ತುಮಕೂರು: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಮಾರ್ಚ್ 21ರ ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆಂದು ಉನ್ನತ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಶ್ರೀನಿವಾಸ್ ಜೊತೆಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸಹ ಸೇರ್ಪಡೆ ಯಾಗಲಿದ್ದರೆನ್ನಲಾಗಿದೆ.
ತಮ್ಮ ತವರು ಪಕ್ಷ ತೊರೆದು ಹತ್ತಾರು ತಿಂಗಳಾಗಿದಗದರೂ ಸೇರ್ಪಡೆಗೆ ಮೀನಮೇಷ ಎಣಿಸುತ್ತಿದ್ದ ವಾಸಣ್ಣ, ದೆಹಲಿ ನಾಯಕರು ಪಕ್ಷ ಸೇರ್ಪಡೆಯಾಗಿಲ್ಲ, ಅವರ ಭೇಟಿ ಬೇಡ ಅಂದ ಕೂಡಲೇ ಸೇರ್ಪಡೆ ಯ ಮಹೂರ್ತ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.
ಬಹಳ ದಿನಗಳಿಂದಲೂ ಸೇರ್ಪಡೆ ಯ ಬಗ್ಗೆ ಊಹ ಪೋಹಕ್ಕೆ ಮಂಗಳವಾರ ತರೆಬೀಳಲಿದೆ ಎನ್ನಲಾಗಿದೆ.
ಟಿಕೆಟ್ ಗಾಗಿ ದೆಹಲಿ ಎಐಸಿಸಿ ಕಛೇರಿ ಗೆ ಎಡ ತಾಕಿದ್ದ ಶ್ರೀನಿವಾಸ್ ಅವರಿಗೆ ಹೈಕಮಾಂಡ್ ಮೊದಲು ಪಕ್ಷಕ್ಕೆ ಸೇರ್ಪಡೆ ಯಾಗುವಂತೆ ತಾಕೀತು ಮಾಡಿದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಗುಬ್ಬಿ ಕಾಂಗ್ರೆಸ್ ಮುಖಂಡರ ತೀವ್ರ ವಿರೋಧ ದ ನಡುವೆಯು ವಾಸಣ್ಣ ಕಾಂಗ್ರೆಸ್ ಸೇರ್ಪಡೆ ತೀವ್ರ ಚರ್ಚೆ ಗೆ ಗ್ರಾಸವಾಗಿದ್ದು, ವಾಸಣ್ಣನ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಜಿಲ್ಲೆಯಲ್ಲಿ ಹಿನ್ನಡೆಯಾದರೂ ಆಗಬಹುದು ಎಂದು ಹೇಳಲಾಗುತ್ತಿದೆ.
ಏಕೆಂದರೆ ಎರಡನೇ ಸಾಲಿನ ಯುವ ನಾಯಕರಿಗೆ ಟಿಕೆಟ್ ನೀಡಿ ಪಕ್ಷ ಬಲಪಡಿಸುವ ಬದಲು ವಲಸಿಗರನ್ನು ಪಕ್ಷಕ್ಕೆ ಕರೆ ತರುತ್ತಿರುವುದರಿಂದ ದೊಡ್ಡಮಟ್ಟದ ಭಿನ್ನಮತ ಸ್ಪೋಟ ಗೊಳ್ಳಲಿದೆ ಎನ್ನಲಾಗುತ್ತಿದೆ.
ಎಸ್.ಆರ್.ಶ್ರೀನಿವಾಸ್ ಸೇರ್ಪಡೆ ನಂತರ ಏನೇನು ಬೆಳವಣಿಗೆಗಳು ಆಗಲಿದೆ ಕಾದು ನೋಡಬೇಕಿದೆ.
ಮಾರ್ಚ್ 23 ರಂದು ಬಹುತೇಕ ಕಾಂಗ್ರೆಸ್ ಪಟ್ಟಿ ಪ್ರಕಟವಾಗುವುದರಿಂದ ವಾಸಣ್ಣನನ್ನು ಜಿಲ್ಲೆಯ ಕೆಲ ನಾಯಕರು ಕಾಂಗ್ರೆಸ್ ಗೆ ತುದಿಗಾಲಲ್ಲಿ ನಿಂತು ಕರೆ ತರುತ್ತಿದ್ದಾರೆ ಇದರ ಪರಿಣಾಮ ಮುಂದಿನ ದಿನಗಳಲ್ಲಿ ಈ ನಾಯಕರು ಅನುಭವಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಲೇ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದ್ದು , ವಾಸಣ್ಣ ಸೇರ್ಪಡೆ ನಂತರ ಎಷ್ಟು ಬಾಗಿಲುಗಳಾಗಲಿವೆ ನೋಡಬೇಕಿದೆ.