ತುಮಕೂರು: ಲೋಕಸಭಾ ಸಭಾ ಕ್ಷೇತ್ರದ ಎನ್.ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರು ಸೋಮವಾರ ಬಿಜೆಪಿ, ಜೆಡಿಎಸ್ ಮುಖಂಡರೊಂದಿಗೆ ತುಮಕೂರು ನಗರದಲ್ಲಿ ವ್ಯಾಪಕ ಮತಯಾಚನೆ ಮಾಡಿದರು. ಎಲ್ಲಾ ಕಡೆ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು, ನಾಗರೀಕರು ಸೋಮಣ್ಣ ಅವರನ್ನು ಸ್ವಾಗತಿಸಿ ಆತ್ಮೀಯತೆಯಿಂದ ಬರಮಾಡಿಕೊಂಡರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು, ಮಾಜಿ ಕಾರ್ಪೊರೇಟರ್ಗಳೊಂದಿಗೆ ಚುನಾವಣಾ ಪ್ರಚಾರ ಮಾಡಿದರು.
ದೇಶದ ಸಾರ್ವಭೌಮತ್ವ, ದೇಶದ ರಕ್ಷಣೆಗಾಗಿ, ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎನ್ನುವ ಕಾರಣಕ್ಕೆ ಈ ಚುನಾವಣೆ ಮಹತ್ವ ಪಡೆದಿದೆ. ಚುನಾವಣೆಯಲ್ಲಿ ತಮಗೆ ಮತ ನೀಡಿ ಆಯ್ಕೆ ಮಾಡುವ ಮೂಲಕ ಮೋದಿಯವರು ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಸಹಕರಿಸಬೇಕು ಎಂದು ಸೋಮಣ್ಣ ಮನವಿ ಮಾಡಿದರು.
ಬೆಳಿಗ್ಗೆ ಎನ್.ಆರ್.ಕಾಲೋನಿಯಲ್ಲಿ ದುರ್ಗಮ್ಮ, ಪೂಜಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿ.ಸೋಮಣ್ಣ ಅವರು ಚುನಾವಣಾ ಪ್ರಚಾರ ಯಾತ್ರೆ ಆರಂಭಿಸಿದರು. ನಂತರ ಎನ್.ಆರ್.ಕಾಲೋನಿಯ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮುಖಂಡರಾದ ಎಸ್.ಪಿ.ಚಿದಾನಂದ್, ಟಿ.ಎನ್.ಕುಂಭಣ್ಣ, ರವೀಶ್ ಜಹಂಗೀರ್, ಶ್ರೀನಿವಾಸಪ್ರಸಾದ್, ಟಿ.ಜಿ.ನರಸಿಂಹರಾಜು, ಹನುಮಂತರಾಯಪ್ಪ(ಹೆಚ್.ಆರ್), ನಗರ ಪಾಲಿಕೆ ಮಾಜಿ ಸದಸ್ಯರಾದ ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಅಂಜನಮೂರ್ತಿ, ಅಣೆತೋಟ ಶ್ರೀನಿವಾಸ್, ಗಂಗಾಧರ್ ಮೊದಲಾದವರು ಭಾಗವಹಿಸಿದ್ದರು. ನಂತರ ಹುರುಳಿತೋಟದ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದ ವಿ.ಸೋಮಣ್ಣ ಅವರು ಅಲ್ಲಿನ ನಿವಾಸಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.
ಇದಾದ ನಂತರ ಶಿರಾ ಗೇಟ್ನ ಕನಕ ವೃತ್ತದಲ್ಲಿ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಭಕ್ತಿ ನಮನ ಸಲ್ಲಿಸಿದ ಸೋಮಣ್ಣನವರು, ಸ್ಥಳೀಯರೊಂದಿಗೆ ಸಮಾಲೋಚನೆ ಮಾಡಿದರು. ಬಿಜಪಿ ಹಾಗೂ ಜೆಡಿಎಸ್ ಮುಖಂಡರು ಭಾಗವಹಿಸಿ ಸಿದ್ದರಾಮಯ್ಯನವರು ನಮ್ಮ ನಾಯಕರೇ ಇರಬಹುದು ದೇಶದ ಹಿತದೃಷ್ಟಿಯಿಂದ ತುಮಕೂರಿನ ಕುರುಬ ಸಮಾಜದವರು ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. ಈ ಬಾರಿ ಚುನಾವಣೆಯಲ್ಲಿ ತಮಗೆ ಮತ ನೀಡಿ ಚುನಾಯಿಸಬೇಕು ಎಂದು ಕೋರಿದರು. ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಟಿ.ಆರ್.ಆಂಜನಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಮುಖಂಡರಾದ ಬಿ.ಕೆ.ಮಂಜುನಾಥ್, ನಗರಪಾಲಿಕೆ ಮಾಜಿ ಸದ್ಯರಾದ ಇಂದ್ರಕುಮಾರ್, ಲಕ್ಷ್ಮೀನರಸಿಂಹರಾಜು, ಹೆಚ್.ಡಿ.ಕೆ.ಮಂಜುನಾಥ್, ಮಲ್ಲಿಕಾರ್ಜುನ್ ಮೊದಲಾದವರು ಭಾಗವಹಿಸಿದ್ದರು.
ಇದಾದ ನಂತರ ಅಗ್ರಹಾರದ ಕೋಟೆ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ನಡೆದ 4,5,6 ಮತ್ತು 7ನೇ ವಾರ್ಡ್ ನಾಗರೀಕರ ಸಭೆಯಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮುಖಂಡರಾದ ಎಸ್.ಪಿ.ಚಿದಾನಂದ್. ಬಿ.ಕೆ.ಮಂಜುನಾಥ್, ಡಾ.ಪರಮೇಶ್, ಶಿವಪ್ರಸಾದ್, ಟಿ.ಎನ್.ಕುಂಭಣ್ಣ, ಯಜಮಾನ್ ಶಿವಕುಮಾರ್, ಯಜಮಾನ್ ಮಂಜುನಾಥ್, ಗೋಪಾಲ್, ಬಾವಿಕಟ್ಟೆ ನಾಗಣ್ಣ, ರವೀಶ್ ಜಹಂಗೀರ್, ಟಿ.ಕೆ.ನರಸಿಂಹಮೂರ್ತಿ, ಮಹೇಶ್ಬಾಬು, ವಿನಯ್ ಜೈನ್, ಎ.ಶ್ರೀನಿವಾಸ್, ಹೆಚ್ಡಿಕೆ ಮಂಜುನಾಥ್, ವಿಜಯ್ಗೌಡ, ರಾಮಕೃಷ್ಣಪ್ಪ, ವೆಂಕಟಪ್ಪ ಇತರರು ಭಾಗವಹಿಸಿದ್ದರು.
ಈ ಕಾರ್ಯಕ್ರಮ ಮುಗಿಸಿ ಚಿಕ್ಕಪೇಟೆಯ ಶ್ರೀನಿವಾಸ ದೇವಸ್ಥಾನಕ್ಕೆ ಭೇಟಿ ನೀಡಿ ಸೋಮಣ್ಣ ಪೂಜೆ ಸಲ್ಲಿಸಿದರು. ಆ ನಂತರ ಶ್ರೀರಾಮ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಮಾಡಿ ಇಲ್ಲಿನ ಶ್ರೀರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.
ಮಧ್ಯಾಹ್ನ ಮುರುಘ ರಾಜೇಂದ್ರ ಭವನದಲ್ಲಿ ನಡೆದ ಚಿಂತಕರು, ಮುದ್ರಕರು, ಪ್ರಕಾಶಕರು, ಲೇಖಕರೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿದ್ದರು.
ಹೆಚ್.ನಿಂಗಯ್ಯರ ಬೆಂಬಲ ಕೋರಿದ ವಿ.ಸೋಮಣ್ಣ

ತುಮಕೂರು: ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕುಂಚಿಟಿಗ ಒಕ್ಕಲಿಗ ಸಮಾಜದ ಮುಖಂಡ ಹೆಚ್.ನಿಂಗಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರು. ಈ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನಗರದ ಆದರ್ಶ ನಗರದ ಹೆಚ್.ನಿಂಗಯ್ಯ ಅವರ ಮನೆಗೆ ಭೇಟಿ ನೀಡಿ ಬೆಂಬಲ ಕೋರಿದರು. ಈ ವೇಳೆ ಮಾತನಾಡಿದ ಹೆಚ್.ನಿಂಗಯ್ಯ, ಸೋಮಣ್ಣ ಅವರು ವಸತಿ ಸಚಿವರಾಗಿದ್ದಾಗ ಬಡವರಿಗೆ ಹೆಚ್ಚಿನ ಪ್ರಮಾಣದಲ್ಲಿ ಮನೆಗಳನ್ನು ನೀಡಿ ನೆರವಾಗಿದ್ದಾರೆ. ಆಸರೆ ನೀಡುವಂತಹ ಪುಣ್ಯದ ಕೆಲಸ ಮಾಡಿದ್ದೀರಿ, ಈ ಚುನಾವಣೆಯಲ್ಲಿ ಜನ ನಿಮ್ಮ ಕೈ ಹಿಡಿದು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮುಖಂಡರಾದ ದೊಡ್ಡಮನೆ ಗೋಪಾಲಗೌಡ, ಡಾ.ಪರಮೇಶ್, ದೊಡ್ಡಲಿಂಗಪ್ಪ, ತುಂಬಾಡಿ ದೇವರಾಜು, ಚೆನ್ನಿಗಪ್ಪ ಮೊದಲಾದವರು ಹಾಜರಿದ್ದರು.