ವಿಶ್ವಕ್ಕೆ ಅಹಿಂಸಾ ತತ್ವ ಸಾರಿದ ಮಹಾವೀರರು

ತುಮಕೂರು. : ಭಗವಾನ್ ಮಹಾವೀರರು ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವದಾದ್ಯಂತತಮ್ಮ ಅಹಿಂಸಾ ತತ್ವದ ಮೂಲಕ ಹೆಸರುವಾಸಿಯಾದ ಸಂತರಾಗಿದ್ದಾರೆ. ಅವರ ಮಾನವನ ಬದುಕಿಗೆ ಬೇಕಾದ ಐದು ತತ್ವಗಳನ್ನು ಹೇಳಿದ್ದು, ಅವುಗಳನ್ನು ಜನರು ಅಳವಡಿಸಿಕೊಂಡರೆ ಇಡೀ ವಿಶ್ವವೇ ನೆಮ್ಮದಿಯಜೀವನ ನಡೆಸಲು ಸಾಧ್ಯ ಎಂದು ತುಮಕೂರು ತಹಶೀಲ್ದಾರ್ ರಾಜೇಶ್ವರಿ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ,ಕಸಾಪ ಹಾಗೂ ಶ್ವೇತಾಂಬರ ಮತ್ತು ದಿಗಂಬರ್‍ಜೈನ ಸಮಾಜದ ವತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರರಜಯಂತಿಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದಅವರು, ಬೋಗ,ಲಾಲಸ ಜೀವನದಿಂದ ಹೊರಬರಲು ಸತ್ಯ, ಅಹಿಂಸೆ, ಬ್ರಹ್ಮಚರ್ಯ ಸೇರಿದಂತೆಐದು ಪ್ರಮುಖ ಅಂಶಗಳನ್ನು ಮಹಾವೀರರು ಗುರುತಿಸಿ, ಅನುಸರಿಸಿದ್ದಾರೆ. ಅವುಗಳನ್ನು ಪಾಲನೆ ಮಾಡುವ ಮೂಲಕ ನಾವುಗಳು ಕೂಡಅವರು ಹಾಕಿಕೊಟ್ಟದಾರಿಯಲ್ಲಿ ನಡೆದರೆಜಯಂತಿಗೂಒಂದುಅರ್ಥ ಬರುತ್ತದೆ ಎಂದರು.

ಹಿರಿಯ ಸಾಹಿತಿಡಾ.ಪದ್ಮಪ್ರಸಾದ್ ಮಾತನಾಡಿ, ಕ್ರಿಸ್ತಪೂರ್ವ 599ರಲ್ಲಿ ಜನಿಸಿದ ಮಹಾವೀರರುಜೈನಧರ್ಮದ 24ನೇ ತೀರ್ಥಂಕರರು,ಸತ್ತ,ಅಹಿಂಸೆ, ಅಪಗ್ರಹ,ಬ್ರಹ್ಮಚರ್ಯ,ಆಸ್ತೆಯ ಎಂಬ ಐದು ತತ್ವಗಳನ್ನು ನೀಡಿದ್ದಾರೆ.ಇನ್ನೊಬ್ಬರನ್ನು ನೋಯಿಸಿ ದುಡಿಯುವ ಹಣ ಎಂದಿಗೂ ಒಪ್ಪುವಂತಹದ್ದಲ್ಲ.ಸುಳ್ಳು, ಕಳ್ಳತನಕ್ಕೆ ಅವಕಾಶವಿಲ್ಲದೆ, ಸರಿಯಾದದಾರಿಯಲ್ಲಿ, ಅಗತ್ಯಕ್ಕೆತಕ್ಕಷ್ಟೇ ಸಂಪತ್ತು ಸಂಗ್ರಹವೇ ನಿಮ್ಮ ನೆಮ್ಮದಿಯಜೀವನಕ್ಕೆದಾರಿ,ನೀನು ಬದುಕು, ಇತರರನ್ನು ಬದುಕಲು ಬೀಡು ಎಂಬ ತತ್ವದ ಮೂಲಕ ಸಕಲರಿಗೂ ಲೇಸನ್ನೇ ಬಯಸಿದ ಮಹಾವೀರರದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆಎಂದರು.
ಕಸಾಪ ಜಿಲ್ಲಾಧ್ಯಕ್ಷಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಹಿಂಸೆಯನ್ನುತ್ಯೇಜಿಸುವುದರಿಂದ ನೆಮ್ಮದಿಯಜೀವನ ಸಾಧ್ಯಎಂಬುದನ್ನು ಅಹಿಂಸೋ ಪರಮಧರ್ಮಃ ಎಂಬ ತತ್ವದ ಮೂಲಕ ಮಹಾವೀರರು ತೋರಿಸಿಕೊಟ್ಟಿದ್ದಾರೆ. ತಾವು ಹೇಳಿದಂತೆ ನಡೆದು ತೋರಿಸಿದ್ದಾರೆ. ಇಂದಿನ ಪ್ರಕ್ಷುಬ್ದಜೀವನಕ್ಕೆ ಮಹಾವೀರರ ತತ್ವಗಳು ಮದ್ದಾಗಿವೆಎಂದರು.

ಜೈನ ಮುನಿ ಶ್ರೀಶ್ರೀಭಾನುರತ್ನ ವಿಜಯಜೀ ಮಾತನಾಡಿ,ನೆಮ್ಮದಿ ಮತ್ತು ಶಾಂತಿಯಜೀವನಕ್ಕೆಅಗತ್ಯವಿರುವಐದು ಸೂತ್ರಗಳನ್ನು ಮಹಾವೀರರು ನೀಡಿದ್ದಾರೆ.ಅವುಗಳನ್ನು ನಾವು ಪಾಲಿಸಿದರೆ ಇಡೀ ವಿಶ್ವವೇ ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿಜೈನ ಮುನಿ ಶ್ರೀಹರ್ಷ ರತ್ನ ವಿಜಯಜೀ, ಕನ್ನಡ ಮತ್ತು ಸಂಸ್ಕøತಿಇಲಾಖೆಯ ಸುರೇಶಕುಮಾರ್,ಚಿಕ್ಕಪೇಟೆಜೀನ ಮಂದಿರದ ಮುಖ್ಯಸ್ಥರಾದ ಬಾಹುಬಲಿ ಬಾಬು,ಕಾರ್ಯದರ್ಶಿ. ಎಂ.ನಾಗರಾಜು,ಖಜಾಂಚಿ ಸುಬೋದ್‍ಕುಮಾರ್‍ಜೈನ್, ಶ್ವೇತಾಂಬರಜೈನ ಸಮಾಜದಅಧ್ಯಕ್ಷಉತ್ತಮಜೈನ್,ಸಮಾಜದ ಮುಖಂಡರಾದಸುರೇಂದ್ರಷಾ,ಶುಬೋದ್‍ಕುಮಾರ್,ವಿನಯಜೈನ್,ಎಸ್.ಎಂ.ಅಜಿತ್‍ಕುಮಾರ್, ತೀÀರ್ಥಕುಮಾರ್‍ಡಾ.ಲಕ್ಷ್ಮಣದಾಸ್, ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಹಾವೀರರಜಯಂತಿ ಅಂಗವಾಗಿ ನಗರದಎಂ.ಜಿ.ರಸ್ತೆಯಿಂದ, ಶೀರಾಗೇಟ್ ನ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಶ್ವೇತಾಂಬರರು,ಚಿಕ್ಕಪೇಟೆಯಿಂದ ಬಿ.ಹೆಚ್.ರಸ್ತೆಯಜೈನಭವನದವರೆಗೆ ದಿಗಂಬರ್ ಸಮುದಾಯದಜನರು ಮಹಾವೀರರ ಮೆರವಣಿಗೆ ನಡೆಸಿದರು. ಎರಡು ಮೆರವಣಿಗೆಗಳು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಂದಿಸಿ, ಪರಸ್ವರ ಶುಭಾಷಯ ವಿನಿಮಯ ಮಾಡಿಕೊಂಡರು.

Leave a Reply

Your email address will not be published. Required fields are marked *