ತುಮಕೂರು : ಹದಿನಾರನೇ ಶತಮಾನದ ಕನಕದಾಸರ ಕೀರ್ತನೆ “ತಲ್ಲಣಸದಿರುವ ಮನವೇ” ಎಂಬ ಶೀರ್ಷಿಕೆಯೊಂದಿಗೆ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಜನರಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸುವುದರ ಜೊತೆಗೆ, ಇಂದಿನ ತಲ್ಲಣಗಳಿಗೆ ಎದುರಾಗಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ವಿನೂತನ ಸಂಸ್ಕøತಿ ಚಿಂತನ ಚಾರಣ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ತುಮಕೂರಿನಲ್ಲಿ ಡಿಸೆಂಬರ್ 27 ಶನಿವಾರ ಶ್ರೀದೇವಿ ಮೆಡಿಕಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠ್ಟಿಯಲ್ಲಿಂದು ಮಾತನಾಡಿದ ಅವರು, ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠÀಜಾತಿ, ವರ್ಗ, ವರ್ಣ, ಲಿಂಗ ಭೇಧವಿಲ್ಲದೆ ಎಲ್ಲಾ ಸಮುದಾಯಗಳ, ಅದರಲ್ಲಿಯೂ ಹಿಂದುಳಿದ ಸಮುದಾಯಗಳ ಸಾಮಾಜಿಕ ಏಳಿಗೆಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದು ಇದರ ಮುಂದುವರೆದ ಭಾಗವೇತಲ್ಲಣ್ಣಿಸದಿರು ಮನವೆ ಕಾರ್ಯಕ್ರಮವಾಗಿದೆ ಎಂದರು.
ಇಂದು ಕುರುಬ ಸಮುದಾಯವೂ ಸೇರಿದಂತೆ ಅನೇಕ ಹಿಂದುಳಿದ ಸಮುದಾಯಗಳು ತಲ್ಲಣದಲ್ಲಿವೆ. ಆತಂಕದಲ್ಲಿರುವ ಸಮುದಾಯಗಳಿಗೆ ಸಾಂತ್ವನ ಹೇಳುವುದು ಸಮುದಾಯದ ಹಿರಿಯರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಿಂದ ಪ್ರಾರಂಭವಾದ ತಲ್ಲಣಿಸದಿರು ಮನವೆ ಕಾರ್ಯಕ್ರಮ, ರಾಜಧಾನಿಯಿಂದ ಗ್ರಾಮೀಣ ಭಾಗಕ್ಕೆ ವಿಸ್ತರಿಸುತ್ತಾ ಬಂದಿದೆ. ನಮ್ಮ ಶ್ರೀದೇವಿ ಶಿಕ್ಷಣ ಸಂಸ್ಥೆಯೂ ಕಳೆದ ವರ್ಷಗಳಿಂದ ಅತಿ ಹೆಚ್ಚು ಅಂಕ ಪಡೆದ ಕುರುಬ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನುಕೈಗೆತ್ತಿಕೊಂಡಿದೆ.ಇದಕ್ಕಾಗಿ ಪ್ರತಿವರ್ಷಎರಡುಕೋಟಿ ರೂಗಳನ್ನು ಮೀಸಲಿರಿಸಿದೆ.ಇಂತಹ ಕಾರ್ಯಕ್ರಮಗಳು ಹೆಚ್ಚು ಜನರಿಗೆ ತಲುಪುವಂತಾಗ ಬೇಕು ಎಂದು ಡಾ.ಹುಲಿನಾಯ್ಕರ್ ನುಡಿದರು.
