ತುಮಕೂರು:ಶ್ರೀರಾಮನವಮಿಯ ದಿನ ಸತ್ಯಕ್ಕೆ-ಧರ್ಮಕ್ಕೆ ಜಯಸಿಕ್ಕಿದೆ, ಸಣ್ಣ ಮಕ್ಕಳಿಗೆ ನಕಲಿ ಬ್ಯಾಂಡ್ ವಿತರಿಸಿದ ಡಿ.ಸಿ.ಗೌರಿಶಂಕರ್ ಅವರ ಶಾಸಕ ಸ್ಥಾನ ಅಸಿಂಧು ಎಂದು ಹೈಕೋರ್ಟ್ ನೀಡಿರುವ ತೀರ್ಪನ್ನು ಚುನಾವಣಾ ವಿಷಯವಾಗಿ ಮಾಡಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಬಿ.ಸುರೇಶ್‍ಗೌಡ ಹೇಳಿದರು.
ಅವರಿಂದು ತುಮಕೂರು ನಗರದ ಬಿಜೆಪಿ ಕಛೇರಿಯಲ್ಲಿ sಸುದ್ದಿಗೋಷ್ಠಿಯಲ್ಲಿ ಮಾತನಾಡಿ 5ವರ್ಷಗಳ ಹೋರಾಟಕ್ಕೆ ನನಗೆ ಜಯ ಸಿಕ್ಕಿದೆ, ಹದಿನಾರು ಸಾವಿರ ಮಕ್ಕಳಿಗೆ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿಯು ಇನ್ಸೂರೆನ್ಸ್ ಮಾಡಲು ಒಪ್ಪಿಕೊಂಡಿತ್ತು, ಕೆಲ ಮಕ್ಕಳಿಗೆ ಮಾತ್ರ ಬಾಂಡ್‍ಗಳನ್ನು ವಿತರಿಸಲಾಗಿತ್ತು, ಇದೇ ಸಂದರ್ಭಕ್ಕೆ ಚುನಾವಣೆ ಘೋಷಣೆಯಾಗಿದ್ದರಿಂದ ಇನ್ಸೂರೆನ್ಸ್ ಬಾಂಡ್‍ಗಳನ್ನು ಮಾಡುವುದನ್ನು ಕಂಪನಿಯು ನಿಲ್ಲಿಸಿತು ಎಂದರು.
ಆದರೆ ಜಿಲ್ಲಾ ಜೆಡಿಎಸ್‍ನ ಮಹಿಳಾ ಮೋರ್ಚಾದ ರೇಣುಕಮ್ಮ, ಜಿ.ಪಂ. ಸದಸ್ಯರಾಗಿದ್ದ ಪಾಲನೇತ್ರಯ್ಯ, ನಕಲಿ ಬಾಂಡ್ ಹಂಚುವ ವೇಳೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ, ಇದೇ ರೀತಿ ಹಿರೇಹಳ್ಳಿ ಮಹೇಶ್, ಸುನಂದ್ರಮ್ಮ, ಕೃಷ್ಣೇಗೌಡರು, ಮಂಜುನಾಥ ಅವರುಗಳು ನಕಲಿ ಬಾಂಡ್ ವಿತರಿಸುವಾಗ ಸಿಕ್ಕಿ ಬೀಳುತ್ತಾರೆ.
ಫಲಿತಾಂಶ ಬಂದ 45 ದಿನದೊಳಗೆ ಆರ್‍ಪಿ ಆಕ್ಟ್ ಅಡಿ ಚುನಾವಣಾ ಆಯೋಗಕ್ಕೆ ತಕರಾರು ಅರ್ಜಿಯನ್ನು ನಾನು ಸಲ್ಲಿಸೆದೆ, ಆದರೆ 3 ಜನ ನ್ಯಾಯಾಧೀಶರು ಬದಲಾದರು, ನ್ಯಾಯಾಧೀಶರಾದ ಬೋಪಯ್ಯ ಮತ್ತು ನಾರಾಯಣಪ್ಪ ವರ್ಗಾವಣೆಯಾದರೆ, ನ್ಯಾಯಾಧೀಶರಾದ ಸುನಿಲ್‍ದತ್ತ ಯಾದವ್ ತನಿಖೆಯನ್ನು ಕೈಗೆತ್ತಿಕೊಂಡರು.
