ತುಮಕೂರು : ಗುರುಪ್ರಸಾದ್ ಕಂಟಲಗೆರೆಯವರ ನಾಟಿ ಹುಂಜ ಕಥಾ ಸಂಕಲನವು ಮೇ 19ರ ಸೋಮವಾರ ಬೆಳಿಗ್ಗೆ 11ಗಂಟೆಗೆ ಚಿಕ್ಕನಾಯಕನಹಳ್ಳಿ ತೀನಂಶ್ರೀ ಭವನದಲ್ಲಿ ಬಿಡುಗಡೆಯಾಗಲಿದೆ.
ಸಾನಿಧ್ಯವನ್ನು ಗೋಡೆಕೆರೆಯ ಶ್ರೀ ಮೃತ್ಯುಂಜಯ್ಯ ದೇಶಿಕೇಂದ್ರ ಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್‍ಬಾಬು ವಹಿಸಲಿದ್ದು, ಸಮಾರಂಭ ಉದ್ಘಾಟನೆಯನ್ನು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾಡುವರು.
ಪುಸ್ತಕ ಬಿಡುಗಡೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ.ಬಾಲಗುರುಮೂರ್ತಿ ಮಾಡಲಿದ್ದು, ಪುಸ್ತಕ ಕುರಿತು ಡಾ.ರವಿಕುಮಾರ್ ನೀಹ ಮಾತನಾಡಲಿದ್ದು, ಲೇಖಕರ ಕೃತಿಗಳ ಸಂಕ್ಷಿಪ್ತ ಪರಿಚಯವನ್ನು ಭಗತ್ ಸಿಂಗ್ ಕುಂದೂರು ಮಾಡಲಿದ್ದಾರೆ.