ತುಮಕೂರು.ಹಾಲಪ್ಪ ಪ್ರತಿಷ್ಠಾನವತಿಯಿಂದ ಕಾರ್ಗಿಲ್ ವಿಜಯದಿವಸ್ ಆಚರಣೆ ಮತ್ತು ಎಸ್.ಸಿ.ಸಿ. ಮಕ್ಕಳಿಗೆ ಕೌಶಲ್ಯಪಥ ಕೌಶಲ್ಯಾಭಿವೃದ್ದಿ ಕಾರ್ಯಾಗಾರ ರೂಪಿಸುವ ಸಂಬಂಧ ಇಂದು 4ನೇ ಬೇಟಾಲಿಯನ್ ಎನ್.ಸಿ.ಸಿ ಅಧಿಕಾರಿ ಜನರಲ್ ಗುರುಮಿತ್‍ಸಿಂಗ್ ಗುರ್ಜಾಲ್ ಅವರೊಂದಿಗೆ ಹಾಲಪ್ಪ ಪ್ರತಿಷ್ಠಾನದ ಮುಖ್ಯಸ್ಥ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಪೂರ್ವಭಾವಿ ಸಭೆ ನಡೆಸಿ, ಚರ್ಚೆ ನಡೆಸಿದರು.
ನಗರದ ಶ್ರೀಶಿವಕುಮಾರಸ್ವಾಮೀಜಿ ಸರ್ಕಲ್‍ನಲ್ಲಿರುವ ಎನ್.ಸಿ.ಸಿ. ಕಚೇರಿಗೆ ತೆರಳಿ, ಎನ್.ಸಿ.ಸಿ ಅಧಿಕಾರಿ ಗುರುಮಿತ್‍ಸಿಂಗ್ ಗುರ್ಜಾಲ್, ಅಡಳಿತಾಧಿಕಾರಿ ನರೇದ್ರ ಬಂಢಾರಿ, ಸುಬ್ಬೇದಾರ್ ಮೇಜರ್ ದಿನೇಶಸಿಂಗ್ ರಾಣಾ ಅವರೊಂದಿಗೆ ಚರ್ಚೆ ನಡಸಿ,ಮುಂದಿನ ಜುಲೈ 26ರ ಕಾರ್ಗಿಲ್ ವಿಜಯದಿವಸ್ ಆಚರಣೆ ಸಂಬಂಧ ಜಿಲ್ಲೆಯ ಯುವಜನರಲ್ಲಿ ಸೇನೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಮುಂದಿನ ಒಂದು ವರ್ಷದಲ್ಲಿ ಭಾರತೀಯ ಸೇನೆಗೆ ತುಮಕೂರಿನಿಂದ ಕನಿಷ್ಠ ಒಂದು ಸಾವಿರ ಜನರು ಸೇರ್ಪಡೆಯಾಗುವಂತೆ ಮಾಡುವ ಉದ್ದೇಶ ಹೊಂದಿರುವುದಾಗಿ ಎನ್.ಸಿ.ಸಿ.ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಗಿಲ್ ವಿಜಯದಿವಸದ ಅಂಗವಾಗಿ ನಗರದ ಅಮಾನಿಕೆರೆಯ ಗಾಜಿನಮನೆಯಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸಿ, ವಿದ್ಯಾರ್ಥಿ ಯುವಜನರಿಗೆ ಸೇನೆಯ ಬಗ್ಗೆ ಅರಿವು ಮೂಡಿಸುವುದು, ಕಾರ್ಗಿಲ್ ಯುದ್ದದ ಸಂಸ್ಮರಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ನೆರವನ್ನು ಹಾಲಪ್ಪ ಪ್ರತಿಷ್ಠಾನದಿಂದ ನೀಡುವುದಾಗಿ ಮುರುಳೀಧರ ಹಾಲಪ್ಪ ಎನ್.ಸಿ.ಸಿ. ಅಧಿಕಾರಿಗಳಿಗೆ ತಿಳಿಸಿದರು.
ಹಾಲಪ್ಪ ಪ್ರತಿಷ್ಠಾನದವತಿಯಿಂದ ಕೌಶಲ್ಯಪಥ ಕಾರ್ಯಕ್ರಮದ ಮೂಲಕ ಪಿಯುಸಿ ಮತ್ತು ಪದವಿ ಕಲಿಯುತ್ತಿರುವ ಯುವಜನರಿಗೆ ಸೇನೆಯ ಜೊತೆಗೆ,ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಸಂಬಂಧ ತಯಾರಿ ಹಾಗೂ ಮಾರ್ಗದರ್ಶನ ಕುರಿತಂತೆ ರಾಜ್ಯದ ವಿವಿಧೆಡೆಗಳಿಂದ ತುಮಕೂರಿಗೆ ವಿಶೇಷ ತರಬೇತಿಗಾಗಿ ಆಗಮಿಸುತ್ತಿರುವ ಎನ್.ಸಿ.ಸಿ. ಕೇಡೆಟ್‍ಗಳಿಗೆ ಕಾರ್ಯಾಗಾರ ನಡೆಸುವ ಕುರಿತು ಚರ್ಚೆ ನನಡೆಸಿದರು.
ಈ ವೇಳೆ ಎನ್.ಸಿ.ಸಿ. ಅಧಿಕಾರಿಗಳು ರಾಜ್ಯ ಸರಕಾರದ ಕೌಶಲ್ಯಾಭಿವೃದ್ದಿ ಸಂಸ್ಥೆಯಿಂದ ಮಂಗಳೂರಿನಲ್ಲಿ ಎರಡು ಸೇನೆ ಸೇರಬಯುಸುವ ಯುವಜನರಿಗೆ ತರಬೇತಿ ನೀಡುವ ಕೇಂದ್ರಗಳನ್ನು ನಡೆಸುತ್ತಿದ್ದು, ತುಮಕೂರಿನಲ್ಲಿ ಮತ್ತೊಂದು ಕೇಂದ್ರ ಆರಂಭಗೊಂಡರೆ ಹೆಚ್ಚಿನ ಅನುಕೂಲ ಈ ಭಾಗದ ಯುವಜನರಿಗೆ ಆಗಲಿದೆ ಎಂಬ ಮನವಿಯನ್ನು ಮಾಡಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು,ಸರಕಾರಕ್ಕೆ ಗಮನಕ್ಕೆ ತರಲಾಗುವುದು ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.
ಈ ವೇಳೆ ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ,ಸಿಮೆಂಟ್ ಮಂಜಣ್ಣ, ನಟರಾಜಶೆಟ್ಟಿ,ಮಾಜಿ ಕೌನ್ಸಿಲರ್ ಮಹೇಶ್, ನಟರಾಜಶೆಟ್ಟಿ, ದಿಲೀಪ್,ಸಂಜೀವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.