ಚುನಾವಣೆಯಲ್ಲಿ ಅಕ್ರಮವೆಸಗಿರುವುದು ಸಾಭೀತು ಆಗಿರುವುದರಿಂದ ಡಿ.ಸಿ.ಗೌರಿಶಂಕರ ಅವರ ಶಾಸಕ ಸ್ಥಾನವನ್ನು ಅಸಿಂಧು ಎಂದು ತೀರ್ಪು ನೀಡಿದ್ದು, ಹಾಗೆಯೇ ಮೇಲ್ಮನವಿ ಸಲ್ಲಿಸಲು 30 ದಿಗಳ ಕಾಲಾವಕಾಶವಿದ್ದು, ತ್ರಿ ಸದಸ್ಯ ಪೀಠವು ಒಂದು ತಿಂಗಳು ಈ ತೀರ್ಪಿಗೆ ತಡೆಯಾಜ್ಞೆ ನೀಡಿದ್ದು, ಈಗಾಗಲೇ ಸುಪ್ರೀಂ ಕೋರ್ಟ್‍ಗೆ ಕೆವಿಯೆಟ್ ಸಲ್ಲಿಸಲು ತಯಾರಿ ನಡೆಸಿರುವುದಾಗಿ ತಿಳಿಸಿದರು.
ಚುನಾವಣೆಯಲ್ಲಿ ಭ್ರಷ್ಟಚಾರ ನಡಸಿದ ಪಾಲನೇತ್ರಯ್ಯ ಜಿ. ಅರೇಹಳ್ಳಿ, ಮಂಜುನಾಥ್, ಕೃಷ್ಣಗೌಡ ಶ್ರೀಮತಿ ರೇಣುಕಮ್ಮ, ಮತ್ತು ಸುನಂದಮ್ಮ ಅವರುಗಳನ್ನು ಚುನಾವಣೆಯಲ್ಲಿ ಭ್ರಷ್ಟಚಾರ ನಡೆಸಿದ್ದಕ್ಕಾಗಿ ಆರ್.ಪಿ.ಕಾಯ್ದೆಯ ಸೆಕ್ಷನ್99(1)(ಎ)(II) ಪ್ರಕಾರ ಚುನಾವಣಾ ಆಕ್ರಮದಡಿ ಕ್ರಮ ಜರುಗಿಸಲು ಆದೇಶಸಲಾಗಿದೆ ಎಂದು ತಿಳಿಸಿದರು.
ಈ ಮಧ್ಯೆ ಸುಪ್ರಿಂಕೋರ್ಟ್‍ಗೆ ಈ ಕೇಸಿಗೆ ತಡೆಯಾಜ್ಞೆ ನೀಡಲು ಮೇಲ್ಮನವಿ ಸಲ್ಲಿಸಿದ್ದನ್ನು ವಾಜಾಗೊಳಿಸಿ ತನಿಖೆಗೆ ಆದೇಶಿತು ಈ ಹಿನ್ನಲೆಯಲ್ಲಿ ನನಗೆ ಮತ್ತು 16 ಸಾವಿರ ಮಕ್ಕಳಿಗೆ ಜಯ ಸಿಕ್ಕಿದೆ ಎಂದರು.
ಧರ್ಮ-ಸತ್ಯ ಇದೆ ಎಂಬುದಕ್ಕೆ ಶ್ರೀರಾಮ ನವಮಿಯಂದು ಜಯಸಿಕ್ಕಿರುವುದೇ ಸಾಕ್ಷಿ ಎಂದರು. ಈಗ ಅವರು ಯಾವ ಕಾರಣಕ್ಕಾಗಿ ಶಾಸಕ ಸ್ಥಾನ ಅಸಿಂಧು ಎಂದು ಹೈಕೋರ್ಟ್ ತೀರ್ಪು ನಿಡಿದೆ ಎಂಬುದನ್ನು ಮೇಲ್ಮನವಿಯನ್ನು ಸಲ್ಲಿಸದರೆ ಸುಪ್ರೀಂಕೋರ್ಟ್‍ಗೆ ಹೇಳಬೇಕಾಗಿದೆ ಎಂದರು.
ನಮ್ಮ ಪರವಾಗಿ ನ್ಯಾಯವಾದಿಗಳಾದ ನಳಿನ ಮಾಯಾಗೌಡ, ಮತ್ತು ಮಂಜುನಾಥ ಅವರುಗಳು ವಾದ ಮಂಡಿಸಿದ್ದರು ಎಂದು ತಿಳಿಸಿದರು.