ಯುವಕರಿಗೆ ಕೌಶಲ್ಯ ತರಬೇತಿಗೆ ಯೋಜನೆಗಳ ಕಲ್ಪಿಸುವಂತೆ ಸಂಸದ ಜಿ.ಎಸ್.ಬಿ.ಯೊಂದಿಗೆ ಮುರಳೀಧರಹಾಲಪ್ಪ ಚರ್ಚೆ

ತುಮಕೂರು: ತುಮಕೂರಿನಲ್ಲಿ ಸಾಂದರ್ಭಿಕವಾಗಿ ಲೋಕಸಭಾ ಸಂಸದರಾದ ಜಿ. ಎಸ್. ಬಸವರಾಜುರವರನ್ನು ಭೇಟಿ ಮಾಡಿದಾಗ ಜಿಲ್ಲೆಯ ಯುವಕರಿಗೆ ಕೌಶಲ್ಯ ತರಬೇತಿಗೆ ಒತ್ತು ಕೊಟ್ಟು, ಯುವಸಬಲೀಕರಣ ಅಭಿಯಾನಕ್ಕೆ ಯೋಜನೆ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು. ಈ ಪ್ರಸ್ತಾವನೆಗೆ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರ್ಯಗಳನ್ನು ಅನುμÁ್ಠನಗೊಳಿಸುವಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ವಾಗ್ದಾನ ನೀಡಿದರು.

ಈಗಾಗಲೇ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಿಗದಿಯಾಗಿರುವ ಬಹುಕೌಶಲ್ಯ ತರಬೇತಿ ಕೇಂದ್ರವನ್ನು ಪ್ರಾರಂಭ ಮಾಡಿ ತುಮಕೂರು ಜಿಲ್ಲೆಯ ಯುವ ಜನತೆಗೆ ಬ್ಯಾಂಕಿಂಗ್, ಇನ್ಸೂರೆನ್ಸ್, ಗ್ರಾಫಿಕ್ಸ್, ಮಲ್ಟಿಮೀಡಿಯಾ, ಅನಿಮೇಷನ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಸಿ ಎನ್ ಸಿ ಮಷಿನ್ ಟೂಲ್ಸ್ ಹಾಗೂ ಇತರೆ ನೂತನ ತಂತ್ರಜ್ಞಾನದ ಬಗ್ಗೆ ಅತ್ಯುತ್ತಮ ತರಬೇತಿ, ಅಪ್ರೆಂಟಿಸ್, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕೌಶಲ್ಯ ಹಾಗೂ ಯುವ ಸಬಲೀಕರಣ ಇಲಾಖೆಯ ಅನುದಾನವನ್ನು ಬಳಸಿಕೊಳ್ಳುವ ಬಗ್ಗೆ ಪ್ರಯತ್ನಿಸಲು ನಿರ್ಧರಿಸಲಾಯಿತು.

ಇದಕ್ಕೆ ಪೂರಕವಾಗಿ ಜಿಟಿಟಿಸಿ (ಕರ್ನಾಟಕ ಸರ್ಕಾರದ ತರಬೇತಿ ತಂತ್ರಜ್ಞಾನ ತರಬೇತಿ ಕೇಂದ್ರ), KGTTI (ಕರ್ನಾಟಕ – ಜರ್ಮನ್ ತಂತ್ರಜ್ಞಾನ ತರಬೇತಿ ಕೇಂದ್ರ), ಸಿಡಾಕ್, ಎಸ್ ಬಿ ಐ ತರಬೇತಿ ಕೇಂದ್ರ ಇವರೆಲ್ಲರ ಸಹಯೋಗದೊಂದಿಗೆ ಕೌಶಲ್ಯ ಕೇಂದ್ರವನ್ನು ಪ್ರಾರಂಭಿಸುವ ಬಗ್ಗೆ ಚಿಂತನೆ ವ್ಯಕ್ತವಾಯಿತು. ಈ ಯೋಜನೆಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಂತರಸನಹಳ್ಳಿ, ಹಿರೇಹಳ್ಳಿ, ವಸಂತನರಾಸಪುರ, ಗುಬ್ಬಿಯ ಹೆಚ್.ಎ.ಎಲ್ ಹಾಗೂ ಇತರೆ ಭಾಗಗಳ ಬಹುರಾಷ್ಟ್ರೀಯ ಸಂಸ್ಥೆಗಳ ಸಹಕಾರ ಕೋರಲು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಿದ್ಧಗಂಗಾ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಡಾ. ಪರಮೇಶ್ವರ್ ರವರು ಇದ್ದರು.

Leave a Reply

Your email address will not be published. Required fields are marked *