ನೀಟ್ ಪರೀಕ್ಷೆ ಫಲಿತಾಂಶ ಗೊಂದಲ-ಸೂಕ್ತ ತನಿಖೆ ನಡೆಸಿ ಮಕ್ಕಳಿಗೆ ಧೈರ್ಯ ತುಂಬಲು ಮುರಳೀಧರ ಹಾಲಪ್ಪ ಒತ್ತಾಯ

ತುಮಕೂರು.ಜೂ.08: ಮೆಡಿಕಲ್ ಮತ್ತು ಇಂಜಿನಿಯರಿಂಗ್ ಮಾಡುವ ಉದ್ದೇಶದಿಂದ ನೀಟ್ ಪರೀಕ್ಷೆ ಬರೆದ ಲಕ್ಷಾಂತರ ಮಕ್ಕಳಲ್ಲಿ ನೀಟ್ ಪರೀಕ್ಷೆ ಮತ್ತು ಫಲಿಶಾಂತದಲ್ಲಿ ಸಾಕಷ್ಟು ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆಂತಕ ಉಂಟಾಗಿದ್ದು, ಕೇಂದ್ರ ಸರಕಾರ ಸೂಕ್ತ ತನಿಖೆ ನಡೆಸಿ, ಗೊಂದಲ ಬಗೆಹರಿಸಿ, ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡರ ಮುರುಳೀಧರ ಹಾಲಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನೀಟ್ ಪರೀಕ್ಷೆ ಬರೆದ ಒಂದೇ ಸೆಂಟರ್‍ನಲ್ಲಿ ಪರೀಕ್ಷೆ ಬರೆದ 9 ಜನರು 720ಕ್ಕೆ 720 ಅಂಕಗಳನ್ನು ಪಡೆದಿರುವುದು ಹಾಗೂ ಇವರಿಗೆ ನೀಡಿರುವ ಗ್ರೆಸ್ ಅಂಕಗಳು ಹಲವಾರು ಗೊಂದಲಗಳನ್ನು ಉಂಟು ಮಾಡಿದ್ದು, ಕಷ್ಟಪಟ್ಟು ಪರೀಕ್ಷೆ ಬರೆದು ರ್ಯಾಂಕ್‍ಗಳಿಸಿದವರನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದರಿಂದ ವಿದ್ಯಾರ್ಥಿಗಳ ನೈತಿಕ ಸ್ಥೈರ್ಯವೇ ಹುದುಗಿ ಹೋಗಿದೆ. ಕೆಲವರು ಈಗಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಮತ್ತಷ್ಟು ಹೆಚ್ಚಾಗದಂತೆ ತಕ್ಷಣವೇ ಸರಕಾರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮದ ಜೊತೆಗೆ, ಪರೀಕ್ಷೆ ಬರೆದಿರುವ ಮಕ್ಕಳು ಯಾವುದೇ ಗೊಂದಲವಿಲ್ಲದೆ ಪ್ರವೇಶ ಪಡೆಯುವಂತೆ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದಿದ್ದಾರೆ.

ದೇಶದಲ್ಲಿ 2024ನೇ ಸಾಲಿನಲ್ಲಿ ಸುಮಾರು 23.33 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಎದುರಿಸಿದ್ದು,ಇವರಲ್ಲಿ 67 ಜನರು ಶೇ100 ಫಲಿತಾಂಶ ಪಡೆದಿದ್ದಾರೆ.ಹರಿಯಾಣದ ಫರೀದಾಬಾದ್ ಪರೀಕ್ಷಾ ಕೇಂದ್ರವೊಂದರಲ್ಲಿಯೇ ಪರೀಕ್ಷೆ ಬರೆದ 6 ವಿದ್ಯಾರ್ಥಿಗಳು ಗ್ರೆಸ್ ಅಂಕದ ಸಹಾಯದಿಂದ 100ಕ್ಕೆ ನೂರರಷ್ಟು ಅಂಕ ಪಡೆದಿದ್ದಾರೆ.ಇವರಿಗೆ 45 ಗ್ರೆಸ್ ಅಂಕಗಳು ದೊರೆತ್ತಿದ್ದು, ಇದಕ್ಕೆ ಮಾನದಂಡವೇನು ಎಂಬುದನ್ನು ಇದುವರೆಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಬಹಿರಂಗ ಪಡಿಸಿಲ್ಲ. ಕೇವಲ ಹಾರಿಕೆಯ ಉತ್ತರಗಳನ್ನμÉ್ಟೀ ನೀಡುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಇದುವರೆಗೂ ಬಿಹಾರದಲ್ಲಿ 13 ಜನರನ್ನು ಪೆÇಲೀಸರು ಬಂಧಿಸಿದ್ದಾರೆ. ಅಲ್ಲದೆ ದೆಹಲಿ ಪೆÇಲೀಸರು ನಕಲಿ ಪರೀಕ್ಷಾರ್ಥಿಗಳಾಗಿದ್ದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೆ ನೀಟ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವುದರಿಂದ ಸಮಗ್ರ ತನಿಖೆ ನಡೆಸಿ, ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ಘನತೆಯನ್ನು ಹೆಚ್ಚಿಸಬೇಕೆಂದು ಮುರುಳೀಧರ ಹಾಲಪ್ಪ ಒತ್ತಾಯಿಸಿದ್ದಾರೆ.

