ಚಿ.ನಾ.ಹಳ್ಳಿ : ತುಮಕೂರು ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಪ್ರಮುಖವಾಗಿ ಶೇಂಗಾ ಸೇರಿದಂತೆ ಎಣ್ಣೆಕಾಳುಗಳು, ದ್ವಿದಳ ಧಾನ್ಯ ಹಾಗೂ ರಾಗಿ ಬಿತ್ತನೆ ಮೇಲೆ ತೀವ್ರ ಪರಿಣಾಮ ಬೀರಿದ್ದು, ಆಹಾರ ಉತ್ಪಾದನೆ ಗಣನೀಯವಾಗಿ ಕುಸಿತ ಕಾಣಲಿದೆ ಆದ್ದರಿಂದ ಅಧಿಕಾರಿಗಳು ರೈತರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಹೇಳಿದರು.
ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿಯ ಸಂತೆ ಮೈದಾನದಲ್ಲಿ ರೈತರೊಂದಿಗೆ ನಾವು ಎಂಬ ಕಾರ್ಯಕ್ರಮವನ್ನು ಹಾಲಪ್ಪ ಪ್ರತಿμÁ್ಠನ, ಸರ್ವೋದಯ ಮಂಡಳಿ ಮತ್ತು ಜಗದೀಶ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನಾ & ಪಶು ಸಂಗೋಪನೆ ಇಲಾಖೆ, ವಲಯ ಅರಣ್ಯ ಅಧಿಕಾರಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಭಾಗವಹಿಸಿ ರೈತರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಸಲಹೆಗಳನ್ನು ನೀಡಿದರು.
ಮುಂಗಾರು ಮಳೆ ಕೈಕೊಟ್ಟಿದ್ದು, ಶೇಂಗಾ ಬಿತ್ತನೆ ಸಾಧ್ಯವಾಗಲಿಲ್ಲ. 70,250 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿದ್ದು ಈವರೆಗೂ ಅರ್ಧದಷ್ಟು ಪ್ರದೇಶದಲ್ಲμÉ್ಟೀ ಬಿತ್ತನೆ ಮಾಡಲಾಗಿದೆ. ಬಿತ್ತನೆ ಬೀಜ ಕಾಲಾವಧಿಯೂ ಬಹುತೇಕ ಮುಗಿದು ಹೋಗಿದೆ. ಹೀಗಾಗಿ, ಕೃಷಿ ಇಲಾಖೆ ದಾಸ್ತಾನು ಇಟ್ಟಿದ್ದ ಬೀಜ ಬಳಕೆ ಆಗಿಲ್ಲ ಎಂದು ಹೇಳಿದರು.
ಈ ಬಾರಿ 80% ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ.ನರೇಗಾ ಯೋಜನೆಯಡಿಯಲ್ಲಿ 150 ದಿನ ಕೆಲಸ ಮಾಡುವುದಕ್ಕೆ ಸರ್ಕಾರದಿಂದ ಅನುಮತಿ ದೊರಕಿದೆ ಹಾಗೂ ಖಾಸಗಿ ಜಮೀನಿನಲ್ಲಿ ಕೆಲಸಮಾಡಲು ಪರವಾನಗಿ ಇದೆ.ಬರ ಪರಿಹಾರವನ್ನು ನೋಡಿಕೊಳ್ಳಲು ನೋಡೆಲ್ ಅಧಿಕಾರಿಗಳ ನೇಮಕ: ಜಿಲ್ಲೆಯಾದ್ಯಂತ ಆಯಾ ತಾಲ್ಲೂಕುಗಳಲ್ಲಿ ತಹಶೀಲ್ದಾರರು ಪ್ರತಿ ಹೋಬಳಿಗಳಲ್ಲೂ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಬೇಕಾಗಿದೆ ಎಂದು ತಿಳಿಸಿದರು.
ಮೇವು ದಾಸ್ತಾನುಗಳ ಗಮನಕೊಟ್ಟು, ಜಿಲ್ಲೆಯ ಮೇವು ಸಂಗ್ರಹ ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಹಣ ನೀಡಬೇಕು. ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಬರ ನಿರ್ವಹಣೆ ಮಾಡಲಿದೆ ಹೇಳಿದರು.
ಹೆಸರು ಕಾಳು 10,780 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಿದ್ದು, ಸುಮಾರು 7 ಸಾವಿರ ಹೆಕ್ಟೇರ್ ನಲ್ಲμÉ್ಟೀ ಬಿತ್ತನೆಯಾಗಿತ್ತು. ಅದು ಮಳೆ ಕೊರತೆಯಿಂದ ಬಾಡಿ ಹೋಗಿದ್ದು, ಸರಿಯಾಗಿ ಕಾಳು ಕಟ್ಟಿಲ್ಲ. ತೊಗರಿ (16,044 ಹೆಕ್ಟೇರ್ ಗುರಿ), ಜೋಳ (3,500 ಹೆಕ್ಟೇರ್), ಮುಸುಕಿನ ಜೋಳ (30,577 ಹೆಕ್ಟೇರ್), ಅವರೆ (3,524 ಹೆಕ್ಟೇರ್), ಅಲಸಂದೆ (3,621 ಹೆಕ್ಟೇರ್), ಸಿರಿ ಧಾನ್ಯ (4,396 ಹೆಕ್ಟೇರ್) ಬಿತ್ತನೆಯಾಗಿಲ್ಲ. ಒಟ್ಟಾರೆಯಾಗಿ ಶೇಂಗಾ, ಹೆಸರು ಕಾಳು ಬಿಟ್ಟರೆ ಇತರೆ ಯಾವುದೇ ಬಿತ್ತನೆಯಾಗಿಲ್ಲ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ವೋದಯ ಮಂಡಳಿ ಅಧ್ಯಕ್ಷರಾದ ಪುಟ್ಟಕಾಮಣ್ಣ, ಜಗದೀಶ್ ಟ್ರಸ್ಟ್ ಅಧ್ಯಕ್ಷರಾದ ಜಗದೀಶ್, ಬ್ಲಾಕ್ ಅಧ್ಯಕ್ಷರುಗಳಾದ ಸಿ.ಡಿ. ಚಂದ್ರಶೇಖರ್, ಪಿ.ಟಿ ಚಿಕ್ಕಣ್ಣ.ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷ ರಘುನಾಥ್,ಕೃಷಿ ಇಲಾಖಾಧಿಕಾರಿ ರಂಗನಾಥ್, ಶರಣೇಶ್ ಸಹಾಯಕ ತೋಟಗಾರಿಕಾಧಿಕಾರಿ.ಪಶುವೈದ್ಯಾಧಿಕಾರಿ ಡಾ. ಆರ್ಯನ್ ನಾಗಭೂಷಣ್,ವಲಯ ಅರಣ್ಯಾಧಿಕಾರಿ ಕೃಷ್ಣಮೂರ್ತಿ, ಮತ್ತು ಕೃಷಿ ಮೇಲ್ವಿಚಾರಕರಾದ ಯೋಗೀಶ್ ಉಪಸ್ಥಿತರಿದ್ದರು