ತುಮಕೂರು: ಯುವತಿ ಮೇಲೆ ಅತ್ಯಾಚಾರವೆಸಗಿ ಆತ್ಮಹತ್ಯೆಗೆ ಕಾರಣನಾದ ಉಮೇಶನಾಯ್ಕನನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ಮೈತ್ರಿ ನ್ಯೂಸ್ ವರದಿ ಮಾಡಿದ್ದ, ಯುವತಿ ಮೇಲೆ ಅತ್ಯಾಚಾರವೆಸಗಿ ಆತ್ಮಹತ್ಯೆ ಗೆ ಕಾರಣನಾದ ಆರೋಪಿಯನ್ನು ಬಚಾವ್ ಮಾಡುತ್ತಿರುವ ಕೊರಟಗೆರೆ ಪೊಲೀಸರು ಎಂಬ ಸುದ್ದಿಯ ಹಿನ್ನಲೆಯಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೊರಟಗೆರೆ ಪೊಲೀಸ್ ಠಾಣೆಗೆ ಭೇಟಿ ನೀಡಿ, ಯುವತಿಯ ತಂದೆ ತಾಯಿ ಹೇಳಿಕೆ ಪಡೆದು, ಅತ್ಯಾಚಾರ ವೆಸಗಿ ಆತ್ಮಹತ್ಯೆ ಗೆ ಕಾರಣನಾದ ಉಮೇಶನಾಯ್ಕನನ್ನು ಬಂಧಿಸಲು ಆದೇಶಿಸಿದ ಹಿನ್ನಲೆಯಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಉಮೇಶನಾಯ್ಕನಿಗೆ ಬಚಾವ್ ಮಾಡಲು ಪ್ರಯತ್ನ ಪಟ್ಟ ಪೇದೆಗಳಾದ ಮೋಹನ್ ಕುಮಾರ್ ಮತ್ತು ಜಯಪ್ರಕಾಶ್ ಅವರನ್ನು ಅಮಾನತ್ತು ಮಾಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಸಬ್ ಇನ್ಸ್ ಸ್ಪೆಕ್ಟರ್ ಪ್ರದೀಪ್ ಅವರನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.