ತುಮಕೂರು:ಛಲವಾದಿ ಜಗದ್ಗುರು ಪೀಠ ಚನ್ನೇನಹಳ್ಳಿ ವತಿಯಿಂದ ಛಲವಾದಿ ಮಠದ ದಶಮಾನೋತ್ಸವ ಕಾರ್ಯಕ್ರಮ ಹಾಗೂ ಶ್ರೀಬಸವಲಿಂಗಮೂರ್ತಿಸ್ವಾಮೀಜಿಯವರು 50ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಮಾರ್ಚ್ 17ರ ಭಾನುವಾರ ಬೆಳಗ್ಗೆ 10 ಗಂಟೆಗೆ ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿ ಚನ್ನೇನಹಳ್ಳಿಯ ಶ್ರೀಛಲವಾದಿ ಜಗದ್ಗುರು ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾರ್ಚ 17ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯುವ ಛಲವಾದಿ ಮಠದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬೆಳಗ್ಗೆ 7 ಗಂಟೆಗೆ ಡಿ.ಕಲ್ಕರೆಯ ಅಲ್ಲಮಪ್ರಭು ಮಠದ ಶ್ರೀತಿಪ್ಪೇರುದ್ರಸ್ವಾಮಿಗಳು ಬಸವ ದ್ವಜಾರೋಹಣ ನಡೆಸಲಿದ್ದು,ದಾವಣಗೆರೆಯ ಬೌಧ್ಧ ದಮ್ಮ ಪ್ರಚಾರಕರು ಛಲವಾದಿ ಹಿರಿಯ ಮುಖಂಡರಾದ ನಲ್ಕುದರೆ ಹಾಲೇಶಪ್ಪ ಬುದ್ದವಂದನೆ ಸ್ವೀಕರಿಸಲಿದ್ದಾರೆ.ಬೆಳಗ್ಗೆ 10:30 ಗಂಟೆಯಿಂದ ಸಮಾಜ ಚಿಂತಕರಾದ ಶ್ರೀಹುಲಿಕಲ್ಲು ನಟರಾಜು ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 11:30 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನ ಪ್ರಕಾಶ್ ಸ್ವಾಮೀಜಿ ವಹಿಸಿವರು.ಕಾರ್ಯಕ್ರಮದ ನೇತೃತ್ವವನ್ನು ಚನ್ನೇನಹಳ್ಳಿ ಛಲವಾದಿ ಗುರುಪೀಠದ ಶ್ರೀಬಸವಲಿಂಗಮೂರ್ತಿ ಸ್ವಾಮಿಗಳು ವಹಿಸುವರು. .ಪೂಜ್ಯರಾದ ಮುಡುಕುತೊರೆ ಉರಿಲಿಂಗ ಪೆದ್ದಿ ಮಠದ ಶ್ರೀಸಿದ್ದರಾಮಶಿವಯೋಗಿ ಸ್ವಾಮೀಜಿ, ಡಿ.ಕಲ್ಕೆರೆ ಶ್ರೀಶನಿದೇವಾಶ್ರಮದ ಶ್ರೀಪೂರ್ಣಾನಂದಸ್ವಾಮೀಜಿ, ಮೈಸೂರಿನ ಭರತ್ ಸ್ವಾಮಿಗಳು ಹಾಗೂ ಹರಗುರು ಚರಮೂರ್ತಿಗಳು ಪಾಲ್ಗೊಳ್ಳಲಿದ್ದಾರೆ.ಅಧ್ಯಕ್ಷತೆಯನ್ನು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ವಹಿಸಲಿದ್ದು,ಶಿರಾ ಶಾಸಕರು ಹಾಗೂ ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾ.ಎಂ.ಸಿ.ರಾಜೇಶಗೌಡ,ವಿಧಾನಪರಿಷತ್ ಮಾಜಿ ಸದಸ್ಯರಾದ ಡಿ.ಎಸ್.ವೀರಯ್ಯ,ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ನೆಹರು ಚನ್ನಬಸಪ್ಪ ಓಲೆಕಾರ್,ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಕೆ.ಹುನುಮಂತಪ್ಪ, ಚಿತ್ರದುರ್ಗ ನಗರಸಭಾ ಮಾಜಿ ಅಧ್ಯಕ್ಷ ನಿರಂಜನಮೂರ್ತಿ,ತುಮುಲ್ ನಿರ್ದೇಶಕ ಎಸ್.ಆರ್.ಗೌಡ,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಡಿ.ಎಂ.ರವಿಕುಮಾರ್,ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಭಾಗವಹಿಸುವರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಲಾಶ್ರೀ ಡಾ.ಲಕ್ಷ್ಮಣದಾಸ್,ಹರಿಕಥಾ ವಿದ್ವಾನ್ ಜಿ.ಸೋಮಶೇಖರದಾಸ್ಮ,ಛಲವಾದಿ ಗುರುಪೀಠದ ಅಧ್ಯಕ್ಷರಾದ ಲಕ್ಷ್ಮಿನರಸಯ್ಯ,ರಾಜ್ಯ ಛಲವಾದಿ ಮಹಾಸಭಾ ರಾಜ್ಯ ಜಂಟಿ ಕಾರ್ಯದರ್ಶಿ ಟಿ.ಆರ್.ನಾಗೇಶ್, ಛಲವಾದಿ ಸೌಹಾರ್ಧ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಭಾನುಪ್ರಕಾಶ್,ರಂಗಭೂಮಿ ಕಲಾವಿದರು ಹಾಗೂ ಸರಕಾರಿ ವಕೀಲರಾದ ಎಸ್.ರಾಜಣ್ಣ,ಪಟ್ಟಬೋರಯ್ಯ, ಸುವರ್ಣ ಪ್ರಗತಿ ಸಂಪಾದಕರಾದ ಹೆಚ್.ಎಸ್.ಪರಮೇಶ್, ಛಲವಾದಿ ಮಹಾಸಭಾ ಪಾವಗಡ ಅಧ್ಯಕ್ಷರಾದ ಕಣುಮಯ್ಯ, ತಿಪಟೂರು ತಾಲೂಕು ಅಧ್ಯಕ್ಷ ಬಜಗೂರು ಮಂಜುನಾಥ್, ಶಿರಾ ತಾಲೂಕು ಅಧ್ಯಕ್ಷರಾದ ದೊಡ್ಡಹನುಮಂತಯ್ಯ, ಸುವರ್ಣಮುಖಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆರ್.ಕೆ.ದೃವಕುಮಾರ್,ತಾವರೆಕೆರೆ ಇಂಡಿಯನ್ ಪ್ಯೂಚರ್ ಸ್ಕೂಲ್ ಸಂಸ್ಥಾಪಕ ಬಲರಾಮ್, ಮದಲೂರು ಹನುಮಂತಪ್ಪ, ಶಿರಾ ದಾಸಪ್ಪ ಅವರುಗಳು ಉಪಸ್ಥಿತರಿರುವರು.
ಛಲವಾದಿ ಜಗದ್ಗುರು ಪೀಠದ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 17 ರ ಸಂಜೆ ನಾಲ್ಕು ಗಂಟೆಗೆ ಲಾ ಪೀಪಲ್ ಟ್ರಸ್ಟ್ ವತಿಯಿಂದ ಕಾನೂನು ಅರಿವು ಕಾರ್ಯಾಗಾರ ಸಹ ನಡೆಲಿದೆ.ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಯಶ್ವಿಗೊಳಿಸುವಂತೆ ಛಲವಾದಿ ಜಗದ್ಗುರು ಪೀಠದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.