ಮಧುಗಿರಿ : ಗಂಡನ ಮನೆಯ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮಧುಗಿರಿ ಪಟ್ಟಣದ ಒಂದನೇ ಬ್ಲಾಕ್ ನ ಅಲ್ಪಾ ಮೇಡಿಕಲ್ಸ್ ಸಮೀಪದ ವಾಸಿಗಳಾದ ಮಹಮ್ಮದ್ ಶಫಿ ಪತ್ನಿ 25 ವರ್ಷದ ಹಸೀನಾ, 3 ವರ್ಷದ ಪುತ್ರಿ ಅಲ್ಪಿಯಾ ಕೊನೆನ್, ಮತ್ತು 8ವರ್ಷದ ಅಫಿಯ ಕೊನೆನ್ ಎಂದು ಗುರುತಿಸಲಾಗಿದೆ.
ಅಲ್ಜಿಯಾ ಮತ್ತು ಆಪಿಯ ಕೊನೆನ್ ಇಬ್ಬರು ಹೆಣ್ಣು ಮಕ್ಕಳು ಎಸ್.ಎಂ.ಶಾಲೆಯ ವಿಧ್ಯಾರ್ಥಿಗಳು ಎಂದು ಹೇಳಲಾಗಿದೆ.
ಮಧುಗಿರಿ ಪಟ್ಟಣದಲ್ಲಿ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದ ಹಸೀನಾ ತಾಜ್ ಗುರುವಾರ ಮಧುಗಿರಿ ಬಳಿಯಿರುವ ಸಿದ್ದಾಪುರ ಕೆರೆಗೆ ಬಂದು ತನ್ನ ಇಬ್ಬರು ಮಕ್ಕಳ ಜೊತೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡನ ಕಿರುಕುಳವೇ ಆತ್ಮಹತ್ಯೆ ಕಾರಣ ಎಂದು ಹೇಳಲಾಗಿದೆ. ಸ್ಥಳಕ್ಕೆ ಮಧುಗಿರಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಧುಗಿರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.