ಬಹುಮುಖ ಪ್ರತಿಭೆ ಎಂ.ಎನ್. ಚೆಲುವರಾಜುಗೆ ಮಾ.23ರಂದು ನುಡಿನಮನ

ತುಮಕೂರು:ಇತ್ತೀಚಗೆ ನಿಧನರಾದ ಕಲಾವಿದರು, ಕಲಾ ಪೋಷಕರು, ಗುಡಿ ಕೈಗಾರಿಕೆಗಳ ಮಾಲೀಕರು, ರಾಜಕಾರಣಿಯೂ ಆದ ಬಹುಮುಖ ಪ್ರತಿಭೆಯಾಗಿದ್ದ ದಿ.ಎಂ.ಎನ್.ಚೆಲುವರಾಜು ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಮಾರ್ಚ 23ರ ಭಾನುವಾರ ಸಂಜೆ.4:30 ಗಂಟೆಗೆ ಚೆಲುವರಾಜು ಗೆಳೆಯರ ಬಳಗದವತಿಯಿಂದ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಲಾವಿದರಾಗಿ, ವಾಗ್ಮೀಗಳಾಗಿ,ಗುಡಿ ಕೈಗಾರಿಕೆಯಾದ ಹಪ್ಪಳ ಫ್ಯಾಕ್ಟರಿ ನಡೆಸುತ್ತಲೇ ಹತ್ತಾರು ಜನ ಹೆಣ್ಣು ಮಕ್ಕಳಿಗೆ ಕೆಲಸ ನೀಡಿ, ಅದರಿಂದ ಬಂದ ಹಣದಲ್ಲಿ ಸಮಾಜ ಸೇವೆ ನಡೆಸುತ್ತಿದ್ದ, ಜೆಡಿಎಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ಎಂ.ಎನ್.ಚೆಲುವರಾಜು ಇತ್ತೀಚಗೆ ನಿಧನರಾಗಿದ್ದು,ಅವರಿಗೆ ಮಾರ್ಚ್ 23ರ ಭಾನುವಾರು ಚೆಲುವರಾಜು ಗೆಳೆಯರ ಬಳಗದಿಂದ ನುಡಿನಮನ ಸಲ್ಲಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ.

ಚೆಲುವರಾಜು ಹಿತೈಷಿಗಳು,ಅಭಿಮಾನಿಗಳು, ಸಹಪಾಠಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ನಗುಮೊಗದ ಗೆಳೆಯನ ಆತ್ಮಕ್ಕೆ ಶಾಂತಿ ಕೋರುವಂತೆ ಚಲುವಾರು ಗೆಳೆಯರ ಬಳಗದ ಮುಖಂಡರಾದ ಕಲಾಶ್ರೀ ಡಾ.ಲಕ್ಷ್ಮಣದಾಸ್,ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಲ್ಲಿಕಾರ್ಜುನ ಕೆಂಕೆರೆ,ಸಿಪಿಐ(ಎಂ) ಮುಖಂಡರಾದ ಸೈಯದ್ ಮುಜೀಬ್,ಎನ್.ಕೆ.ಸುಬ್ರಮಣ್ಯ, ಕಲಾವಿದರಾದ ಗ್ರಾಮೀಣ ಕ್ರಿಯಾತ್ಮಕ ರಂಗತಂಡ(ರಿ)ತುಮಕೂರಿನ ಶಿವಕುಮಾರ್ ತಿಮ್ಮಲಾಪುರ,ರಂಗನಿರ್ದೇಶಕ ಕೌತಮಾರನಹಳ್ಳಿ ಕಾಂತರಾಜು,ರಂಗಸೊಗಡು ಕಲಾ ಟ್ರಸ್ಟ್‍ನ ಕಾರ್ಯದರ್ಶಿ ಆಟೋ ಸಿದ್ದರಾಜು ಸ್ವಾಂದೇನಹಳ್ಳಿ,ಎಸ್.ಎಫ್.ಐ ರಾಘವೇಂದ್ರ,ಜಲಧಿ ರಾಜು ಅವರುಗಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *