ತುಮಕೂರು : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಿದ್ದೇವೆ ಇದಕ್ಕಾಗಿ ವಿಶೇಷ ಕೋರ್ಟ್ ಅನ್ನು ರಚಿಸುತ್ತೇವೆ ಎಂದು ತಿಳಿಸಿದರು.
ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಬಿಜೆಪಿಯು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದನ್ನು ತೀವ್ರಾವಾಗಿ ಖಂಡಿಸುವುದಾಗಿ ತಿಳಿಸಿದ ಗೃಹ ಸಚಿವರು, ಕೊಲೆಗಾರನನ್ನು ಒಂದೇ ಗಂಟೆಯಲ್ಲಿ ಬಂಧಿಸಿ ತನಿಖೆ ನಡೆಸುತ್ತಿದ್ದು, ಈ ಘಟನೆಯನ್ನು ಬಿಜೆಪಿಯವರು ರಾಜಕೀಯ ಬಣ್ಣ ಕಟ್ಟಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ನೇಹಳ ತಂದೆ ತಾಯಿಗೆ ನಮ್ಮ ಹೇಳಿಕೆಯಿಂದ ನೋವಾಗಿದ್ದರೆ ವಿಷಾದವನ್ನು ವ್ಯಕ್ತ ಪಡಿಸುತ್ತೇನೆ ಎಂದು ಹೇಳಿದ್ದೇನೆ ಎಂದರು.
ಬಿಜೆಪಿಯವರು ಮುಖ್ಯಮಂತ್ರಿ ಮತ್ತು ನನ್ನ ಹೇಳಿಕೆಯ ಬಗ್ಗೆ ಬಹಳ ಕೀಳಾಗಿ, ಕಟುವಾಗಿ ಪ್ರತಿಕ್ರಿಯನ್ನು ಬಿಜೆಪಿಯವರು ಮಾಡುತ್ತಿದ್ದಾರೆ, ಅದು ಅವರಿಗೆ ಇರತಕ್ಕಂತಹ ಸಂಸ್ಕøತಿಯನ್ನು ತೋರಿಸುತ್ತದೆ, ಇದನ್ನು ರಾಜಕೀಯಕ್ಕೆ ಬಳಸುತ್ತಾರೆಂದರೆ ಅವರಿಗೆ ಬಹಳ ನಿರಾಸೆಯಾಗಿದೆ, ಭಯ ಆಗಿದೆ ಏಕೆಂದರೆ ಅವರು ಚುನಾವಣೆಯಲ್ಲಿ ಸೋಲುತ್ತೇವೆಂದು ಎಂದು ಹೇಳಿದರು.
ನನಗೆ ವಿಶ್ವಾಸವಿದೆ ಅವರ ತಂದೆ-ತಾಯಿಗಳು ಈ ಕೊಲೆಯ ಹಿಂದೆ ಇನ್ನೂ ನಾಲ್ಕು ಜನ ಇದ್ದಾರೆ ಎಂದು ಹೇಳಿದ್ದಾರೆ ಅದೇನೆ ವಿಚಾರವಿದ್ದರೂ ಕೂಡ ಅದನ್ನು ತನಿಖೆ ಮಾಡಿ ಸಿಓಡಿಯವರು ಸರ್ಕಾರಕ್ಕೆ ವರದಿಯನ್ನು ಒಪ್ಪಿಸುತ್ತಾರೆ, ವರದಿಯನ್ನು 10ರಿಂದ 12 ದಿವಸದಲ್ಲಿ ಸರ್ಕಾರಕ್ಕೆ ಕೊಡಬೇಕೆಂದು ನಿಗದಿ ಮಾಡಿದ್ದೇವೆ, ಹೆಚ್ಚು ಸಮಯ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದರು.
ಈ ತನಿಖೆಯಿಂದ ಆ ತಂದೆ-ತಾಯಿಗಳಿಗೆ ನ್ಯಾಯ ಸಿಗುವ ರೀತಿಯಲ್ಲಿ ತನಿಖೆ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.