ನೀಟ್ ಪರೀಕ್ಷೆ ಬರೆದು ಒಳ್ಳೆಯ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಹಂಚಿಕೆ ಮಾಡುವುದು ನಿಯಮ. 2019 ರಿಂದ 2023ರವರೆಗೆ 600 ಅಂಕ ಗಳಿಸಿದವರಿಗೆ ವೈದ್ಯಕೀಯ ಸೀಟು ನೀಡಲಾಗುತ್ತಿತ್ತು. ಇದನ್ನು ಏಕಾಏಕಿ 660ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಅರವತ್ತು ಅಂಕಗಳ ಹೆಚ್ಚಳದಿಂದ ರ್ಯಾಂಕ್ ಹತ್ತಿರಕ್ಕೆ ಬಂದು ಮೆಡಿಕಲ್ ಸೀಟು ಕನಸು ಕಂಡಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಹಾಗಾಗಿ ಮತ್ತೊಮ್ಮೆ ಮರುಪರಿಶೀಲನೆ ನಡೆಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದು ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

ಡಾ. ಜಿ. ಪರಮೇಶ್ವರರವರು ಉನ್ನತ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಸಮರ್ಪಕವಾಗಿ ಜಾರಿಗೆ ತಂದ ಸಿಇಟಿ ಫಲವಾಗಿ ಬಡವರು ಮಕ್ಕಳು ಪ್ರತಿಭೆ ಇದ್ದು, ಪರಿಶ್ರಮ ಪಟ್ಟರೆ ವೈದ್ಯ, ಇಂಜಿನಿಯರ್ ಆಗಬಹುದು ಎಂಬ ಹೊಸ ಕನಸನ್ನು ಬಿತ್ತಿದ್ದು, ಅಂದಿನಿಂದ 2019ರವರೆಗೆ ಸಾವಿರಾರು ಬಡವರ ಮಕ್ಕಳು ಸಿಇಟಿ ಮೂಲಕ ವೈದ್ಯರು, ಇಂಜಿನಿಯರ್‍ಗಳಾಗಿ ದುಡಿಯುತಿದ್ದಾರೆ. ಆದರೆ ನೀಟ್ ಬಂದ ಮೇಲೆ ಬಡವರ ಮಕ್ಕಳ ವೈದ್ಯಕೀಯ ಕನಸು ಕಮರುತ್ತಿದೆ. ಸಾವಿರಾರು ರೂ ಕೊಟ್ಟು ನೀಟ್ ಪರೀಕ್ಷೆಯ ಕೋಚಿಂಗ್ ಪಡೆಯಲಾಗದೆ ಪರಿತಪಿಸುತಿದ್ದಾರೆ ಎಂದಿದ್ದಾರೆ.
ಇದೇ ಕಾರಣಕ್ಕೆ ತಮಿಳುನಾಡು ನೀಟ್ ಪದ್ದತಿಯನ್ನೇ ವಿರೋಧಿಸುತ್ತಾ ಬಂದಿದೆ. ಈಗ ಪಶ್ಚಿಮ ಬಂಗಾಳವೂ ಸಹ ಇದೇ ಹಾದಿಯಲ್ಲಿದೆ. ಪ್ರಾದೇಶಿಕತೆ ಹೊಡೆತ ನೀಡುವ ನೀಟ್ ರದ್ದಾದರೆ ಒಳ್ಳೆಯದು ಎಂಬ ಅಭಿಪ್ರಾಯ ಬಲವಾಗುತ್ತಿದೆ. ಇಂತಹ ಹೊತ್ತಿನಲ್ಲಿ ಅವ್ಯವಹಾರದ ಮಾತುಗಳು ಕೇಳಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹಾಗಾಗಿ ಸೂಕ್ತ ತನಿಖೆ ನಡೆಸಿ, ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯಿಸಿದ್ದಾರೆ.

ನೀಟ್ ಫಲಿತಾಂಶವು ಜೂನ್ 14 ರಂದು ಪ್ರಕಟವಾಗಬೇಕಿದ್ದು, ಆದರೆ ಲೋಕಸಭಾ ಚುನಾವಣೆಯ ಫಲಿತಾಂಶದ ಗೊಂದಲದ ವಾತಾವರಣದಲ್ಲಿ ಪ್ರಕಟಗೊಳಿಸಿರುವುದರ ಉದ್ದೇಶ ತಿಳಿಯಬೇಕಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *