ಪಾಕಿಸ್ತಾನ ಮೂಲದ ಸಂಘಟನೆಯ ಚಟುವಟಿಕೆಯ ಮೇಲೆ ನಿಗಾ ವಹಿಸುವಂತೆ ಮುಸ್ಲಿಂ ಬಾಂಧವರು ಎಸ್ಪಿಗೆ ಮನವಿ

ತುಮಕೂರು- ನಗರದಲ್ಲಿ ಪಾಕಿಸ್ತಾನ ಮೂಲದ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿದ್ದು, ಮುಸ್ಲಿಂರನ್ನು ತಪ್ಪು ದಾರಿಗೆಳೆಯುವ ಮತ್ತು ಭದ್ರತೆಯ ಆತಂಕ ಎದುರಾಗಿದೆ. ಈ ಸಂಘಟನೆಗಳ ಬಗ್ಗೆ ನಿಗಾ ವಹಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮರ್ಕಜಿ ಮಜ್ಲಿಸೆ ಮುಶಾವರತ್ ನೇತೃತ್ವದಲ್ಲಿ ತುಮಕೂರಿನ ಮುಸ್ಲಿಂ ಬಾಂಧವರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ನೂರಾನಿ ಮಸೀದಿ ಅಧ್ಯಕ್ಷರು ಹಾಗೂ ಮರ್ಕಜಿ ಮಜ್ಲಿಸೆ ಮುಶಾವರತ್ ಸದಸ್ಯರಾದ ಜಾಹಿದ್ ಖಾನ್ ಶೀರಾನಿ, ಇಕ್ಬಾಲ್ ಅಹಮದ್, ನಯಾಜ್ ಅಹಮದ್ ನೇತೃತ್ವದಲ್ಲಿ ನೂರಾರು ಮಂದಿ ಮುಸ್ಲಿಂ ಬಾಂಧವರು ತೆರಳಿ ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಗೋಪಾಲ್ ಹಾಗೂ ಪುರುಷೋತ್ತಮ್ ಅವರಿಗೆ ಮನವಿ ಸಲ್ಲಿಸಿ ಪಾಕಿಸ್ತಾನ ಮೂಲದ ಸಂಘಟನೆಗಳ ಬಗ್ಗೆ ತೀವ್ರ ನಿಗಾ ವಹಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಇಕ್ಬಾಲ್ ಅಹಮದ್, ರಿಯಾಜ್ ಅಹ್ಮದ್ ಗೋಹಲ್ ಶಾಹಿ ಗುಂಪು (ಎಂಎಫ್‍ಐ) ಪಾಕಿಸ್ತಾನದಲ್ಲಿ ಹುಟ್ಟುಕೊಂಡ ಸಂಘಟನೆಯಾಗಿದೆ. ಇದರ ಸ್ಥಾಪಕ ರಿಯಾಜ್ ಅಹ್ಮದ್ ಗೋಹರ್ ಶಾಹಿ ಅವರನ್ನು ಭಾರತದ ಎಲ್ಲಾ ಖ್ಯಾತ ಉಲಮಾಗಳು ಇಸ್ಲಾಮಿಕ್ ಧರ್ಮದಿಂದ ಹೊರಗಿಟ್ಟಿದ್ದಾರೆ. ಈ ಸಂಘಟನೆಯ ನಂಬಿಕೆಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿದ್ದು, ನಿರಪರಾಧಿ ಜನರನ್ನು ತಪ್ಪು ದಾರಿಗೆಳೆಯುತ್ತಿವೆ. ಭಾರತೀಯ ಮುಸ್ಲಿಮರಿಗೆ ಇಂತಹ ಪಾಕಿಸ್ತಾನ ಮೂಲಕ ಸಂಘಟನೆಗಳು ಅಗತ್ಯವಿಲ್ಲ. ಇವು ಸಮುದಾಯದ ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕೆ ಅಪಾಯ ಉಂಟು ಮಾಡುತ್ತವೆ ಎಂದು ಹೇಳಿದರು.

ಈ ಪಂಥದ ಸದಸ್ಯಯಾದ ಇಶ್ರತ್ ಎಂಬ ಮಹಿಳೆ ಎಂಎಫ್‍ಐ ಸಂಘಟನೆಯ ಸಕ್ರಿಯ ಸದಸ್ಯೆಯಾಗಿದ್ದಾರೆ. ತುಮಕೂರಿನ ಮುಸ್ಲಿಂ ಸಮುದಾಯದಲ್ಲಿ ಈ ಸಂಘಟನೆಯ ತತ್ವಗಳನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರು ಮೂಲದ ಈ ಸಂಘಟನೆಯ ಇತರ ಸದಸ್ಯರು ಇವರೊಂದಿಗೆ ಸಂಪರ್ಕದಲ್ಲಿದ್ದು, ಈ ಗುಂಪಿನ ಜನರು ನಗರದಲ್ಲಿ ಶೈಖ್ ಅಹಮದ್ ಮತ್ತು ಅವರ ಪತ್ನಿ ಹಾಗೂ ಅವರ ಕುಟುಂಬದ ಬಳಿಗೆ ಮತ್ತೆ ಮತ್ತೆ ಬರುತ್ತಿರುತ್ತಾರೆ ಎಂದು ಆರೋಪಿಸಿದರು.

ಈ ಸಂಘಟನೆಯ ಸದಸ್ಯರಿಗೆ ಇಸ್ಲಾಂ ಅಥವಾ ಮುಸ್ಲಿಂ ಸಮುದಾಯದೊಂದಿಗೆ ಯಾವುದೇ ಧಾರ್ಮಿಕ ಸಂಬಂಧ ಇಲ್ಲ. ಅವರ ಹೆಸರುಗಳು ಮುಸ್ಲಿಂ ಹೆಸರಿನಂತೆ ಕಂಡರೂ ಅವರ ನಂಬಿಕೆಗಳು ಮತ್ತು ಆಚರಣೆಗಳು ಸಂಪೂರ್ಣವಾಗಿ ಇಸ್ಲಾಂ ಹೊರಗೆ ಇವೆ. ಹಾಗಾಗಿ ನಗರದ ಮುಸ್ಲಿಂ ಸಮುದಾಯವು ಅವರನ್ನು ಗುರುತಿಸುವುದಿಲ್ಲ, ಬೆಂಬಲಿಸುವುದಿಲ್ಲ ಮತ್ತು ಅವರು ಯಾವುದೇ ಅಕ್ರಮ ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ಅದರ ಜವಾಬ್ದಾರಿ ಸಮುದಾಯದ ಮೇಲೆ ಬಾರದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ತುಮಕೂರಿನಲ್ಲಿ ಈ ಸಂಘಟನೆಯ ಎಲ್ಲಾ ಚಟುವಟಿಕೆಗಳನ್ನು ಗುರುತಿಸಿ, ವಿಶೇಷವಾಗಿ ಇಶ್ರತ್ ಶೈಖ್ ಅಹಮದ್ ಕುಟುಂಬ ಮತ್ತು ಅವರ ಸಹಚರರೊಂದಿಗೆ ಸಂಬಂಧಿಸಿದ ಕಾರ್ಯಗಳ ಮೇಲೆ ನಿಗಾ ವಹಿಸಬೇಕು. ಅವರ ಪ್ರಚಾರ ಸಭೆಗಳು ಅಥವಾ ಲಿಫ್‍ಲೆಟ್‍ಗಳ ಹಂಚಿಕೆಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ಎಂಎಫ್‍ಐ ನಂತಹ ಸಂಘಟನೆಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ನಗರದ ಶಾಂತಿ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ತುಮಕೂರಿ ಮುಸ್ಲಿಂ ಸಮುದಾಯ ಈ ಪಾಕಿಸ್ತಾನ ಮೂಲದ ಸಂಘಟನೆ ಮತ್ತು ಅದರ ಏಜೆಂಟ್‍ಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಈ ಸಂಘಟನೆಗಳಿಗೆ ನಮ್ಮಿಂದ ಯಾವುದೇ ಸಹಕಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ನೂರಾನಿ ಮಸೀದಿ ಅಧ್ಯಕ್ಷರಾದ ಜಾಹಿದ್ ಖಾನ್ ಶೀರಾನಿ ಅವರು ಕಾನೂನು ಮತ್ತು ಸಾಮರಸ್ಯವನ್ನು ಕಾಪಾಡಲು ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.

ಈ ಸಂದರ್ಭದಲ್ಲಿ ಮೌಲಾನಾ ಜಿಯಾ ಉರ್ ರೆಹಮಾನ್, ನಸ್ರುಲ್ಲಾ, ಅಬೂಬಕರ್, ಬಿಲಾಲ್, ಅಕ್ರಂಉಲ್ಲಾಖಾನ್, ಲಾಯರ್ ಅಹಮದ್, ಜಿಯಾ ಉಲ್ಲಾಖಾನ್, ಬಜರ್, ಬಕಾಶ್, ಇಮ್ರಾನ್, ಸಯ್ಯೂಬ್ ಸೇರಿದಂತೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *