ತುಮಕೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ವಿಷಯಾಧಾರಿತ ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಪ್ರಭು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಆಯ್ದ ಮತಗಟ್ಟೆಗಳಲ್ಲಿ ಸಂಸ್ಕøತಿ, ಪರಿಸರ, ಗ್ರಾಮೀಣ ಸೊಗಡು, ಐತಿಹಾಸಿಕ ಸ್ಥಳ ಸೇರಿದಂತೆ ವಿವಿಧ ವಿಷಯಾಧಾರಿತ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಭಾರತ ಚುನಾವಣಾ ಆಯೋಗದಿಂದ ಜಿಲ್ಲೆಗೆ 50 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ನಿರ್ಮಿಸಲು ಗುರಿ ನೀಡಲಾಗಿತ್ತು. ಆದರೆ ಜಿಲ್ಲೆಯಲ್ಲಿರುವ ಒಟ್ಟು 2618 ಮತಗಟ್ಟೆಗಳ ಪೈಕಿ ಆಯ್ದ 200ಕ್ಕೂ ಹೆಚ್ಚು ಮತಗಟ್ಟೆಗಳನ್ನು ವಿವಿಧ ವಿಷಯಾಧಾರಿತ ಮತಗಟ್ಟೆಗಳನ್ನಾಗಿ ನಿರ್ಮಿಸಲಾಗಿದೆ.
ಮಹಿಳಾ ಮತದಾರರನ್ನು ಸೆಳೆಯಲು ಸಖಿ ಮತಗಟ್ಟೆ(ಪಿಂಕ್ ಬೂತ್), ಯುವ ಅಧಿಕಾರಿಗಳುಳ್ಳ ಯುವ ಮತಗಟ್ಟೆ, ವಿಶೇಷ ಚೇತನರು ನಿರ್ವಹಿಸುವ ವಿಶೇಷ ಚೇತನ ಮತಗಟ್ಟೆ ಸೇರಿದಂತೆ ಜಿಲ್ಲೆಯ ವಿವಿಧ ಕಲೆ, ಸಂಸ್ಕøತಿ, ಐತಿಹಾಸಿಕ ಸ್ಥಳ, ಪ್ರಸಿದ್ಧಿ ಪಡೆದಿರುವ ಮತ್ತಿತರ ವಿಷಯಗಳ ಆಧಾರದ ಮೇಲೆ ಮಾದರಿ ಮತಗಟ್ಟೆಗಳನ್ನು ರೂಪಿಸಲಾಗಿದೆ.
ಆರೋಗ್ಯ ಮತ್ತು ಪೌಷ್ಠಿಕತೆ-ಮತದಾನವೇ ಪ್ರಜಾಪ್ರಭುತ್ವಕ್ಕೆ ಆರೋಗ್ಯ, ಮಿಲ್ಕಿ ವೇ(ಕ್ಷೀರ ಪಥ), ಜಲ ಸಂರಕ್ಷಣೆ, ಶಿಕ್ಷಣ ಸ್ನೇಹಿ, ಕ್ರೀಡೆ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲೆಗಳುಳ್ಳ ಸಾಂಸ್ಕøತಿಕ ಮತಗಟ್ಟೆ, ವಾಸ್ತು ಶಿಲ್ಪಕಲೆ, ಸಾಂಸ್ಕøತಿಕ ಪರಂಪರೆ, ಮಹಿಳಾ ಮತ್ತು ಮಕ್ಕಳ ರಕ್ಷಣೆ, ಸಾಂಸ್ಕøತಿಕ ದಸರಾ ಮತಗಟ್ಟೆ, ವರ್ಲಿ ಆರ್ಟ್, ವನ್ಯಜೀವಿ ಸಂರಕ್ಷಣೆ, ಪರಿಸರ, ಹಿರಿಯ ನಾಗರಿಕರ ಸ್ನೇಹಿ, ಸೆಲ್ಫಿ ಪಾಯಿಂಟ್, ವಿಜ್ಞಾನ ಮತ್ತು ತಂತ್ರಜ್ಞಾನ, ಮತದಾನ ಮಾಡುವ ವಿಧಾನ, ಸಾಂಪ್ರದಾಯಿಕ ಮತಗಟ್ಟೆ, ಮಿನಿ ಲಾಲ್‍ಬಾಗ್, ಆರೋಗ್ಯ ಮತ್ತು ನೈರ್ಮಲ್ಯ, ಕಲ್ಪತರು ನಾಡು, ವಿಕಸನ ಸತ್ಯ ಮತ್ತು ಸಿದ್ಧಾಂತ, ಹಳ್ಳಿ ಸೊಬಗು, ಪ್ಲಾಸ್ಟಿಕ್ ಮುಕ್ತ ಗ್ರಾಮ, ಪ್ರವಾಸೋದ್ಯಮ, ಪ್ರಕೃತಿ ಸೇರಿದಂತೆ ಜಿಲ್ಲೆಯ ಸಾಂಸ್ಕøತಿಕ, ಧಾರ್ಮಿಕ, ಇತಿಹಾಸವನ್ನು ಪ್ರತಿಬಿಂಬಿಸುವ ಮಧುಗಿರಿ ಐತಿಹಾಸಿಕ ಏಕಶಿಲಾ ಬೆಟ್ಟ, ಪಾವಗಡ ಸೋಲಾರ್ ಪಾರ್ಕ್, ನಾಗಲಮಡಿಕೆ ಸುಬ್ರಹ್ಮಣ್ಯ ದೇವಸ್ಥಾನ ಕುರಿತು ವಿವಿಧ ವಿಷಯಾಧಾರಿತ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.
ಜಿಲ್ಲೆಯಲ್ಲಿ ಬೇಸಿಗೆಯ ಉಷ್ಣತೆ ಹೆಚ್ಚಾಗಿರುವುದರಿಂದ ಮತದಾರರಿಗೆ ಮತದಾನ ಮಾಡಲು ಅನುವಾಗುವಂತೆ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.