕೊಂಡು ಸಮಾಜದ ಪ್ರಗತಿಗೆ ತಮ್ಮ ಕೊಡುಗೆ ನೀಡುವಂತೆ ತಿಳಿಸಿದರು.
ಇದೇ ಕಾಲೇಜಿನ ಎಂಬಿಎ ವಿಭಾಗದ ಪ್ರಾಧ್ಯಾಪಕರಾದ ಡಾ. ಪವಿತ್ರ ರವರು ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ ವಿಷಯದ ಕುರಿತು ಪಿ ಎಚ್ ಡಿ ಪದವಿ ಪೂರ್ಣಗೊಳಿಸಿದ್ದು, ಇವರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು.
ಪ್ರಾಂಶುಪಾಲರಾದ ಡಾ. ಬಿ. ಅಜ್ಮತ್ ಉಲ್ಲಾ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ಎಂಬಿಎ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತಿದೆ. ಯಾವುದೇ ಕ್ಷೇತ್ರದಲ್ಲೂ ಎಂಬಿಎ ವಿದ್ಯಾರ್ಥಿಗಳು ಅವಕಾಶಗಳನ್ನು ಪಡೆಯಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ.ಅಶೋಕ್ ಮೆಹ್ತಾ,, ಓಬೆದ್ ಉಲ್ಲಾ ಶರೀಫ್, ಡಾ. ಫರ್ಹಾನ ಬೇಗಂ, ಆದರ್ಶ ಎಚ್ ಎಂ, ವಿಜಯ್ ಕುಲಕರ್ಣಿ, ಡಾ. ಪವಿತ್ರ , ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.