ತುರುವೇಕೆರೆ: ರೈತರ ಪರವಾದ ಚಿಂತನೆ, ಹೆಚ್ಚು ಕಳಕಳಿ ಇರುವಂತ ಮರುಳಿಧರ ಹಾಲಪ್ಪರಂತವರಿಗೆ ರಾಜಕೀಯವಾಗಿ ಜನರ ಸೇವೆ ಮಾಡುವಂತಹ ಅಧಿಕಾರದ ಅವಕಾಶ ಸಿಗಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಬುಧವಾರ ಹಾಲಪ್ಪ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ರೈತರೊಂದಿಗೆ ನಾವು ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತರಿಗೆ ಹಲವು ರೀತಿಯ ಸಹಾಯ ಅವರ ಪರವಾಗಿ ಹೋರಾಟಗಳೋಂದಿಗೆ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ಧಾರೆ.
ಕಳೆದ ತಿಂಗಳೇ ಮಾಡುವ ಕಾರ್ಯಕ್ರಮ ಕೆಲವು ಕಾರಣಗಳಿಂದ ಮುಂದೂಡಲಾಗಿ ಇಂದು ಮಾಡಲಾಗುತ್ತಿದೆ. ಇದು ಒಳ್ಳೆಯ ಕಾರ್ಯಕ್ರಮ ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ ಸವಲತ್ತು ಸಿಗುವಂತೆ ಮಾಡುವುದು. ಇಂದು ತೆಂಗು ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಒಂದು ನಿಂಬೆ ಹಣ್ಣಿನ ಬೆಲೆ 10ರೂ ಒಂದು ಕೊಬ್ಬರಿ ಬೆಲೆ 8ರೂ ಬೆಲೆ ಇದೆ. ಕೊಬ್ಬರಿಗೆ 15 ಸಾವಿರ ಮಾಡಿ ಎಂದು ಹೋರಾಟ ಮಾಡಿ ಅದಿವೇಶನದಲ್ಲಿಯೂ ಮಾತನಾಡಿದರೂ ಕಂಜೂಸು ಮುಖ್ಯಮಂತ್ರಿ ಸಿದ್ದರಾಮಣ್ಣ ಒಂದು ರೂ ನೀಡಲಿಲ್ಲ. 13 ಜಿಲ್ಲೆಯಲ್ಲಿ ತೆಂಗುಬೆಳೆಯುವುದು ಕನಿಷ್ಟ 5 ಸಾವಿರ ಕೋಟಿ ನೀಡಬಹುದಾಗಿತ್ತು ಆದರೆ ರೈತರ ಮೇಲೆ ಕರುಣೆ ತೋರಲಿಲ್ಲ ಎಂದರು.
ಮುರುಳಿದರ ಹಾಲಪ್ಪ ಲೋಕಸಭಾ ಚುನಾವಣೆಯ ಅಭ್ಯರ್ಥಿ ಯಾಗಲಿದ್ದಾರೆ ಎಂದು ಬಾವಿಸಿದ್ದೆ ನಾನು ಸಹ ಮಾಜಿ ಸಚಿವ ಟಿ.ಬಿ. ಜಯಚಂದ್ರ ಹತ್ತಿರ ಮಾತನಾಡಿ ನೀನೇ ನೀಲ್ಲು ಇಲ್ಲವೇ ಮುರುಳಿಧರ ಹಾಲಪ್ಪರಿಗೆ ಸಪೋರ್ಟ್ ಮಾಡು ಎಂದು ಹೇಳಿದ್ದೆ. ಆದರೆ ಎಲ್ಲ ಪಕ್ಷ ಸುತ್ತುವಂತವರಿಗೆ ಟಿಕೇಟ್ ನೀಡಿದ್ದಾರೆ ಎಂದು ಛೇಡಿಸಿದರು. ಕಾಂಗೇಸ್ ಪಕ್ಷವೇ ಹಾಗೆ ದುಡಿಯುವರಿಗೆ ಟಿಕೇಟ್ ನೀಡಲ್ಲ. ವಿಧಾನ ಸಭೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ದಿಸಿ 2 ನೇ ಸ್ಥಾನದಲ್ಲಿದ್ದರು 2 ನೇ ಬಾರಿ ನನಗೆ ಟಿಕೇಟ್ ನೀಡಲಿಲ್ಲ ಕಡೆಗೆ ಮಾಜಿ ಪ್ರದಾನಿ ದೇವೇಗೌಡರು ಟಿಕೇಟ್ ನೀಡಿ ಎಂ.ಎಲ್.ಎ ಮಾಡಿದರು. ಎಂದ ಅವರು ನಾನು ನಿಮ್ಮನ್ನ ಜೆಡಿಎಸ್ ಪಕ್ಷಕ್ಕೆ ಸೇರಿ ಎಂದು ಹೇಳುತ್ತಿಲ್ಲ ತಪ್ಪಾಗಿ ಬಾವಿಸಬೇಡಿ ಎಂದು ತಿಳಿಸಿದರು.
