ಶೈನಾ ಅಧ್ಯಯನ ಸಂಸ್ಥೆ, ತುಮಕೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು, `ಡಮರುಗ’ ರಂಗ ಸಂಪನ್ಮೂಲ ಕೇಂದ್ರ, ಮೆಳೇಹಳ್ಳಿ ಸಂಯಕ್ತಾಶ್ರಯದಲ್ಲಿ ಮಾರ್ಚ್ 19ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಅಮಾನಿಕೆರೆ ಮುಂಭಾಗದ ಕನ್ನಡ ಭವನದಲ್ಲಿ ನೀಲಾಂಬಿಕೆ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ನಾಡೋಜ ಸಂಸ್ಕøತಿ ಚಿಂತಕರಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ.
ಪ್ರಜಾಪ್ರಗತಿ ದಿನಪತ್ರಿಕೆಯ ಸಂಪಾದಕರಾದ ಎಸ್. ನಾಗಣ್ಣ, ತುಮಕೂರು ವಿಶ್ವವಿದ್ಯಾನಿಲಯದ ಡಿ.ವಿ.ಜಿ. ಕನ್ನಡ ಅಧ್ಯಯನ ಕೇಂದ್ರ ಮುಖ್ಯಸ್ಥರಾದ ಪ್ರೊ. ಸತ್ಯಾನಂದ ಬಿ. ಶೆಟ್ಟಿ, ಜ್ಞಾನಬುತ್ತಿ ಸತ್ಸಂಗ ಕೇಂದ್ರ ಅಧ್ಯಕ್ಷರಾದ ಮುರುಳಿಕೃಷ್ಣಪ್ಪ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಸಿದ್ಧಲಿಂಗಪ್ಪ, ವರದಕ್ಷಿಣೆ ವಿರೋಧಿ ವೇದಿಕೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಜೀವರತ್ನ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಪ್ರೊ. ಬಿ. ಕರಿಯಣ್ಣ, ತುಮಕೂರು ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬಾ.ಹ. ರಮಾಕುಮಾರಿ, ಸಂಶೋಧಕರಾದ ಡಾ. ಡಿ.ಎನ್. ಯೋಗೀಶ್ವರಪ್ಪ ಉಪಸ್ಥಿತರಿರುತ್ತಾರೆ.
ನಾಟಕದ ಮೂಲಕೃತಿ ಡಾ. ಬಿ.ಸಿ. ಶೈಲಾನಾಗರಾಜ್ ಅವರದ್ದಾಗಿದ್ದು, ಮೆಳೇಹಳ್ಳಿ ದೇವರಾಜ್ ಅವರು ನಾಟಕವನ್ನು ನಿರ್ದೇಶಿಸಿದ್ದಾರೆ.