ತುಮಕೂರು : ಸಖೀಗೀತ ಪ್ರಕಾಶನದಿಂದ ಬುದ್ಧ ಪೂರ್ಣಿಮೆ ಮತ್ತು ಕೆ.ಬಿ.ಸಿದ್ದಯ್ಯ ಮತ್ತು ವೀಚಿ ಅವರು ಅನುವಾದಿಸಿರುವ ನಾಲ್ಕು ಶ್ರೇಷ್ಠ ಸತ್ಯಗಳು ಪುಸ್ತಕ ಬಿಡುಗಡೆ ಸಮಾರಂಭ ಮೇ 12ರಂದು ಸಂಜೆ 6ಗಂಟೆಗೆ ತುಮಕೂರಿನ ಅಶೋಕ ರಸ್ತೆಯ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಬುದ್ಧಜಯಂತಿ ಉದ್ಘಾಟನೆಯನ್ನು ಲೇಖಕರಾದ ಅಗ್ರಹಾರ ಕೃಷ್ಣಮೂರ್ತಿ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಬಾಲಗುರುಮೂರ್ತಿ ವಹಿಸಲಿದ್ದು, ಶ್ರೀಮತಿ ಪಿ.ಗಂಗರಾಜಮ್ಮ, ಟಿ.ಸಿ.ವಿಸ್ಮಯ ವೀ.ಚಿಕ್ಕವೀರಯ್ಯ ಉಪಸ್ಥಿತರಿರುವರು.
ಅಧ್ಯಕ್ಷತೆಯನ್ನು ಲೇಖಕರಾದ ತುಂಬಾಡಿ ರಾಮಯ್ಯ ವಹಿಸುವರು.