ತುಮಕೂರು: ಅಂತರರಾಷ್ಟ್ರೀಯ ಸಂಬಂಧವೃದ್ಧಿ ಹಾಗೂ ಹೆಚ್ಚಿನ ಶೈಕ್ಷಣಿಕ ಸಹಯೋಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಮೇರಿಕಾದ ಪಿಟ್ಸ್‍ಬರ್ಗ್‍ನ ಡುಕ್‍ವೆಸೆನ್ ವಿಶ್ವವಿದ್ಯಾಲಯದೊಂದಿಗೆ ತುಮಕೂರಿನ ಸಾಹೇ-SSಂಊಇ (ಶ್ರೀ ಸಿದ್ಧಾರ್ಥ ಅಕಾಡೆಮಿಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯ ಪರಸ್ಪರ ನಡುವೆ ದ್ವೀಪಕ್ಷೀಯ ಒಡಂಬಡಿಕೆಗೆ ಮಾತುಕತೆ ನಡೆಸಲಾಗಿದೆ.
ಪರಸ್ಪರ ಒಡಂಬಡಿಕೆ ಹಿನ್ನಲೆಯಲ್ಲಿ ಅಮೇರಿಕಾದ ಡುಕ್‍ವೆಸೆನ್ ವಿಶ್ವವಿದ್ಯಾಲಯದ ನಿರ್ದೇಶಕ ಮೈಕೆಲ್ ಬರ್ಕ್ ಅವರು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಾಹೇ ವಿಶ್ವವಿದ್ಯಾಲಯದ ತುಮಕೂರು ಮತ್ತು ಟಿ.ಬೇಗೂರಿನ ಎರಡು ಪ್ರಮುಖ ಕ್ಯಾಂಪಸ್‍ಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತ್ತೀಕರಣಕ್ಕೆ ಪೂರಕವಾಗಿ ಕಲ್ಪಿಸಿರುವ ಸೌಲಭ್ಯಗಳನ್ನು ವೀಕ್ಷಿಸಿದರು.
ಪಾಲುದಾರಿಕೆ ಹಾಗೂ ಸಹಕಾರಕ್ಕೆ ಮನವಿ:
ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಮತ್ತು ನಿರ್ವಹಣೆಗಾಗಿ ಡುಕ್‍ವೆಸೆನ್ ವಿಶ್ವವಿದ್ಯಾಲಯದಲ್ಲಿರುವ ‘ಅಂತರರಾಷ್ಟ್ರೀಯ ವಿದ್ಯಾರ್ಥಿ ಸೇವಾ ಕೇಂದ್ರ’ ದೊಂದಿಗೆ ಭಾರತದ ಶಿಕ್ಷಣ ಸಂಸ್ಥೆಗಳ ಉತ್ಸಾಹ, ಸಹಕಾರ ಮತ್ತು ಪಾಲುದಾರರಿಕೆಯ ಮಾರ್ಗಗಳ ಕುರಿತು ಸಾಧಕ-ಭಾದಕಗಳ ಬಗ್ಗೆ ಚರ್ಚಿಸಲಾಯಿತು.
ಅಮೇರಿಕಾದ ಯುನಿಡೆಮಿ ಗ್ಲೋಬಲ್ ಅಧ್ಯಕ್ಷರಾದ ಡಾ.ಶಿವ ಉತ್ಲಾಸರ್ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಗಳ ನಿರ್ದೇಶಕರಾದ ಅನೂಪ್‍ಚಂದ್ ಯಾದವ್ ಅವರನ್ನು ಒಳಗೊಂಡ ನಿಯೋಗ ಸಾಹೇ ವಿವಿಯ ಟಿ.ಬೇಗೂರು ಮತ್ತು ತುಮಕೂರು ಕ್ಯಾಂಪಸ್‍ಗಳು ಭೇಟಿ ನೀಡಿ ಉಭಯ ವಿಶ್ವವಿದ್ಯಾಲಯಗಳ ನಡುವಿನ ಪಾಲುದಾರಿಕೆ ಮತ್ತು ಸಹಕಾರ ಕುರಿತಂತೆ ಪರಸ್ಪರ ಚರ್ಚೆಗಳನ್ನು ನಡೆಸಿತು.
ಭಾರತ ಮತ್ತು ಅಮೇರಿಕಾ ನಡುವಿನ ಶೈಕ್ಷಣಿಕ ಬಾಂಧವ್ಯವನ್ನು ಬಲಪಡಿಸುವ ಮೂಲಕ ಈ ಎರಡೂ ಸಂಸ್ಥೆಗಳಿಗೆ ಹೊಸ ಸಾಧ್ಯತೆಗಳು ಮತ್ತು ಅವಕಾಶಗಳನ್ನು ತೆರದಿಡುವ ನಿಟ್ಟಿನಲ್ಲಿ ಮೈಕೆಲ್ ಬರ್ಕ್ ಅವರ ಭೇಟಿಯು ಮಹತ್ವದ ಹೆಜ್ಜೆಯಾಗಿದೆ.
ಸಾಹೇ ಕಾರ್ಯಕ್ಕೆ ಮೆಚ್ಚುಗೆ:
ಶ್ರೀ ಸಿದ್ಧಾರ್ಥ ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ ಮೈಕೆಲ್ ಬರ್ಕ್ ಅವರು ಇಲ್ಲಿನ ಶೈಕ್ಷಣಿಕ ಸೌಲಭ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದರಲ್ಲದೆ, ಕೈಗೆಟುಕುವ ದರದಲ್ಲಿ ಹಿಂದುಳಿದ ಗ್ರಾಮೀಣ ಪ್ರದೇಶದ ಜನರಿಗೆ ಒದಗಿಸುತ್ತಿರುವ ಶೈಕ್ಷಣಿಕ ಸೇವೆಗಳು ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾನಿಲಯವು ಬೆಂಗಳೂರಿನ ಹೊರ ವಲಯದಲ್ಲಿದ್ದರೂ ತಾಂತ್ರಿಕ ಶಿಕ್ಷಣ ಮತ್ತು ಆರೋಗ್ಯವನ್ನು ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವ ಸೇವೆ ಶ್ಲಾಘನೀಯ ಮತ್ತು ಬದ್ಧತೆಯಿಂದ ಕೂಡಿದೆ ಎಂದು ನಿಯೋಗದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬರ್ಕ್ ಅವರು ಸಾಹೇ ವಿಶ್ವವಿದ್ಯಾನಿಲಯಕ್ಕೆ ಭೇಟಿ ಮಾಡಿದಾಗ ಸಾಹೇ ಕುಲಾಧಿಪತಿ ಹಾಗೂ ರಾಜ್ಯ ಗೃಹ ಸಚಿವರಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಹಾಗೂ ಉಪಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್, ಎರಡು ಕ್ಯಾಂಪಸ್‍ಗಳ ಪ್ರಾಂಶುಪಾಲರು ಮತ್ತು ವಿವಿಧ ತಂಡದ ಸದಸ್ಯರು ಹಾಜರಿದ್ದು ಮಾಹಿತಿ ಒದಗಿಸಿದರು.
