ನ.10ರಂದು ಹಾಲು ಒಕ್ಕೂಟದ ಚುನಾವಣೆ : ಮತದಾನಕ್ಕೆ ಗುರುತಿನ ಚೀಟಿ ಕಡ್ಡಾಯ

ತುಮಕೂರು(ಕವಾ)ನ.8: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನವೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಮತದಾನ ಸಮಯದಲ್ಲಿ ಒಕ್ಕೂಟದಿಂದ ಸಂಘದ ಪ್ರತಿನಿಧಿ/ಡೆಲಿಗೇಟ್ ಅವರಿಗೆ ನೀಡಿರುವ ಗುರುತಿನ ಚೀಟಿಯನ್ನು ಮಾತ್ರ ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ರಿಟರ್ನಿಂಗ್ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಸಹಾಯವಿಲ್ಲದೆ ಚಲಿಸಲು ಸಾಧ್ಯವಿಲ್ಲದಿರುವ ಅಂಧ(ದೃಷ್ಟಿಹೀನ) ಅಥವಾ ಅಶಕ್ತ ಮತದಾರರ ಜೊತೆಗೆ ಸಹಾಯಕರನ್ನು ಪಡೆಯಲು ಅವಕಾಶವಿದ್ದು, ಸಹಾಯಕರಾಗಿ ಬರುವ ವ್ಯಕ್ತಿಗಳು ಮತದಾರರ ಕುಟುಂಬದ ಸದಸ್ಯ(18 ವರ್ಷ ಮೇಲ್ಪಟ್ಟವರಾಗಿದ್ದು, ಆರೋಗ್ಯವಂತ ಹಾಗೂ ಸ್ವಸ್ಥಮನಸ್ಕರಾಗಿರಬೇಕು)ರಾಗಿರಬೇಕು. ಅಶಕ್ತ ಮತದಾರರಿಗೆ ಸಹಾಯಕರನ್ನು ಪಡೆಯುವ ಸಂಬಂಧ ಯಾವುದೇ ಗೊಂದಲಗಳಿದ್ದಲ್ಲಿ ರಿಟರ್ನಿಂಗ್ ಅಧಿಕಾರಿಯವರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *