ತುಮಕೂರು :ಬೆಳ್ಳಾವಿಯಲ್ಲಿ ಗ್ರಾಮ ಪರಿಕ್ರಮ ಯಾತ್ರಾ ಸಮಾರೋಪ ಸಮಾರಂಭ ಮಾರ್ಚ್ 12 ರಂದು ನಡೆಯಲಿದೆ ಎಂದು ರಾಜ್ಯ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ ಎಸ್. ಪಾಟೀಲ್ ನಡಹಳ್ಳಿ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಈ ಕಾರ್ಯ ಕ್ರಮ ದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಬಿ.ವೈ, ವಿರೋಧ ಪಕ್ಷದ ನಾಯಕ ಆರ್.ಆಶೋಕ, ಶಾಸಕರಾದ ಬಿ.ಸುರೇಶ್ ಗೌಡ, ಜಿ.ಬಿ.ಆದ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಲಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ರೈತರಿಗೆ ಕಡೆಗಣಿಸಿದ್ದು, ರೈತರಿಗೆ ಬೋರ್ವೆಲ್ ಪಂಪ್ ಮೋಟಾರ್ ಗಳನ್ನು ನೀಡುವಲ್ಲಿ ವಿಫಲವಾಗಿದೆ,
ಹಾಲಿನ ಪ್ರೋತ್ಸಾಹ ಧನ 720 ಕೋಟಿ ಬಿಡುಗಡೆ ಮಾಡಿಲ್ಲ ,ಬರ ನಿರ್ವಹಣೆಯಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದ್ದಾರೆ, ಗೋಶಾಲೆ ಗಳ ನಿರ್ವಹಣೆಗೆ ಯಾವುದೇ ಕ್ರಮ ವಹಿಸಿಲ್ಲ ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಗೊ ಶಾಲೆಗಳ ನಿರ್ಮಾಣ ಮಾಡಿ ಮೇವು ಪೂರೈಕೆ ಮಾಡಬಹುದಿತ್ತು ಮಾಡಿಲ್ಲ ಎಂದರು,
ಎನ್ ಡಿ ಆರ್ ಎಫ್ ಹಣ 6.200 ಕೋಟಿ ಕೇಂದ್ರ ಸರ್ಕಾರ ಹಣ ಸೇರಿ 13 ಸಾವಿರ ಕೋಟಿ ಬಿಡುಗಡೆ ಮಾಡಿಲ್ಲದಿರುವುದನ್ನು ತೀವ್ರ ವಾಗಿ ಖಂಡಿಸಿದರು.
ಎನ್ ಪಿ ಎ, ಹರಿಯಾಣದಲ್ಲಿ ನಡೆದ ರೈತರ ಮೇಲಿನ ಗೋಲಿ ಬಾರ್ ಮತ್ತು ಅಡಕೆ ಅಮದು ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡುವಲ್ಲಿ ನಡಾವಳಿ ನುಣಿಚಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಿ.ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿಶಂಕರ್ ಹೆಬ್ಬಾಕ, ರೈತ ಮೋರ್ಚದ ಬ್ಯಾಟರಂಗೇಗೌಡ ಉಪಸ್ಥಿತರಿದ್ದರು.