ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆ ನಡೆಸಿರುವ ಕಾಂಗ್ರೆಸ್, ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿದ್ದು, ತುಮಕೂರು ಉಸ್ತುವಾರಿ ಯಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ನೇಮಿಸಲಾಗಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಸಚಿವರನ್ನು ಉಸ್ತುವಾರಿ ವಿಕ್ಷಕರನ್ನಾಗಿ ನೇಮಕ ಮಾಡಿದೆ. ಉಸ್ತುವಾರಿಗಳು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ಮುಖಂಡರನ್ನು ಸಂಪರ್ಕಿಸಿ, ಸಭೆಗಳನ್ನು ನಡೆಸಿ, ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡಲಿದ್ದಾರೆ.
ಪ್ರಿಯಾಂಕ್ ಖರ್ಗೆ – ಬಾಗಲಕೋಟೆ
ಎನ್.ಎಸ್ ಬೋಸರಾಜ್ -ಬೆಂಗಳೂರು ಕೇಂದ್ರ
ಡಾ.ಜಿ.ಪರಮೇಶ್ವರ್ – ಬೆಂಗಳೂರು ಉತ್ತರ
ಕೆ.ವೆಂಕಟೇಶ್ – ಬೆಂಗಳೂರು ಗ್ರಾಮಾಂತರ
ಡಾ.ಶರಣಪ್ರಕಾಶ್ ಪಾಟೀಲ್ – ಬೆಂಗಳೂರು ದಕ್ಷಿಣ
ಶಿವರಾಜ್ ತಂಗಡಗಿ – ಬೆಳಗಾವಿ
ಬಿ.ನಾಗೇಂದ್ರ – ಗುಲಬುರ್ಗ
ಸಂತೋಷ್ ಲಾಡ್ – ಬೀದರ್
ಸತೀಶ್ ಜಾರಕಿಹೊಳಿ- ವಿಜಯಪುರ
ದಿನೇಶ್ ಗುಂಡೂರಾವ್ – ಚಾಮರಾಜನಗರ
ಜಮೀರ್ ಅಹ್ಮದ್ – ಚಿಕ್ಕಬಳ್ಳಾಪುರ
ಡಿ.ಸುಧಾಕರ್ – ಚಿಕ್ಕೋಡಿ
ಡಾ.ಹೆಚ್.ಸಿ.ಮಹದೇವಪ್ಪ – ಚಿತ್ರದುರ್ಗ
ಮಧು ಬಂಗಾರಪ್ಪ – ದಕ್ಷಿಣ ಕನ್ನಡ
ಈಶ್ವರ ಖಂಡ್ರೆ – ದಾವಣಗೆರೆ
ಲಕ್ಷ್ಮೀ ಹೆಬ್ಬಾಳ್ಕರ್ – ಧಾರವಾಡ
ಶಿವಾನಂದ ಪಾಟೀಲ್ – ಬಳ್ಳಾರಿ
ಎನ್.ಚಲುವರಾಯಸ್ವಾಮಿ – ಹಾಸನ
ಎಸ್.ಎಸ್.ಮಲ್ಲಿಕಾರ್ಜುನ – ಹಾವೇರಿ
ರಾಮಲಿಂಗಾರೆಡ್ಡಿ – ಕೋಲಾರ
ಆರ್.ಬಿ.ತಿಮ್ಮಪುರ – ಕೊಪ್ಪಳ
ಡಾ.ಎಂ.ಸಿ.ಸುಧಾಕರ್ – ಮಂಡ್ಯ
ಬಿ.ಎಸ್.ಸುರೇಶ್ – ಮೈಸೂರು
ಕೆ.ಹೆಚ್.ಮುನಿಯಪ್ಪ – ರಾಯಚೂರು
ಕೆ.ಎನ್.ರಾಜಣ್ಣ – ಶಿವಮೊಗ್ಗ
ಕೃಷ್ಣಬೈರೇಗೌಡ – ತುಮಕೂರು
ಮಂಕಾಳ ವೈದ್ಯ- ಉಡುಪಿ-ಚಿಕ್ಕಮಗಳೂರು
ಹೆಚ್.ಕೆ.ಪಾಟೀಲ್ – ಉತ್ತರ ಕನ್ನಡ