ಪತ್ರಿಕೆಗಳು ಉದ್ಯಮವಾದ ಮೇಲೆ ಚಳುವಳಿಗಳಿಗೆ ಪೆಟ್ಟು- ಬಿ.ಆರ್. ಪಾಟೀಲ್

ತುಮಕೂರು : ಪತ್ರಿಕೆಗಳು ಚಳುವಳಿಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದವು 80ರ ದಶಕದಲ್ಲಿ ರೈತ ಚಳುವಳಿ ದಲಿತ ಚಳುವಳಿ ಸೇರಿದಂತೆ ಇತರೆ ಚಳುವಳಿಗಳು ಬಹಳ ದೊಡ್ಡದಾಗಿ ಬೆಳೆಯಲು ಅನುಕೂಲಕರವಾಗಿದ್ದವು, ಆದರೆ ಇಂದು ಪತ್ರಿಕೆಗಳು ಉದ್ಯಮವಾಗಿ ಬದಲಾದ ನಂತರ ಚಳುವಳಿಗಳಿಗೆ ಮಾಧ್ಯಮಗಳಲ್ಲಿ ಅಂತಹ ಮಹತ್ವ ಸಿಗುತ್ತಿಲ್ಲವಾದರಿಂದ ಇಂತಹ ಚಳುವಳಿಗಳು ಹೆಸರಿಲ್ಲದೆ ಹೋಗಿವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು ಮತ್ತು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.

39ನೆಯ ರಾಜ್ಯ ಪತ್ರಕರ್ತರ ಸಮ್ಮೇಳನದ ವಿಚಾರ ಗೋಷ್ಟಿಯಲ್ಲಿ ‘ಸಂವಿಧಾನ ಮತ್ತು ಮಾಧ್ಯಮ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಂವಿಧಾನದ ಬೇರುಗಳಿಗೆ ಕೊಡಲಿ ಪೆಟ್ಟು ಕೊಡುತ್ತಿರುವಂತಹ ಸನ್ನಿವೇಶಗಳು, ಘಟನೆಗಳು ವರದಿಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಪತ್ರಕರ್ತರು ಐಪಿಲ್ ಭಾರತ ಬಿಟ್ಟು ಬಿಪಿಎಲ್ ಭಾರತದ ಕಡೆ ಗಮನ ಹರಿಸಬೇಕಾಗಿದೆ, ಪಿ.ಸಾಯಿನಾಥ್ ರವರು ಪ್ರತೀ ಬಾರಿ ಪತ್ರಕರ್ತರಿಗೆ ಹೇಳುವ ಕಿವಿಮಾತಿದು ಎನ್ನುವ ಉಲ್ಲೇಖದೊಂದಿಗೆ ಮಾಧ್ಯಮ ತಜ್ಞರಾದ ಜಿ.ಎನ್ ಮೋಹನ್‍ರವರು ವಿಚಾರ ಮಂಡಿಸಿದರು.

‘ಸಂವಿಧಾನ ಮತ್ತು ಮಾಧ್ಯಮ’ ವಿಷಯ ಮಂಡಿಸಿದ ಅವರು ಇಂದು ಮಾಧ್ಯಮ ಕೇವಲ ಮಾಧ್ಯಮವಾಗಿ ಉಳಿದಿಲ್ಲ, ಸಂವಿಧಾನ ಜನಸಾಮಾನ್ಯರಿಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳಂತೆಯೇ ಪತ್ರಕರ್ತರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಸಂವಿಧಾನ ಹೇಗೆ ಮಾಧ್ಯಮವನ್ನು ರಕ್ಷಿಸುತ್ತದೆಯೋ ಹಾಗೆಯೇ ಮಾಧ್ಯಮವೂ ಸಂವಿಧಾನವನ್ನು ರಕ್ಷಿಸಬೇಕು ಎಂದರು.

ಇಡೀ ಜಗತ್ತಿನಲ್ಲಿ ಅಮೇರಿಕದಲ್ಲಿ ಮಾತ್ರ ಮಾಧ್ಯಮಕ್ಕೆ ಸಂವಿಧಾನದ ರಕ್ಟಣೆ ಇದೆ. ಬೇರೆ ರಾಷ್ಟ್ರಗಳಲ್ಲಿ ಇಲ್ಲ. ಜನರ ಪ್ರತಿನಿಧಿಯಾಗಿ ಕೆಲಸ ಮಾಡುವ ಮಾಧ್ಯಮಕ್ಕೆ ಸಾಮಾನ್ಯರಿಗೆ ಇರುವಂತೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. 19 (1) (ಎ)ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಎಂದರು. ಕೆಲವು ಪ್ರಕರಣಗಳ ಉದಾಹರಣೆಗಳನ್ನು ನೀಡುವುದರ ಮೂಲಕ ಅವರು ಪ್ರಸ್ತುತ ಸಂದರ್ಭದಲ್ಲಿ ಮಾಧ್ಯಮ ಮಿತ್ರರು ಯಾವ ವಿಷಯಗಳ ಕಡೆ ಹೆಚ್ಚು ಗಮನ ಹರಿಸಬೇಕು ಎನ್ನುವುದನ್ನು ವಿವರಿಸಿದರು.

ಟೆಲಕ್ಸ್ ರವಿ ಅವರು ಮಾತನಾಡಿ ಗಾಂಧಿ ಮತ್ತು ಅಂಬೇಡ್ಕರ್ ಅವರು ಪತ್ರಿಕೋದ್ಯಮದ ವೃತ್ತಿ ಬದುಕನ್ನು ಕಂಡವರು ಅಂಬೇಡ್ಕರ್ ಅವರು ಕಾನೂನು ಮಂತ್ರಿಗಳಾಗಿದ್ದಾಗ ಹಿಂದೂ ಕೋಡ್ ಬಿಲ್ ಗೆ ಸೋಲಾದ ಸಂದರ್ಭದಲ್ಲಿ ಅಲ್ಲಿಂದ ಹೊರ ಬಂದ ಅವರು ಮರುದಿನ ಸುದ್ದಿಗೋಷ್ಠಿಯಲ್ಲಿ ಊಹ.ಪೆÇೀಹಗಳಿಗೆ ಆಸ್ಪದ ಕೊಡದೆ ರಾಜೀನಾಮೆ ಇಂದಿನ ಕಾರಣಗಳನ್ನು ತಿಳಿಸಿದರು ಸತ್ಯ ಜನರಿಗೆ ತಿಳಿಯಬೇಕೆಂಬುದು ಇದರ ಆಶಯ ಆಗಿತ್ತು ಇಂದಿಗೂ ಕೂಡ ಮಾಧ್ಯಮಗಳು ಜನರಿಗೆ ಸತ್ಯತೆಯನ್ನು ತಿಳಿಸಬೇಕು ಎಂಬುದೇ ಇದರ ಉದ್ದೇಶವಾಗಿತ್ತು ಅದೇ ರೀತಿಯಲ್ಲಿ ಇಂದಿನ ಪತ್ರಕರ್ತರುಗಳು ಊಹಾಪೆÇೀಕದ ವಿಚಾರಗಳಿಗೆ ಮಣೆ ಹಾಕದೆ ಸತ್ಯತೆ ಸುದ್ದಿಯನ್ನು ಪ್ರಸರಿಸಬೇಕು ಎಂದು ತಿಳಿಸಿದರು.
.
ಎನ್ ರವಿಕುಮಾರ್ ಅವರು ವಿಚಾರ ಗೋಷ್ಠಿಯ ಮುನ್ನ ಪೂರಕ ಭಾಷಣ ಮಾಡಿದರೆ, ಆಳಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಆರ್. ಪಾಟೀಲ್ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಎ.ಎಸ್. ಪೊನ್ನಣ್ಣ ಅವರು ಬಾಗವಹಿಸಿದ್ದರು. ಸಾ.ಚಿ ರಾಜ್ ಕುಮಾರ್ ಅವರು ಸ್ವಾಗತ ಕೋರಿದರೆ ಶ್ಯಾ.ನ. ಪ್ರಸನ್ನ ಮೂರ್ತಿ ಅವರು ವಂದಿಸಿದರು.

Leave a Reply

Your email address will not be published. Required fields are marked *