ತುಮಕೂರು : ಸಿದ್ಧಾರ್ಥ ನಗರದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾರುತಿ ಡಿ ಮಾಲೆ ನಿನ್ನೆ 26ರಂದು ನಿಧನ ಹೊಂದಿದ್ದಾರೆ. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಭಾವಪೂರ್ಣ ಶ್ರದ್ಧಾಂಜಲಿ ಸಂತಾಪ ಸೂಚಿಸಿದೆ.
ಈ ಸಂತಾಪ ಸೂಚಿಸುವ ಕಾರ್ಯಕ್ರಮದಲ್ಲಿ ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ.ಲಿಂಗಗೌಡ ಮಾತನಾಡಿ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರರೊಂದಿಗೆ ಮಾರುತಿ ಡಿ ಮಾಲೆಯವರು ಸೇರಿ ಸಂಸ್ಥೆನ್ನು ಬೆಳೆಸಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಸದಾಕಾಲ ಸೃಜನಶೀಲ ವ್ಯಕ್ತಿಯಾಗಿ ಯಾವುದೇ ಕೆಲಸವನ್ನು ನಿರ್ವಹಿಸಲು ಮುಕ್ತವಾಗಿ ಮಾತನಾಡಿ ಕೆಲಸವನ್ನು ನಿರ್ವಹಿಸಿದ್ದರು ಎಂದು ಸಾಹೇ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಎಮ್ ಜೆಡ್ ಕುರಿಯನ್ ಮಾತನಾಡಿದರು.
ಮಾರುತಿ ಡಿ ಮಾಲೆಯವರ ಆಕ್ಷಾಂಶೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತರಬೇತಿ ಪಡೆದು ಒಳ್ಳೆಯ ವಿದ್ಯಾರ್ಥಿಗಳಾಗಿ ಹೊರಹೊಮ್ಮುಬೇಕು ಎಂಬುವುದು ಇವರು ಆಕ್ಷಾಂಶೆಯಾಗಿತ್ತು ಎಂದು ಸಿದ್ಧಾರ್ಥ ಶಿಕ್ಷಣ ಆಡಳಿತಾಧಿಕಾರಿ ಬಿ.ನಂಜುಂಡಪ್ಪ ಶ್ರದ್ಧಾಂಜಲಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ತಿಳಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಹೇ ಉಪಕುಲಪತಿಗಳಾದ ಡಾ ಲಿಂಗೇಗೌಡರು, ರಿಜಿಸ್ಟ್ರಾರ್ ಎಂ ಜೆಡ್ ಕುರಿಯನ್, ಮೌಲ್ಯ ಮಾಪನದ ಮುಖ್ಯಸ್ಥರಾದ ಡಾ ಗುರು ಶಂಕರ್ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಸಾಣಿಕೊಪ್ಪ, ದಂತ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡ್ವ , ಆಡಳಿತಾಧಿಕಾರಿ ಬಿ.ನಂಜುಂಡಪ್ಪ , ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಭಾಗವಹಿಸಿದ್ದರು .