ಕೌಶಲ್ಯಾಭಿವೃದ್ದಿ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ಮಾತನಾಡಿ ನಾನು ಜಿಲ್ಲೆಯಲ್ಲಿ ಸುಮಾರು 23 ರೈತರ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಜಿಲ್ಲೆಯಲ್ಲಿ ತೆಂಗು ಹಾಗೂ ಹುಣಿಸೇ ಪಾರ್ಕ್ ಮಾಡಬೇಕಿದೆ. ಈ ಬಾಗದಲ್ಲಿ ತೆಂಗು ಹೆಚ್ಚು ಬೆಳೆಯಲಿದ್ದು ಕೆಬಿ.ಕ್ರಾಸ್ನಲ್ಲಿ ತೆಂಗು ಪಾರ್ಕ್ ಮಾಡಿದರೆ ಉತ್ತಮ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ರೈತರು ತಮ್ಮ ಬೆಳೆಗೆ ಬೆಲೆ ನಿಗದಿ ಮಾಡುವಂತಾಗಬೇಕು. ರೈತರ ಕಷ್ಟಗಳನ್ನು ಅರಿತು ಸರ್ಕಾರ ನೀಡುವ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಲೋಕಸಭಾ ಟಿಕೇಟ್ ತಪ್ಪಿದ್ದರಿಂದ ಸ್ವಾಬಾವಿಕವಾಗಿ ಬೇಜಾರಾಗಿದೆ. ಜಿಲ್ಲೆಯ ಹಿರಿಯ ಸಚಿವರಿದ್ದಾರೆ, ಶಾಸಕರಿದ್ದಾರೆ ಕೆಲವು ತಿರ್ಮಾನ ಮಾಡುತ್ತಾರೆ. ನನ್ನನು ಇದುವರೆವಿಗೂ ಯಾರೂ ಬೇಟಿ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ದಿಸುವಂತೆ ಸಾರ್ವಜನಿಕರು, ನಮ್ಮ ಅಭಿಮಾನಿಗಳಿಂದ ಒತ್ತಡ ಬರುತ್ತಿದೆ. ಇದುವರೆವಿಗೂ ನಾನು ತಿರ್ಮಾನ ಮಾಡಿಲ್ಲ. ಮುಂದಿನ ದಿನಗಳಲ್ಲಿ ಸ್ಪರ್ದಿಸುವ ಬಗ್ಗೆ ತಿಳೀಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಬದರಿಕಾಶ್ರಮ ಮಠದ ಮಂಗಳಾನಾಥ ಸ್ವಾಮೀಜಿ, ಹಳ್ಳಿಕಾರ್ ಮಠದ ಬಾಲಕೃಷ್ಣ ಸ್ವಾಮೀಜಿ, ಎಸ್.ಬಿ.ಐ ವ್ಯವಸ್ಥಾಪಕ ಸುರೇಶ್ ಮುಖಂಡರಾದ ಪಂಚಾಕ್ಷರಿ, ಶಿವಾನಂದ್, ಸುಬ್ಬಣ್ಣ, ಕೃಷಿ, ತೋಟಗಾರಿಕೆ, ಪಶು ಇಲಾಕೆ ಸೇರಿದಂತೆ ವಿವಿದ ಇಲಾಕೆಗಳ ಅಧಿಕಾರಿಗಳು ಸೇರಿದಂತೆ ರೈತರು ಇದ್ದರು.
13ಪೋಟೋ ಶಿರ್ಷಿಕೆ01 ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಬುಧವಾರ ಹಾಲಪ್ಪ ಪ್ರತಿಷ್ಠಾನ ವತಯಿಂದ ಹಮ್ಮಿಕೊಂಡಿದ್ದ ರೈತರೊಂದಿಗೆ ನಾವು ಎಂಬ ಕಾರ್ಯಕ್ರಮದಲ್ಲಿ ರೈತರಿಗೆ ಪ್ರಮಾಣ ಪತ್ರ ಹಾಗೂ ತೆಂಗು ಸಸಿ ವಿತರಿಸಲಾಯಿತು.