ಮಡದಿಯ ಸುಪ್ರಭಾತ ದೊಂದಿಗೆ ಆಗಿತ್ತು ಬೆಳಗು ,
ನುಡಿಯುತ್ತಿದ್ದಳು ಆಕೆ ಏಳುವುದಿಲ್ಲ ಬೇಗ ನೀವು,
ಸಾಗುವುದಿಲ್ಲ ನನ್ನ ಮನೆಗೆಲಸ,
ನುಡಿಯುತ್ತಿದ್ದಳಾಕೆ ದಿನನಿತ್ಯದಂತೆ ನಾನಿದ್ದೆ ಸುಮ್ಮನೆ
ಏನೂ ಕೇಳಿಸದವನಂತೆ.
ಬೆಳಿಗೆದ್ದರೆ ಆಕೆಯದ್ದೇ ನೆನಪು
ಎಂದಿಗಾದರೂ ಸಿಗುವಳೇ ಅವಳು?
ಹೇಗೆ ಹೇಳಲಿ ಮಡದಿ ನಿನಗೆ ನಿನ್ನೀ ನೋವು,
ಬಸುರಾಗಿದ್ದೆ ನಾನು “ಕವನ” ದೊಂದಿಗೆ ನಾನು..
ಕಗ್ಗತ್ತಲಾ ರಾತ್ರಿಯಲ್ಲಿ.
ಮೂರು….ಆರು….. ಒಂಬತ್ತು.
ನವಮಾಸ ತುಂಬಿಹುದು ಹೆರಿಗೆಯ ಸಮಯ.
ತಾಳಲಾರೆ ನೋವು,ಸೂಲಗಿತ್ತಿಯು ಬರುವವರೆಗೆ,
ಇದ್ದುಬಿಡು ಮೌನದಿ ಹೆರಿಗೆಯಾಗುವರೆಗೆ,
ನಂತರ ಬಾಣಂತನ.
ನನ್ನ ಕವನ ನುಡಿದಿದ್ಧಳು
ಎಲ್ಲೆಂದರಲ್ಲಿ ಬಸುರ ಮಾಡುವೆ ನನ್ನ ,
ಹೆರಿಗೆಯೇಕೆ ಹಾಸಿಗೆಯಲ್ಲಿ
ನನಗೆ ನೋವಾದಿತೆಂದೆ, ಬಸುರಮಾಡಲು ಸುಂದರತಾಣವಾಗುವುದಿಲ್ಲವೇ? ನಿನಗೆ
ಸುಂದರ ಮಗುವಾದಿತೆಂಬ ಕಲ್ಪನೆಯು ನನಗೆ.
ಸುಂದರ ತಾಣಗಳಲ್ಲಿ ಕರೆದೊಯ್ದು
ಬಸುರ ಮಾಡುವ ಬಯಕೆ ಎನ್ನದು,
ಏನಮಾಡಲೀ ,”ಕವನ”ವೆಂಬ ಗೆಳತಿಯೇ,
ನಾನಿನ್ನ ಕರೆದೊಯ್ಯಲಾರೆ ಸುಂದರ ತಾಣಗಳಿಗೆ,
ನಾನು ಬರಿಗೈ ಪಕೀರ …ಹೋಗಲಿ ಬಿಡು,
ಸುಂದರ ತಾಣಗಳಲ್ಲಿ ಸುಂದರ ಮಗುವು ಹುಟ್ಟೀತೆಂಬ
ಕಲ್ಪನೆ, ನಂಬಕೆಯೇಕೆ? ನಿನಗೆ.
ಹುಟ್ಟುವುದು ಮಗುವು ನಮ್ಮಿಬ್ಬರ ಮಿಲನದಿ
ನಮ್ಮಿಬ್ಬರ ವಂಶವಾಹಿನಿಯೊಂದಿಗೆ,
ನುಡಿದಾಳಕೆ ವಾದಮಾಡಲಾರೆ ನಿನ್ನೊಂದಿಗೆ,
ಹುಟ್ಟಿಸಿದ ಮಕ್ಕಳ ಚೆಂದದ ಹೆಸರಾದರೂ ಇಡು
ಎಲ್ಲರಿಗೂ ಬರೀ “ಕವನ” ವೆಂಬ ಹೆಸರೇಕೆ? ಗುರುತಿಸುವುದೇಗೆ ,?”ಕವನ”ಎಂದು ಕರೆದರೆ ತಿರುಗಿನೋಡುವರೆಲ್ಲರೂ ಒಂದೊಳ್ಳೆ ಹೆಸರಿಡು.
ಒಪ್ಪಿಗೆಯಾಯಿತು ನಿನ್ನ ಸಲಹೆ,
ಆದರೆ… ಈಗಷ್ಟೇ ಹೆರಿಗೆಯಾಗಿ ಹುಟ್ಟಿದಾ ಮಗುವಿಗೆ?ಹೆಸರೇಗಿಡಲಿ? ಬಾಣಂತನ ಮುಗಿಸಿ ಬಾ
ತೊಟ್ಟಿಲಾ ಶಾಸ್ತ್ರದಲಿ ಹೆಸರಿಡುವೆ ಚಂದದೀ…
ಮಾತಿನಲಿ ನಿನ್ನ ಮೀರಿಸುವರುಂಟೆ ?
ಸರಿ ದೂರ, ಹೊತ್ತು ಮುಳುಗಿ ಕತ್ತಲು ಕವಿದಿವುದು,
ಹೋಗಬೇಕು ನಾನು, ನಿನ್ನ ಪ್ರೀತಿಯ ಭಾರ ಹೊತ್ತು, ಭಗವಂತನಲ್ಲಿ ಬೇಡಿಕೆಯೊಂದೆ ಕತ್ತಲು ಬೇಗ ಕಳೆಯಲಿ, ಬೆಳಕಾಗಲಿ ಬೇಗ ನನ್ನಿನಿಯನ ಕೂಡಲು,
ಯಾಕಿಷ್ಟು ತವಕ ಇರುಳಲ್ಲಿ ಕೂಡಬಾರದೇ ಒಮ್ಮೆ ಗೆಳತಿ…
ನಾನೆಂದೆ.? ಹೋಗೋ ನಾಳೆ ಮುಂಜಾನೆ ಸಿಗುವೆ.
ಎಂದುಮರೆಯಾದಳು ನನ್ನ” ಕವನ”
ನನ್ನ ನೆನಪಿನಂಗಳದಿಂದ, ದೂರ ಸರಿದು
ಹೊರಟೆ ನಾನೂ… ನಾಳೆ ಸಿಗುವಳೆಂಬ ನಂಬಿಕೆಯಿಂದ……
ಮತ್ತೆ ಸಿಗುವಳೆ ನಾಳೆ?…
ನನ್ನ “ಕವನ” ಹೊಸ ಹುರುಪಿನಿಂದ…
✍️ ರಾಮಚಂದ್ರ ಮೂಡಿಗೆರೆ