ತುಮಕೂರು : ನಗರದ ಎಂಜಿ ರಸ್ತೆಯಲ್ಲಿರುವ ಎನ್.ಎಸ್. ಮೆಡಿಕಲ್ ಸೆಂಟರ್ ಅಂಗಡಿಯ ಮಾಲೀಕರಾದ (94 ವರ್ಷ)ಎನ್ಎಸ್ ಅನಂತ್ ಅವರು ಇಂದು ನಿಧನ ಹೊಂದಿದರು.
ತುಮಕೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘಕ್ಕೆ 40 ವರ್ಷದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಮೂರು ಗಂಡು ಮಕ್ಕಳು ಎಲ್ಲರೂ ವಿದ್ಯಾಭ್ಯಾಸದ ನಂತರ ಪ್ರತ್ಯೇಕ ವ್ಯಾಪಾರ ವ್ಯವಹಾರಗಳನ್ನು ಮಾಡಿಕೊಂಡಿದ್ದಾರೆ. ನಗರದ ಸಿಎಸ್ಐ ಬಡಾವಣೆಯಲ್ಲಿ ವಾಸ. ತುಮಕೂರು ಜಿಲ್ಲೆಯ ಔಷದ ವ್ಯಾಪಾರಗಳ ಅಧ್ಯಕ್ಷ ಪದವಿ ಜೊತೆಗೆ ಕರ್ನಾಟಕ ರಾಜ್ಯ ಔಷದ ವ್ಯಾಪಾರ ಸಂಘಕ್ಕೆ ಉಪಾಧ್ಯಕ್ಷರಾಗಿ ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾಗಿದ್ದರು. ವೈಶ್ಯ ಕಮಿನಿಟಿಯಲ್ಲಿ ಮಂಚೂಣಿಯಲ್ಲಿರುವ ಎನ್ಎಸ್ ಅನಂತ್ ರವರು ಅಲ್ಲಿಯೂ ಸಹ ಸಾಕಷ್ಟು ಸೇವೆ ಸಲ್ಲಿಸಿದ್ದರು ಎಲ್ಲ ವ್ಯಾಪಾರಸ್ಥರ ಜೊತೆ ಆತ್ಮೀಯ ಸಂಬಂಧ ಹೊಂದಿ ಗೌರವಾನ್ವಿತ ವ್ಯಕ್ತಿಯಾಗಿದ್ದರು.
ಎನ್ಎಸ್ ಅನಂತ್, ನಗರದ ಎಂಜಿ ರಸ್ತೆಯಲ್ಲಿರುವ ಎನ್ಎಸ್ ಮೆಡಿಕಲ್ ಸೆಂಟರ್ ಅಂಗಡಿಯ ಮಾಲೀಕರು. ತುಮಕೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘಕ್ಕೆ 40 ವರ್ಷದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಮೂರು ಗಂಡು ಮಕ್ಕಳು ಎಲ್ಲರೂ ವಿದ್ಯಾಭ್ಯಾಸದ ನಂತರ ಪ್ರತ್ಯೇಕ ವ್ಯಾಪಾರ ವ್ಯವಹಾರಗಳನ್ನು ಮಾಡಿಕೊಂಡಿದ್ದಾರೆ. ನಗರದ ಸಿಎಸ್ಐ ಬಡಾವಣೆಯಲ್ಲಿ ವಾಸ. ತುಮಕೂರು ಜಿಲ್ಲೆಯ ಔಷದ ವ್ಯಾಪಾರಗಳ ಅಧ್ಯಕ್ಷ ಪದವಿ ಜೊತೆಗೆ ರ‍್ನಾಟಕ ರಾಜ್ಯ ಔಷದ ವ್ಯಾಪಾರ ಸಂಘಕ್ಕೆ ಉಪಾಧ್ಯಕ್ಷರಾಗಿ ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾಗಿದ್ದರು. ವೈಶ್ಯ ಕಮಿನಿಟಿಯಲ್ಲಿ ಮಂಚೂಣಿಯಲ್ಲಿರುವ ಎನ್.ಎಸ್.ಅನಂತ್ ರವರು ಅಲ್ಲಿಯೂ ಸಹ ಸಾಕಷ್ಟು ಸೇವೆ ಸಲ್ಲಿಸಿದ್ದರು ಎಲ್ಲ ವ್ಯಾಪಾರಸ್ಥರ ಜೊತೆ ಆತ್ಮೀಯ ಸಂಬಂಧ ಹೊಂದಿ ಗೌರವಾನ್ವಿತ ವ್ಯಕ್ತಿಯಾಗಿದ್ದರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಅನಂತ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಸಮಾಜ ಸೇವಕ ನಟರಾಜ್, ಸಿಂಧೂರ್ ನಾಗೇಶ್ ಮೃತರ ಅಂತಿಮ ದರ್ಶನ ಪಡೆದರು.
ಎನ್.ಎಸ್.ಪಂಡಿತ್ ಜವಾರ್ ಕಂಬನಿ :
ಈ ವಿಚಾರ ನಾನ್ ಹೇಗ್ ತಿಳಿಸ್ಬೇಕು ಅಂತಾನೆ ನನಗೆ ಗೊತ್ತಾಗ್ತಾ ಇಲ್ಲ. ತಡ್ಕೊಳ್ತಕ್ಕಂತಹ ಶಕ್ತಿ ಸಹ ನನಗೆ ಇಲ್ಲ. ನನ್ನ ಜೀವನದಲ್ಲಿ ನನ್ನ ಮನಸ್ಸಿನ ಮೇಲೆ ಅಚ್ಚೊತ್ತಿದ ವ್ಯಕ್ತಿಯನ್ನು ಈ ದಿನ ನಾವು ಕಳೆದುಕೊಂಡಿದ್ದೇವೆ. ಅವರ ಒಡನಾಟವಿಲ್ಲದೆ ನಾನು ಮುಂದೆ ಹೇಗಿರುತ್ತೇನೋ ಅನ್ನುವ ಕಲ್ಪನೆಯು ನನ್ನಲ್ಲಿಲ್ಲ ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿಯಾದ ಎನ್.ಎಸ್.ಪಂಡಿತ್ ಜವಾರ್ ಕಂಬನಿ ಮಿಡಿದಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ನಮ್ಮ ತುಮಕೂರು ಜಿಲ್ಲಾ ಔಷಧ ವ್ಯಾಪಾರಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ, ತುಮಕೂರು ನಗರದ ಎಂಜಿ ರಸ್ತೆಯ ಎನ್.ಎಸ್ .ಮೆಡಿಕಲ್ ಸೆಂಟರ್ ಅಂಗಡಿ ಮಾಲೀಕರಾಗಿದ್ದ, ಇಡೀ ರಾಜ್ಯದ ಮತ್ತು ಜಿಲ್ಲೆಯ ಔಷಧಿ ವ್ಯಾಪಾರಿಗಳಿಂದ ಪ್ರೀತಿಯಿಂದ ತಾತಾ ಎಂದು ಕರೆಸಿಕೊಳ್ಳುತ್ತಿದ್ದ ಎನ್.ಎಸ್.ಅನಂತ ರವರು ಇಂದು ನಮ್ಮೆಲ್ಲರನ್ನ ಬಿಟ್ಟು ಹೋಗಿದ್ದಾರೆ. ತುಮಕೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘವು ಎನ್.ಎಸ್.ಅನಂತರವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಎಂದು ಪಂಡಿತ್ ಜವಾರ್ ತಿಳಿಸಿದ್ದಾರೆ.