ಜ್ಞಾನಸಿರಿ ಕ್ಯಾಂಪಸ್ ನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಚಾಲನೆ

ತುಮಕೂರು : ಹೊಸದಾಗಿ ಆರಂಭವಾದಾಗ ಹೆಚ್ಚಿನ ಕೊರತೆಗಳು ಇಲ್ಲಿ ಇದ್ದವು ಈಗ ಒಂದೊಂದಾಗಿ ಅಭಿವೃದ್ಧಿಯಾಗುತ್ತಿವೆ, ಈ ವರ್ಷ ಮುಗಿಯುವುದರೊಳಗೆ ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ನೀವು ನಿರೀಕ್ಷಿಸಬಹುದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಂ ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ ನೂತನ ಜ್ಞಾನಸಿರಿ ಆವರಣದಲ್ಲಿ ಸೋಮವಾರ ಶ್ರೀ ಅನ್ನಪೂರ್ಣೆಶ್ವರಿ ಆಹಾರ ವಿತರಣಾ ಕಾರ್ಯಕ್ರಮದ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಇವರು, ಇಲ್ಲಿ ಆಹಾರ ವಿತರಣೆಯನ್ನು ಆರಂಭಿಸಿದ್ದೇವೆ ಊಟದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಕ್ಯಾಂಪಸ್ ಅಭಿವೃದ್ಧಿಯನ್ನು ಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಮರಗಳನ್ನು ಬೆಳೆಸುವ ಯೋಜನೆ ಇದೆ ಅದೂ ಕೂಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಣ್ಣು ಹಂಪಲುಗಳ ಮರಗಳನ್ನು ಬೆಳೆಸಲಾಗುವುದು, ವಿದ್ಯಾರ್ಥಿಗಳ ಇಲ್ಲಿನ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳುಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದಾಜೀ ಮಹಾರಾಜ್ ಅವರು ಮಾತನಾಡಿ ಕೇವಲ ಕೆಲಸ ಪಡೆಯುವುದು ಶಿಕ್ಷಣವಲ್ಲ ಬದಲಾಗಿ ದೇಶದ ಉತ್ತಮ ಪ್ರಜೆಯಾಗುವುದು ಮುಖ್ಯ, ನಿಮಗೆ ಎಲ್ಲಾ ರೀತಿಯ ಸೌಲಭ್ಯ ಸಿಗುತ್ತಿದೆ ಅದನ್ನು ಬಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರು ವಿ ವಿ ಯ ಕುಲಸಚಿವರಾದ ನಾಹಿದ ಜಮ್ ಜಮ್, ಕಲಾ ಕಾಲೇಜಿನ ಪ್ರಾಂಶುಪಾಲೆ ದಾಕ್ಷಾಯಿಣಿ, ಪ್ರಜಾಪ್ರಗತಿ ದಿನಪತ್ರಿಕೆಯ ಸಂಪಾದಕರಾದ ಎಸ್ ನಾಗಣ್ಣ , ಕೈಗಾರಿಕಾ ಉದ್ಯಮಿಗಳಾದ ಹೆಚ್. ಜಿ. ಚಂದ್ರಶೇಖರ್, ಕಲ್ಕಿ ರೈಸ್ ಇಂಡರ್ಸ್ಟಿಯ ಮಾಲೀಕರಾದ ಆರ್. ಎಲ್. ರಮೇಶ್ ಬಾಬು, ನಟರಾಜು ಶೆಟ್ಟಿ ಹಾಗೂ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಪರಶುರಾಮ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *