ಮೇ 12 ರಿಂದ 8 ದಿನಗಳ ಕಾಲ ವಾಸವಿ ಜಯಂತಿ ಕಾರ್ಯಕ್ರಮ

ತುಮಕೂರು- ಆರ್ಯವೈಶ್ಯ ಮಂಡಳಿ, ಕನ್ಯಾಕಪರಮೇಶ್ವರಿ ದೇವಸ್ಥಾನ ಸಮಿತಿ ಹಾಗೂ ವಾಸವಿ ಯುವ ಜನಸಂಘ ಸೇರಿದಂತೆ ಎಲ್ಲ ಸೋದರ ಸಂಸ್ಥೆಗಳ ಸಹಯೋಗದಲ್ಲಿ ಮೇ ೧೨ ರಿಂದ ೧೯ ರವರೆಗೆ ೮ ದಿನಗಳ ಕಾಲ ವಾಸವಿ ಜಯಂತಿ ಕಾರ್ಯಕ್ರಮವನ್ನು ನಗರದ ಚಿಕ್ಕಪೇಟೆಯ ವಾಸವಿ ಅಮೃತಮಹಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ಜಿ.ಕೆ. ಲೋಕೇಶ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ೧೨ ರಂದು ಬೆಳಿಗ್ಗೆ ೬ ರಿಂದ ವಿವಿಧ ಪೂಜಾ ಕಾರ್ಯ ಕ್ರಮಗಳು ನಡೆಯಲಿದ್ದು, ಸಂಜೆ ಗಣಪತಿ ಪೂಜೆ, ವಾಸ್ತುಹೋಮ, ದೇವತಾ ಕಾರ್ಯಕ್ರಮ ಹಾಗೂ ಮಕ್ಕಳಿಗೆ ವಾಸವಿ ವೇಷ ಮತ್ತು ವಿವಿಧ ವೇಷ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾತ್ರಿ ೭.೩೦ಕ್ಕೆ ವಾಸವಿ ಜಯಂತಿ ಸಮಾರಂಭಕ್ಕೆ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಆರ್.ಎಲ್. ರಮೇಶ್‌ಬಾಬು ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಟಿಎಂಸಿಸಿ ಅಧ್ಯಕ್ಷರಾದ ಎನ್.ಎಸ್. ಜಯಕುಮಾರ್ ಪಾಲ್ಗೊಳ್ಳುವರು.

ಮೇ ೧೩ ರಂದು ಬೆಳಿಗ್ಗೆ ೬ಕ್ಕೆ ಸುಪ್ರಭಾತ, ಕುಲದೇವಿ ವಾಸವಿ ಮಾತೆ, ಪರಿವಾರ ದೇವರುಗಳಿಗೆ ಅಭಿಷೇಕ, ರುದ್ರಾಭಿಷೇಕ ಮತ್ತು ರುದ್ರಹೋಮ, ಪೂಜಾದಿಗಳು ನೆರವೇರಲಿವೆ. ಸಂಜೆ ೭ಕ್ಕೆ ಸಾಂಸ್ಕöÈತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ,  ಭರತನಾಟ್ಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. 
ಇದೇ ವೇಳೆ ನಗರೇಶ್ವರನ ಆರಾಧಕಿ ಕನ್ನಿಕೆಗೆ ನಾಗ ಕನ್ನಿಕೆ ಅಲಂಕಾರ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.

ಮೇ ೧೪ಕ್ಕೆ ತ್ರಿಶಕ್ತಿ ಅಲಂಕಾರ, ಮೇ ೧೫ಕ್ಕೆ ಮಯೂರಿ ಅಲಂಕಾರ, ಭರತನಾಟ್ಯ ಕಾರ್ಯಕ್ರಮ, ಮೇ ೧೬ ಸ್ವರ್ಣಭೂಷಿತೆ ಅಲಂಕಾರ, ಊಂಜಲ್ ಸೇವೆ. ಮೇ ೧೭ ಕುಬೇರ ಲಕ್ಷಿ÷್ಮ ಅಲಂಕಾರ, ಮೇ ೧೮ ರಂದು ವಿಶೇಷ ಪುಷ್ಪಾಲಂಕಾರ, ಸಂಜೆ ರಾಜಬೀದಿ ಉತ್ಸವ, ಮೇ ೧೯ ರಂದು ಗಂಗಾದೇವಿ ಅಲಂಕಾರ, ಸಂಜೆ ೭ ಗಂಟೆಗೆ ಸಮಾರೋಪ ಸಮಾರಂಭ, ನಂಜುಂಡೇಶ್ವರ ಉಯ್ಯಾಲೋತ್ಸವ ನಡೆಯಲಿದೆ ಎಂದರು.
ಸಮಾರೋಪ ಸಮಾರಂಭವನ್ನು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಆರ್.ಎಲ್. ರಮೇಶ್‌ಬಾಬು ಉದ್ಘಾಟಿಸುವರು. ಅತಿಥಿಗಳಾಗಿ ಎನ್.ಎಸ್. ಜಯಕುಮಾರ್, ಗೋವಿಂದರಾಜು, ಸಿ.ಆರ್. ಮೋಹನ್‌ಕುಮಾರ್, ಸಿ.ಕೆ. ಬ್ರಹ್ಮಾನಂದ್, ಟಿ.ಟಿ. ಸತ್ಯನಾರಾಯಣ, ಆರ್.ಎನ್. ನಾಗೇಂದ್ರ, ಡಿ.ಎ. ಮೋಹನ್, ಶೇಷುರಮೇಶ್, ಧನಲಕ್ಷ್ಮಿ,  ಅಮರನಾಥ್ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಜಿ.ಕೆ. ಲೋಕೇಶ್ ವಹಿಸುವರು ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಾಸವಿ ಸಮಾಜದ ಮುಖಂಡರಾದ ರಮೇಶ್‌ಬಾಬು, ಸಿ.ಆರ್.ಮೋಹನಕುಮಾರ್, ಬ್ರಹ್ಮಾನಂದ, ಶೇಷುರಮೇಶ್, ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *