ತುಮಕೂರು : ಒಂದೂವರೆ ವರ್ಷಗಳ ನಂತರ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಒಟ್ಟು 6ಜನರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕಮಾಡಲಾಗಿದ್ದು ಮಹಿಳೆ,ಪರಿಶಿಷ್ಟ,ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ತಲಾ ಒಬ್ಬರಂತೆ ಮತ್ತು ಸಾಮಾನ ವರ್ಗಕ್ಕೆ ಇಬ್ಬರನ್ನು ನೇಮಕ ಮಾಡಲಾಗಿದೆ.
ತುಮಕೂರು ವಿಶ್ವವಿದ್ಯಾನಿಲಯದ ನಾಮನಿರ್ದೇಶಿತರನ್ನಾಗಿ ತುಮಕೂರು ತಾಲ್ಲೂಕಿನ ಶ್ರೀಮತಿ ಆರ್,ಪ್ರಿಯದರ್ಶಿನಿ(ಮಹಿಳೆ), ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೊಸಕೋಟೆ ಗ್ರಾಮದ ಹೆಚ್.ಎಸ್.ಅಶೋಕ(ಪರಿಶಿಷ್ಟ ಜಾತಿ), ತುಮಕೂರಿನ ಡಾ||ಫರಾನ ಬೇಗಂ (ಅಲ್ಪಸಂಖ್ಯಾತ), ಮಧುಗಿರಿ ತಾಲ್ಲೂಕಿನ ಎಂ.ಗೊಲ್ಲರಹಟ್ಟಿಯ ಡಾ.ಎಂ.ಜಿ.ಶಿವಣ್ಣ (ಹಿಂದುಳಿದ ವರ್ಗ), ದಾವಣಗೆರೆಯ ಮನೋಜ್.ಹೆಚ್.ಆರ್.(ಸಾಮಾನ್ಯ) ಮತ್ತು ಬೆಂಗಳೂರಿನ ಜಯನಗರದ ಡಾ||ಎಂ.ಎಸ್.ಪ್ರಕಾಶ್(ಸಾಮಾನ್ಯ) ಅವರುಗಳನ್ನು ನೇಮಕ ಮಾಡಲಾಗಿದೆ.
ಇವರ ಅವಧಿಯು ನೇಮಕಾತಿ ದಿನಾಂಕದಿಂದ ಮೂರು ವರ್ಷಗಳಾಗಿರುತ್ತದೆ.