ತುಮಕೂರು:ಜನಾನುರಾಗಿ ನಾಯಕರಾದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಜೂನ್ 21 ರಂದು ನಡೆಯುವ ಕೆ.ಎನ್.ಆರ್ ಅಮೃತಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮುಸ್ಲಿಂ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಗರಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಯಾಜ್ ಅಹಮದ್ ಮನವಿ ಮಾಡಿದರು.

ಕೆ.ಎನ್.ರಾಜಣ್ಣ ಮುಸ್ಲಿಂ ಹಿತೈಷಿಗಳ ಬಳಗದವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೆ.ಎನ್.ರಾಜಣ್ಣ ಅವರದು ನೇರ ಮತ್ತು ನಿಷ್ಠೂರ ನಡೆ, ರಾಜಕೀಯವಾಗಿ, ಅರ್ಥಿಕವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹಲವಾರು ರೀತಿಯಲ್ಲಿ ಶಕ್ತಿ ತುಂಬಿದ್ದಾರೆ. ಹಾಗಾಗಿ ಅವರ 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಡೆಯುತ್ತಿರುವ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೃತಜ್ಞತೆ ಸಲ್ಲಿಸಬೇಕೆಂದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಹಕಾರ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರ ಅಭಿಮಾನಿಗಳು, ಹಿತೈಷಿಗಳಿದ್ದಾರೆ.ಒಂದು ಜಾತಿ, ಧರ್ಮಕ್ಕೆ ಅವರು ಸೀಮಿತವಾಗಿಲ್ಲ. ಕರೋನ ಸಂದರ್ಭದಲ್ಲಿ ಕೆ.ಎನ್.ರಾಜಣ್ಣ ಅವರು ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ ಸಾಲ ಒದಗಿಸಿ, ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದ್ದಾರೆ.ಅಲ್ಲದೆ ಮುಸ್ಲಿಂ ಸಮುದಾಯದ ಹಬ್ಬಗಳ ಸಂದರ್ಭದಲ್ಲಿ ಇಪ್ತಿಯಾರಕೂಟ ಏರ್ಪಡಿಸಿ, ತಮ್ಮ ಕೈಲಾದ ಸೇವೆಯನ್ನು ನೀಡಿದ್ದಾರೆ. ಇಂತಹ ಮಾನವೀಯ ವ್ಯಕ್ತಿಯ ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವುದು ನ್ಯಾಯೋಚಿತ ಎಂದರು.
ಪಾಲಿಕೆ ಮಾಜಿ ಸದಸ್ಯ ಮೆಹಬೂಬ್ ಪಾಷ ಮಾತನಾಡಿ,ಕೆ.ಎನ್.ರಾಜಣ್ಣ ಅವರು ಒಂದು ಜಾತಿ, ಧರ್ಮಕ್ಕೆ ಸಿಮೀತವಾಗಿಲ್ಲ. ಸೇವೆಯಲ್ಲಿ ತೊಡಗಿರುವ ವ್ಯಕ್ತಿ ಯಾವುದೇ ಸಮುದಾಯದಲ್ಲಿ ಇದ್ದರೂ ಅವರನ್ನು ಗುರುತಿಸಿ,ಸೂಕ್ತ ಸ್ಥಾನಮಾನ ಕಲ್ಪಿಸಿದ್ದಾರೆ.ಎಲ್ಲಾ ವರ್ಗದ ಸಹಕಾರಿಗಳನ್ನು ಗುರುತಿಸಿ ಸಹಕಾರ ರತ್ನ ಪ್ರಶಸ್ತಿ ನೀಡಿದ್ದಾರೆ.ಇಂತಹ ಅಮೃತ ಮಹೋತ್ಸವ ಕಾರ್ಯಕ್ರಮ ಹಬ್ಬದ ರೀತಿಯಲ್ಲಿ ನಾವೆಲ್ಲರೂ ಮಾಡಬೇಕಾಗಿದೆ ಎಂದರು.
ಎಪಿಜೆ ಅಬ್ದುಲ್ ಕಲಾಂ ಪೌಂಡೇಷನ್ ಅಧ್ಯಕ್ಷ ನಿಸಾರ ಅಹಮದ ಮಾತನಾಡಿ,ಒಂದು ಬಡ ಕುಟುಂಬದಲ್ಲಿ ಹುಟ್ಟಿ ಇಷ್ಟು ಎತ್ತರಕ್ಕೆ ಬೆಳೆಯುವ ಮೂಲಕ ಇತರರಿಗೆ ಕೆ.ಎನ್.ರಾಜಣ್ಣ ಅವರು ಮಾದರಿಯಾಗಿದ್ದಾರೆ.ಅವರ ಪುತ್ರ ಆರ್.ರಾಜೇಂದ್ರ ಅವರು ಸಹ ತಂದೆಯ ಹಾದಿಯಲ್ಲಿಯೇ ನಡೆಯುತ್ತಿದ್ದು,ಇಂತಹ ಮಾದರಿ ವ್ಯಕ್ತಿಗಳ ಹುಟ್ಟ ಹಬ್ಬವನ್ನು ಎಲ್ಲಾ ಸಮುದಾಯದವರು ಒಗ್ಗೂಡಿ ಆಚರಿಸುತಿದ್ದಾರೆ.ಅದರಲ್ಲಿ ಮುಸ್ಲಿಂ ಸಮುದಾಯ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ.ಅವರಿಗೆ ಹೆಚ್ಚಿನ ಅಧಿಕಾರ ದೊರೆತರೆ ಅದು ಸಮುದಾಯಕ್ಕೂ ಸಹಕಾರಿಯಾಗಲಿದೆ.ಈ ನಿಟ್ಟಿನಲ್ಲಿ ಕಾರ್ಯಕ್ರಮದ ದಿನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ,ಕೆ.ಎನ್.ರಾಜಣ್ಣ ಅವರ ಜನಪ್ರಿಯತೆಗೋಸ್ಕರ ಈ ಕಾರ್ಯಕ್ರಮವಲ್ಲ. ಅವರ ಜನಪರ ಕಾಳಜಿಗೆ ಈ ಕಾರ್ಯಕ್ರಮ ಸಾಕ್ಷಿ. ಬಡವರ ಕೈ ಹಿಡಿದು ಮೇಲೆತ್ತುವ ಗುಣ ಕೆ.ಎನ್.ಆರ್. ಕುಟುಂಬದಲ್ಲಿದೆ. ಹಾಗಾಗಿ ಎಲ್ಲಾ ಸಮುದಾಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಎನ್.ಆರ್ ಮುಸ್ಲಿಂ ಹಿತೈಷಿಗಳ ಬಳಗದ ಫೈಯಾಜ್, ಜಬಿವುಲ್ಲಾ, ರಫಿವುಲ್ಲಾ, ಅಪ್ಸರ್ ಪಾಷ, ಸಾಧಿಕ್ ಪಾಷ,ಇಸ್ಮಾಯಿಲ್, ಇನಾಯತ್, ಶಿವಣ್ಣ,ಉಬೇದುಲ್ಲಾ, ಜಯಲಕ್ಷ್ಮಿ,ಮಹಮದ್ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.