ತುಮಕೂರು : ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಏಪ್ರಿಲ್ 2, 2024ರಂದು ಮೂವರು ಅಭ್ಯರ್ಥಿಗಳಿಂದ ಒಟ್ಟು 3 ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಅಭ್ಯರ್ಥಿಯಾಗಿ ಎಸ್.ನಾಗವೀರಭದ್ರಸ್ವಾಮಿ (53ವರ್ಷ, ಶ್ರೀಶಕ್ತಿ ಕೃಪ, ಮೊದಲನೆ ಮಹಡಿ, ಎರಡನೇ ಅಡ್ಡರಸ್ತೆ, ಕೆಇಬಿ ರಸ್ತೆ, ಆರ್.ವಿ.ಕಾಲೋನಿ, ತುಮಕೂರು), ಪಕ್ಷೇತರ ಅಭ್ಯರ್ಥಿಯಾಗಿ ಕಪನಿಗೌಡ (69ವರ್ಷ, ಕಲ್ಕೆರೆ, ಕೊಡಗೀಹಳ್ಳಿ ಅಂಚೆ, ಕಸಬಾ ಹೋಬಳಿ, ತುರುವೇಕೆರೆ ತಾಲ್ಲೂಕು-572227) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದೇವರಾಜ ಬಿ. (50ವರ್ಷ, ನಂ.128/3, 10ನೇ ‘ಇ’ ಅಡ್ಡರಸ್ತೆ, ಸಂಜಿವಿನಿ ನಗರ ಮತ್ತು ಪಂಚಾಶೀಲ ನಗರ, ಕಲ್ಯಾಣ ನಗರ, ಬೆಂಗಳೂರು ಉತ್ತರ-560072) ಅವರುಗಳು ಏಪ್ರಿಲ್ 2ರಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.