ತುಮಕೂರು : ಆಶಾ ಕಾರ್ಯಕರ್ತೆಯರನ್ನು ಪ್ರೋತ್ಸಾಹಧನದ ಹೆಸರಲ್ಲಿ ಕಡಿಮೆ ವೇತನಕ್ಕೆ ದುಡಿಸಿಕೊಂಡು ಇಲಾಖೆಯ ಎಲ್ಲಾ ಕೆಲಸಗಳ ಜವಾಬ್ದಾರಿಯನ್ನು ಹೊರಿಸುವುದು ಸರಿಯಲ್ಲ ಈ ಪರಿಸ್ಥಿತಿ ಸರಿಹೋಗಲು ಒಗ್ಗಟ್ಟಿನ ಹೋರಾಟ ಮಾಡಬೇಕು, ಈ ಅನ್ಯಾಯ ಸರಿಹೋಗಬೇಕೆಂದು ಎಂದು ಚಿಂತಕ ಕೆ.ದೊರೈರಾಜ್ ಆಗ್ರಹಿಸಿದರು.
ಅವರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದುಡಿಯುವ ವರ್ಗದ ಇತಿಹಾಸ ಬಹಳ ಧೀರ್ಘವಾದದ್ದು, ಹೋರಾಟಗಳು ಅನ್ಯಾಯಗಳ ವಿರುದ್ಧ, ಸಮಾನತೆಗಾಗಿ, ದುಡಿಯುವ ಪರಿಸ್ಥಿತಿಯ ಸುಧಾರಣೆಗಾಗಿ ಚಳುವಳಿಯನ್ನು ಕಟ್ಟಿಕೊಂಡು ಬರುತ್ತಿದ್ದಾರೆ. ಅದರ ಫಲವಾಗಿ ಅಲ್ಪ ಸ್ವಲ್ಪ ಸೌಲಭ್ಯಗಳು ದೊರೆಯುತ್ತಿರುವೆ, ಕೇಂದ್ರ ಸರ್ಕಾರ ಜನರ ಬದುಕಿನ ಮೇಲೆ ತೀರ್ವ ದಾಳಿ ನಡೆಸಿದ್ದು ಎಲ್ಲಾ ಸಾಮಾಜಿಕ ಹಕ್ಕುಗಳನ್ನು ಕಸಿಯುತ್ತಿದ್ದಾರೆ. ಇಪಿಎಫ್, ಇಎಸ್‍ಐಯಂತ ಸೌಲಭ್ಯಗಳು ಕಾರ್ಮಿಕರ ಖಾತೆಗೆ ಜಮಾ ಆಗುವುದೇ ಕಷ್ಟ. ಆ ಸೌಲಭ್ಯಗಳ ಮೇಲೂ ಕತ್ತರಿ ಹಾಕಲಾಗಿದೆ. ಇನ್ನು ಬಿಡಿಗಾಸುಕೊಟ್ಟು ಕಡಿಮೆ ವೇತನ ಹೆಚ್ಚಿನ ಕೆಲಸದ ಹೊರೆಯನ್ನು ಎಲ್ಲೆಡೆ ಹೇರಲಾಗುತ್ತಿದೆ ಎಂದು ಹೇಳಿದರು.
ಆಶಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನವು ಸೆಪ್ಟೆಂಬರ್ 13,14 ರಂದು ಕಲಬುರ್ಗಿಯಲ್ಲಿ ಸಂಘಟಿಸಲಾಗಿದೆ ಎಂದು ಹೇಳಿದರು.
ಅತಿಥಿಗಳಾಗಿದ್ದ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಕಲ್ಯಾಣಿ ಮಾತನಾಡಿ, ಮಹಿಳೆಯರ ಮೇಲೆ ಇಂದು ಅವ್ಯಾಹತವಾಗಿ ದೌರ್ಜನ್ಯ ಅತ್ಯಾಚಾರಗಳು ನಡೆಯುತ್ತಿದ್ದು ಕುಸಂಸ್ಕøತಿ ಹೆಚ್ಚುತ್ತಿದೆ. ಅಶ್ಲೀಲ ಸಿನಿಮಾ ಸಾಹಿತ್ಯಗಳಿಂದ ಯುವಜನರ ನೈತಿಕ ಬೆನ್ನೆಲುಬನ್ನು ಆಳುವ ಬಂಡವಾಳಶಾಹಿ ವ್ಯವಸ್ಥೆ ಸೃಷ್ಠಿಸಿದ್ದು ದುಡಿಯುವ ಮಹಿಳೆಯರ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ದುಡಿಯುವ ಮಹಿಳೆಯರು ಹೊರಗು ಮನೆಯೊಳಗು ಕೆಲಸ ನಿರ್ವಹಿಸುತ್ತಾರೆ. ಇಂತಹ ಮಹಿಳೆಯರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ ನಾವು ಒಳ್ಳೆಯ ಸಮಾಜಕ್ಕೆ ಹೋರಾಟ ಕಟ್ಟಬೇಕು ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಆಶಾ ಸಂಘದ ಜಿಲ್ಲಾ ಸಂಚಾಲಕರಾದ ಮಂಜುಳ ಗೋನವಾರ ವಹಿಸಿದ್ದರು.
ಹಲವಾರು ವರ್ಷಗಳಿಂದ ಆಶಾ ಕೆಲಸ ನಿರ್ವಹಿಸಿ ಜನರಿಗೆ ಉತ್ತಮ ಸೇವೆ ನೀಡಿದ ಅಕಾಲಿಕವಾಗಿ ಮರಣ ಹೊಂದಿದ ಆಶಾ ಕಾರ್ಯಕರ್ತೆಯರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನೂತನ ಸಮಿತಿ:
ಗೌರವ ಅಧ್ಯಕ್ಷರಾಗಿ ಮಂಜುಳ ಗೋನವಾರ, ಅಧ್ಯಕ್ಷರಾಗಿ ಎಂ.ಆರ್. ನಿರ್ಮಲ, ಕಾರ್ಯದರ್ಶಿಗಳಾಗಿ ರೇಖಾ, ಉಪಾಧ್ಯಕ್ಷರಾಗಿ ವಿನೋದ, ಮೀನಾಕ್ಷಿ, ಶಾರದಮ್ಮ, ಲಲಿತಮ್ಮ, ಗಿರಿಜಮ್ಮ ಕಮಲ ಡಿ ಎಸ್, ಲತಾ ಹೆಚ್. ಎಸ್, ನಾಗರತ್ನಮ್ಮ, ಪುಷ್ಪ, ಜಂಟಿ ಕಾರ್ಯದಶಿಗಳಾಗಿ ಜಯಲಕ್ಷ್ಮಿ,ಗಾಯಿತ್ರಿ, ಸಾವಿತ್ರಮ್ಮ, ಪ್ರೇಮ, ಧನಲಕ್ಷ್ಮಿ ಸೇರಿದಂತೆ ಇಪ್ಪತ್ತು ಜನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಪ್ಪತ್ತು ಜನ ಕೌನ್ಸಿಲ್ ಸಲಹೆಗಾರರಾಗಿ ಎಂ.ವಿ.ಕಲ್ಯಾಣಿ, ಆಯ್ಕೆಯಾದರು.