ಸಭೆಯಲ್ಲಿನ ಮಾತುಕತೆಗಳು:
ವಿದೇಶಿ ಅಧ್ಯಯನ ಕಾರ್ಯಕ್ರಮದ ಮೂಲಕ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಸಾಹೇ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶೈಕ್ಷಣಿಕ ಅನುಭವವನ್ನು ನೀಡುವುದು. ಅದೇ ರೀತಿ ಅಮೇರಿಕಾದ ವಿದ್ಯಾರ್ಥಿಗಳಿಗೆ ಶ್ರೀ ಸಿದ್ಧಾರ್ಥ ವಿಶ್ವವಿದ್ಯಾಲಯದ ಕ್ಯಾಂಪಸ್‍ಗಳಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿ, ಪರಸ್ಪರ ಎರಡು ವಿವಿಗಳ ಪರಿಧಿಯನ್ನು ವಿಸ್ತರಿಸುವುದಲ್ಲದೆ, ವಿಭಿನ್ನ ಪರಿಸರ-ಸಾಂಸ್ಕøತಿಕ ತಿಳುವಳಿಕೆಯನ್ನು ಬೆಳೆಸುವುದಕ್ಕೆ ಒತ್ತು ನೀಡಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಶ್ರೀ ಸಿದ್ಧಾರ್ಥ ವಿಶ್ವವಿದ್ಯಾನಿಲಯದಲ್ಲಿ ಅಂತರರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸುವ ಅಗತ್ಯವನ್ನು ಸಹ ಒತ್ತಿ ಹೇಳಲಾಯಿತು. ಈ ಕೇಂದ್ರವು ಅಂತರಾಷ್ಟ್ರೀಯ ವಿನಿಮಯ ಕಾರ್ಯಕ್ರಮಗಳಿಗೆ ಪ್ರಧಾನ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಇಲ್ಲಿನ ವೈವಿಧ್ಯತೆಯನ್ನು ಪೋಷಿಸುವುದಕ್ಕೆ ಮತ್ತು ಸೌಲಭ್ಯಗಳನ್ನು ಒದಗಿಸುವ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂವಾದಗಳ ವೇದಿಕೆಯಾಗಲಿದೆ ಎಂಬ ಅಂಶವನ್ನು ಸಭೆಯಲ್ಲಿ ವಿವರಿಸಲಾಯಿತು. ಇಂಗ್ಲೀμï ಭಾμÁ ಪ್ರಾವೀಣ್ಯತೆಯ ಮಹತ್ವವನ್ನು ಗುರುತಿಸಿ, ಈ ಬಗ್ಗೆ ಚರ್ಚೆಸುವ ಕುರಿತು ಗಮನ ಹರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳ ಭಾμÁ ಕೌಶಲ್ಯವನ್ನು ಹೆಚ್ಚಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಉದ್ಯೋಗಾವಕಾಶಗಳನ್ನು ಸೃಷ್ಠಿಸುವ ಬಗ್ಗೆ ಅಧ್ಯಾಪಕರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಯೋಜನೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ವಿದ್ಯಾರ್ಥಿಗಳು ಕೋರ್ಸ್ ಮುಗಿಸಿದ ನಂತರ ಉದ್ಯೋಗ ಪಡೆದುಕೊಳ್ಳಲು ಅಗತ್ಯವಾದ ಮಾಹಿತಿ ಮತ್ತು ಸಂಪನ್ಮೂಲಗಳೊಂದಿಗೆ ಅವರನ್ನು ಸಜ್ಜುಗೊಳಿಸುವುದಕ್ಕೆ ಗಮನ ಹರಿಸಲಾಯಿತು.
ಅಂತರಾಷ್ಟ್ರೀಯ ಶಿಕ್ಷಣದ ಪ್ರಾಮುಖ್ಯತೆ ಮತ್ತು ಅಸ್ತಿತ್ವದಲ್ಲಿರುವ ಶೈಕ್ಷಣಿಕ ಚೌಕಟ್ಟಿಗೆ ಇನ್ನಷ್ಟು ಮೌಲ್ಯವನ್ನು ತರುವತ್ತ ಗಮನ ಹರಿಸಬೇಕಾದ ಮಹತ್ವವನ್ನು ಸಾಹೇ ಕುಲಾಧಿಪತಿ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಫಾರ್ಮಸಿ, ಬಿಸಿನೆಸ್, ಇಂಜಿನಿಯರಿಂಗ್, ಶುಶ್ರೂμÉ, ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಮತ್ತು ಪಾಲುದಾರಿಕೆಯನ್ನು ಉತ್ತೇಜಿಸುವುದಕ್ಕೆ ಹೆಚ್ಚು ಒತ್ತು ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಾಹೇ ಉಪಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ ಅವರು ತಿಳಿಸಿದ್ದಾರೆ.