ಡಿಸೆಂಬರ್ 27 ರ ಶನಿವಾರ ನಡೆಯುವ ತಲ್ಲಣಿಸದಿರು ಮನವೇ ಸಂಸ್ಕøತಿ ಚಿಂತನ ಚಾರಣ ಕಾರ್ಯಕ್ರಮ ಕುರಿತು ಮಾತನಾಡಿದ ಕಾರ್ಯಕ್ರಮದ ಸಂಯೋಜಕರಾದ ಡಾ.ಮಂಜಪ್ಪ ಮಾಗೋಡಿ, ತಲ್ಲಣದಲ್ಲಿರುವ ಯುವ ಮನಸ್ಸುಗಳಿಗೆ ತಿಳಿ ಹೇಳುವ ನಿಟ್ಟಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಲ್ಲಣಿಸದಿರುವ ಮನವೇ ಕಾರ್ಯಕ್ರಮ ಬಹಳ ಮೆಚ್ಚುಗೆ ಪಡೆದಿದೆ.ಇದುವರೆಗೂ ನಾಲ್ಕು ಕಾರ್ಯಕ್ರಮಗಳ ಜರುಗಿದ್ದು, ಶ್ರೀದೇವಿ ಮೆಡಿಕಲ್‍ಕಾಲೇಜು ಸಭಾಂಗಣದಲ್ಲಿ ಡಿಸೆಂಬರ್ 27 ರ ಶನಿವಾರ ನಡೆಯುವುದು 5ನೇ ಕಾರ್ಯಕ್ರಮವಾಗಿದೆ. ಇದರ ಜೊತೆಗೆ ಎಲ್ಲಾ ಸಮುದಾಯದ ಐಟಿ ಮತ್ತು ಬಿಟಿ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದು ಕನಿಷ್ಠ ಮೂರು ವರ್ಷವಾದರೂ ಉದ್ಯೋಗ ದೊರೆಯದೆ ಇರುವ ನಿರುದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು, ರೀನಿ ಟೆಕ್ನಾಲಜಿ ಸಹಯೋಗದಲ್ಲಿ ಅಭ್ಯರ್ಥಿಗಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಉಚಿತ ಊಟ, ವಸತಿಯೊಂದಿಗೆ ಎಂ.ಎನ್.ಸಿ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಆರ್ಹರಾಗುವ ಕೌಶಲ್ಯ ಗಳಿಸಲು ಉದ್ಯೋಗ ಸಿರಿ ಎಂಬ ತರಬೇತಿ ನೀಡಲು ಕನಕ ಗುರುಪೀಠ ನಿರ್ಧರಿಸಿದೆ. ಎಲ್ಲಾ ಸಮುದಾಯದ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸ್ಥಳದಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಬಹುದು ಎಂದರು.
ಡಿಸೆಂಬರ್ 27 ರ ಶನಿವಾರ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ.ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದು, ಶ್ರೀಕ್ಷೇತ್ರ ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಉದ್ಯೋಗ ಸಿರಿ ಕಾರ್ಯಕ್ರಮಕ್ಕೆ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು. ಹಿರಿಯ ಪತ್ರಕರ್ತರಾದ ದಿನೇಶ್‍ಅಮೀನ್ ಮಟ್ಟು ಅವರು ಪ್ರಸಕ್ತ ಭಾರತ ಮತ್ತು ಗಾಂಧೀಜಿ ಚಿಂತನೆಗಳ ಪ್ರಸ್ತುತತೆ ಎಂಬ ವಿಚಾರ ಕುರಿತು, ಹಿರಿಯ ಪ್ರಾಧ್ಯಾಪಕ ಪ್ರೊ.ನಾಗೇಂದ್ರ ಕುಮಾರ್.ಬಿ.ಸಿ.ಅವರು ಕನಕದಾಸರ ಸಾಮಾಜಿಕ ಮತ್ತು ಅಧ್ಯಾತ್ಮಿಕತೆಗಳ ಅನುಸಂಧಾನ ಎಂಬ ವಿಚಾರ ಮಂಡಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಶಂಕರ್ ಮತ್ತು ಆಯುಷ್ ಟಿ.ವಿ.ನಿರ್ದೇಶಕರಾದ ಜಿ.ಶ್ರೀನಿವಾಸ್ ಅವರನ್ನು ಅಭಿನಂದಿಸಲಾಗುವುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಭಾಂಧವರು, ಸಾರ್ವಜನಿಕರು, ಉದ್ಯೋಗಾ ಕಾಂಕ್ಷಿಗಳು ಭಾಗವಹಿಸಿ ಯಶಸ್ವಿಗೊಳಿಸುವಂತೆ ಡಾ.ಮಂಜಪ್ಪ ಮಾಗೋಡಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ.ರಮಣ್ ಹುಲಿನಾಯ್ಕರ್, ಡಾ.ಲಾವಣ್ಯರಮಣ್ ಹುಲಿನಾಯ್ಕರ್, ರೇವಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ್ ಓಡೆಯರ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಂತರಿಕ ಲೆಕ್ಕಪರಿಶೋಧಕರಾದ ಟಿ.ಇ.ರಘುರಾಮ್, ಕನಕ ಯುವ ಸೇನೆಯ ಅಧ್ಯಕ್ಷ ಕೆಂಪರಾಜು, ಮುಖಂಡರಾದ ಎಂ.ಧರ್ಮರಾಜ್, ಸುನಿತ ನಟರಾಜ್, ರೇಣುಕಾ ಪ್ರಸಾದ್, ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿನರಸಿಂಹರಾಜು, ಇಂದ್ರಕುಮಾರ್,ಕಾಳಿದಾಸ ವಿದ್ಯಾವರ್ಧಕ ಸಂಘದ ಬಸವರಾಜು, ಚಿಕ್ಕಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.