ಮಾರ್ಚ್ 21,22ರಂದು ಎಸ್.ಐ.ಟಿ.ಯಲ್ಲಿ 3ನೇ ಅಂತರಾಷ್ಟ್ರೀಯ ಟೆಕ್ನಿಷಿಯಮ್-2025 ಸಮ್ಮೇಳನ

ತುಮಕೂರು : ಸಿದ್ಧಗಂಗಾ ಇನ್ ಸ್ಟಿಟ್ಯೂಟ್ ಟೆಕ್ನಾಲಜಿಯ ಅಸೋಸಿಯೇಶನ್ ಆಫ್ ಎಲೆಕ್ಟಿಕಲ್ ಸೈನ್ಸ್ ಮತ್ತು ಬೆಂಗಳೂರು ವಿಭಾಗದ ಇನ್ ಸ್ಟಿಟ್ಯೂಟ್ ಆಫ್ ಎಲೆಕ್ನಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನೀಯರ್ಸ್ (Iಇಇಇ), ಸಹಯೋಗದಲ್ಲಿ 2025ರಮಾರ್ಚ್ 21 ಮತ್ತು 22 ರಂದು ಮೂರನೇ ಅಂತರಾಷ್ಟ್ರೀಯ ಸಮ್ಮೇಳನ “ಸ್ಮಾರ್ಟ್ ಸಿಸ್ಟಮ್ ಫಾರ್ ಅಪ್ಲಿಕೇಷಯನ್ ಇನ್ ಎಲೆಕ್ನಿಕಲ್ ಸೈನ್ಸ್ (IಅSSಇS) – 2025” ಅನ್ನು ಎಸ್‍ಐಟಿಯ ಬಿರ್ಲಾ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಐ.ಟಿ.ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶಿವಕುಮಾರಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯುತ್ ವಿಜ್ಞಾನಕ್ಕೆ ಅನ್ವಹಿಸುವ ಸ್ಮಾರ್ಟ್ ಸಿಸ್ಟಮ್ ಗಳ ಕ್ಷೇತ್ರದಲ್ಲಿನ ಪ್ರಗತಿಗಳು, ಸವಾಲುಗಳು ಮತ್ತು ಆವಿμÁ್ಕರಗಳನ್ನು ಚರ್ಚಿಸಲು ಭಾರತ ಮತ್ತು ವಿದೇಶಗಳ ಪ್ರಮುಖ ಸಂಶೋಧಕರು, ಶಿಕ್ಷಣ ತಜ್ಞರು ಉದ್ಯಮ ತಜ್ಞರನ್ನು ಒಟ್ಟುಗೂಡಿಸುವುದು ಸಮ್ಮೇಳನದ ಉದ್ದೇಶವಾಗಿದೆ. ಸಮ್ಮೇಳನವು ಜ್ಞಾನ ವಿನಿಮಯ, ಸಂಕೀರ್ಣ ವ್ಯವಸ್ಥೆ ಹಾಗೂ ಶೈಕ್ಷಣಿಕ ಮತ್ತು ಉದ್ಯಮದಲ್ಲಿನ ವೃತ್ತಿಪರರ ನಡುವೆ ಸಹಯೋಗದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.

ಡಾ. ಮಧುಸೂದನ್ ಸಿ.ಎಸ್., ಇಸ್ರೋ ಸಿಸ್ಟಮ್ ಇಂಜಿನಿಯರಿಂಗ್ ನ ಗ್ರೂಪ್ ಡೈರೆಕ್ಟರ್, ಟೆಕ್ನಿಷಿಯಮ್ – 2025 ಕಾರ್ಯಕ್ರಮವನ್ನು ಹಾಗೂ ಹವ್ಯಾಸಿ ಪ್ರಾಜೆಕ್ಟ್ ಪ್ರದರ್ಶನವನ್ನು ಉದ್ಘಾಟಿಸಿ “ಬಾಹ್ಯಾಕಾಶದ ಸವಾಲುಗಳು” ಎಂಬ ವಿಷಯದ ಮೇಲೆ ಭಾಷಣವನ್ನು ಮಾಡಲಿದ್ದಾರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿಗಳು ಮತ್ತು ಎಸ್.ಐ.ಟಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಶಿವಕುಮಾರಯ್ಯನವರು ಉದ್ಘಾಟನಾ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ, ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಟಿ.ಕೆ. ನಂಜುಂಡಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಭಾರತ ಮತ್ತು ವಿದೇಶಗಳಿಂದ 1266 ಸಂಶೋಧನಾ ಲೇಖನಗಳು ಬಂದಿದ್ದು, ಮೂವರು ವಿಮರ್ಶಕರು ಈ ಲೇಖನಗಳನ್ನು ಪರಿಶೀಲಿಸಿ ಎರಡು ದಿನಗಳ ಸಮ್ಮೇಳನದಲ್ಲಿ ಮಂಡಿಸಲು 175 ಲೇಖನಗಳನ್ನು ಆಯ್ಕೆ ಮಾಡಲಾಗಿದೆ, ಈ ಟೆಕ್ನಿಷಿಯಮ್-2025ರಲ್ಲಿ ಭಾಗವಹಿಸಲು 700 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಪ್ರೊ.ಎಸ್.ವಿ.ದಿನೇಶ್ ಮತ್ತು ಅಸೋಸಿಯೇಷನ್ ಆಫ್ ಎಲೆಕ್ಟ್ರಿಕಲ್ ಸೈನ್ಸ್ ನ ಅಧ್ಯಕ್ಷರಾದ ಡಾ.ರಶ್ಮಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *